ನ್ಯೂಸ್ ನಾಟೌಟ್ : ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ (Giorgia Meloni) ವಿವಾದಾತ್ಮಕ ಹೇಳಿಕೆ ಈಗ ಎಲ್ಲೆಡೆ ಸುದ್ದಿಯಾಗುತ್ತಿದ್ದು, ಇಸ್ಲಾಮ್ಗೆ (Islam) ಯುರೋಪ್ನಲ್ಲಿ ಜಾಗವಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಇಸ್ಲಾಮಿಕ್ ಸಂಸ್ಕೃತಿ ಮತ್ತು ಯುರೋಪಿಯನ್ ನಾಗರಿಕತೆಯ ಮೌಲ್ಯಗಳ ನಡುವೆ ಹೊಂದಾಣಿಕೆಯ ಸಮಸ್ಯೆ ಇದೆ ಎಂದು ಬ್ರದರ್ಸ್ ಆಫ್ ಇಟಲಿ ಪಕ್ಷ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೇಳಿದ ಇಟಲಿ ಪ್ರಧಾನಿ ಅದನ್ನು ಸಮರ್ಥಿಸಿಕೊಂಡಿದ್ದಾರೆ.
ಮೆಲೋನಿ ಈ ಬಲಪಂಥೀಯ, ಸಂಪ್ರದಾಯವಾದಿ ಪಕ್ಷಕ್ಕೆ ಸೇರಿದವರಾಗಿದ್ದಾರೆ ಎನ್ನಲಾಗಿದ್ದು, ಕಾರ್ಯಕ್ರಮದಲ್ಲಿ ಬ್ರಿಟನ್ ಪ್ರಧಾನಿ ರಿಷಿ ಸುನಕ್ (UK PM Rishi Sunak) ಮತ್ತು ಬಿಲಿಯನೇರ್ ಎಲಾನ್ ಮಸ್ಕ್ (Elon Musk) ಭಾಗವಹಿಸಿದ್ದರು.
ಇಸ್ಲಾಮಿಕ್ ಸಂಸ್ಕೃತಿಯ ಕೆಲವು ವ್ಯಾಖ್ಯಾನಗಳು ಮತ್ತು ನಮ್ಮ ನಾಗರಿಕತೆಯ ಹಕ್ಕುಗಳು ಹಾಗೂ ಮೌಲ್ಯಗಳ ನಡುವೆ ಹೊಂದಾಣಿಕೆಯ ಸಮಸ್ಯೆ ಇದೆ. ಇಟಲಿಯಲ್ಲಿನ ಹೆಚ್ಚಿನ ಇಸ್ಲಾಮಿಕ್ ಸಾಂಸ್ಕೃತಿಕ ಕೇಂದ್ರಗಳು ಸೌದಿ ಅರೇಬಿಯಾದಿಂದ ಹಣಕಾಸು ಪಡೆಯುತ್ತವೆ ಎಂಬುದು ನನಗೆ ಗೊತ್ತಿದೆ ಎಂದು ಹೇಳಿದ ಮೆಲೋನಿ ಧರ್ಮದ ಕುರಿತ ಟೀಕೆ ಹಾಗೂ ಸಲಿಂಗಕಾಮಗಳ ಕುರಿತು ಸೌದಿ ಅರೇಬಿಯಾದ ಕಠಿಣ ಷರಿಯಾ ಕಾನೂನನ್ನು ಟೀಕಿಸಿದರು.
“ಸಾಮಾನ್ಯವಾಗಿ ಇಸ್ಲಾಮಿಕ್ ಕಾನೂನು ಎಂದು ಕರೆಯಲ್ಪಡುವ ಷರಿಯಾ ಕಾನೂನು, ಇಸ್ಲಾಂ ಧರ್ಮದ ಮೂಲಭೂತ ಧಾರ್ಮಿಕ ಪಠ್ಯಗಳಾದ ಕುರಾನ್ ಮತ್ತು ಹದೀಸ್ನಲ್ಲಿರುವ ನಿಬಂಧನೆಗಳ ಪ್ರಕಾರ ಶಿಕ್ಷೆಗಳನ್ನು ವಿಧಿಸುತ್ತದೆ. ಷರಿಯಾದ ಪ್ರಕಾರ ವಿವಾಹೇತರ ಸಂಬಂಧ, ಧರ್ಮಭ್ರಷ್ಟತೆ ಮತ್ತು ಸಲಿಂಗಕಾಮಕ್ಕೆ ಮರ* ಣದಂಡನೆ ವಿಧಿಸಲಾಗುತ್ತದೆ. ಈ ವಿಚಾರವನ್ನು ಇಂದು ನಾವು ವಿಮರ್ಶಿಸಬೇಕು. ಅಂದರೆ ಇಸ್ಲಾಂ ಧರ್ಮವನ್ನು ಜನರಲೈಸ್ ಮಾಡುವುದು ಎಂದರ್ಥವಲ್ಲ. ಈ ಮೂಲಕ ಯುರೋಪ್ನ ನಾಗರಿಕತೆಯ ಮೌಲ್ಯಗಳಿಗೂ ಇಸ್ಲಾಮ್ನ ಮೌಲ್ಯಗಳಿಗೂ ಬಹುದೂರವಿದೆ ಎಂಬುದನ್ನು ನಾವು ತಿಳಿಯಬೇಕು ಹಾಗಾಗಿ, ಇಸ್ಲಾಮ್ಗೆ (Islam) ಯುರೋಪ್ನಲ್ಲಿ ಜಾಗವಿಲ್ಲ ಎಂದು ನಾನು ಹೇಳಬಯಸುತ್ತೇನೆ” ಎಂದು ಹೇಳಿಕೆ ನೀಡಿದ್ದಾರೆ.