ನ್ಯೂಸ್ ನಾಟೌಟ್: ಜಾಗದ ವಿಚಾರದಲ್ಲಿ ಗಲಾಟೆ ನಡೆದು ಅಕ್ರಮವಾಗಿ ಮನೆಯಂಗಳಕ್ಕೆ ನುಗ್ಗಿ ಜೀವ ಬೆದರಿಕೆಯೊಡ್ಡಿದ ದೂರು ಬೆಳ್ತಂಗಡಿ ತಾಲೂಕು ಹೊಸಂಗಡಿ ಗ್ರಾಮದ ಹಲಕ್ಕೆ ಎಂಬಲ್ಲಿ ನಡೆದಿದೆ. ಈ ಕುರಿತಂತೆ ಅಕ್ಷತಾ (34 ವರ್ಷ) ವೇಣೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಏನಿದೆ ದೂರಿನಲ್ಲಿ..?
ಆರೋಪಿ ವಿಠಲ ಸಿ ಪೂಜಾರಿ ಎಂಬವರ ಪ್ರಚೋದನೆಯಿಂದ, 2 ನೇ ಮತ್ತು 3ನೇ ಆರೋಪಿಗಳಾದ ಪ್ರಸಾದ್ ಪೂಜಾರಿ, ಉದಯ ಪೂಜಾರಿ ಎಂಬವರುಗಳು, ದಿನಾಂಕ 08.12.2023 ರಂದು ರಾತ್ರಿ ಬೆಳ್ತಂಗಡಿ ತಾಲೂಕು ಹೊಸಂಗಡಿ ಗ್ರಾಮದ ಹಲಕ್ಕೆಯಲ್ಲಿರುವ ನಮ್ಮ ಮನೆಗೆ ಅಕ್ರಮವಾಗಿ ಪ್ರವೇಶಿಸಿದ್ದಾರೆ. ನನ್ನ ಗಂಡನನ್ನು ವಿಚಾರಿಸಿ ಆತನು ಜಾಗದ ವಿಚಾರದಲ್ಲಿ ತಂಟೆಗೆ ಬಂದಲ್ಲಿ ಆತನನ್ನು ಜೀವಸಹಿತ ಬದುಕಲು ಬಿಡುವುದಿಲ್ಲ ಎಂದು ಬೈದು ಜೀವ ಬೆದರಿಕೆ ಹಾಕಿ ಅವ್ಯಾಚವಾಗಿ ಬೈದಿರುವುದಾಗಿ ತಿಳಿಸಿದ್ದಾರೆ. ಇದೀಗ ಪೊಲೀಸರು ಅ.ಕ್ರ 78/2023 ಕಲಂ: 447,504,509,506,109 ಜೊತೆಗೆ 34 ಐಪಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.