ನ್ಯೂಸ್ ನಾಟೌಟ್: “ಚನಿಯಪ್ಪಣ್ಣನಿಗೊಂದು ಕೃತಕ ಕಾಲು ಕೊಡಿಸುವಿರಾ..?” ಬಡತನದ ಬೇಗೆಯಲ್ಲಿರುವ ಕುಟುಂಬಕ್ಕಾಗಿ ಸಹಾಯ ಹಸ್ತದ ನ್ಯೂಸ್ ನಾಟೌಟ್ ಕನ್ನಡ ಡಿಜಿಟಲ್ ಮಾಧ್ಯಮದ ಮನವಿಗೆ ಭಾರಿ ಸಂಖ್ಯೆಯಲ್ಲಿ ಜನ ಬೆಂಬಲ ದೊರೆತಿದೆ. ನ್ಯೂಸ್ ನಾಟೌಟ್ ಫೇಸ್ ಬುಕ್ ಪುಟದಲ್ಲಿ 19 ಸಾವಿರಕ್ಕೂ ಅಧಿಕ ವೀಕ್ಷಕರು ವಿಡಿಯೋ ವೀಕ್ಷಿಸಿದ್ದಾರೆ. ಕಷ್ಟಕ್ಕೆ ಸ್ಪಂದಿಸಿದ್ದಾರೆ. ಭರವಸೆಗಳನ್ನು ನೀಡಿದ್ದಾರೆ.
ಕಳೆದೊಂದು ವರ್ಷಗಳ ಹಿಂದೆ ಸುಳ್ಯ ತಾಲೂಕಿನ ದೊಡ್ಡಡ್ಕದ ಚನಿಯಪ್ಪ ಅವರ ಕಾಲನ್ನು ವೈದ್ಯರು ಕತ್ತರಿಸಿ ತೆಗೆದಿದ್ದರು. ಕಾಲು ಕೊಳೆತು ಹೋಗಿತ್ತು. ಈ ಕಾರಣದಿಂದ ಜೀವಕ್ಕೇ ಅಪಾಯವಾಗುವ ಸಾಧ್ಯತೆ ಇದ್ದುದರಿಂದ ಕಾಲನ್ನು ಕತ್ತರಿಸಿ ತೆಗೆಯಬೇಕಾಯಿತು.
ಇಂಥಹ ಸ್ಥಿತಿಯಲ್ಲಿ ಅವರಿಗೆ ಮತ್ತೆ ಕೂಲಿ ಕೆಲಸಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಮುಂದಿನ ಜೀವನಕ್ಕೆ ಕಷ್ಟವಾಯಿತು. ಪತ್ನಿ, ಮಗ ಕೂಲಿ ಕೆಲಸಕ್ಕೆ ಹೋಗಿ ಜೀವನ ನಡೆಸಬೇಕಾಯಿತು. ಇವರಿಗೊಂದು ಕೃತಕ ಕಾಲು ಬೇಕು ಯಾರಾದರೂ ದಾನಿಗಳಿದ್ದರೆ ಸಹಾಯ ಮಾಡಿಸುತ್ತೀರಾ ಎಂದು ನ್ಯೂಸ್ ನಾಟೌಟ್ ಬಳಿ ಮನವಿ ಮಾಡಿಕೊಂಡಿದ್ದರು.
ಇವರ ಮನವಿಗೆ ತುರ್ತಾಗಿ ಸ್ಪಂದಿಸಿ ನಾವು ಸ್ಟೋರಿ ಮಾಡಿದ್ದೆವು. ನಮ್ಮ ಸ್ಟೋರಿಗೆ ವ್ಯಾಪಕ ಸ್ಪಂದನೆ ದೊರೆದಿದೆ. ಶಿವಮೊಗ್ಗದಿಂದ ಶಿವಕುಮಾರ್, ಹೈದರಾಬಾದ್ ನಿಂದ ರಾಜ್ ಕುಮಾರ್ ,ಸಂಪಾಜೆಯಿಂದ ಸುಬ್ರಹ್ಮಣ್ಯ, ಬಂಟ್ವಾಳದಿಂದ ಬಾಲಕೃಷ್ಣ, ಮೈಸೂರಿನಿಂದ ಸಂದೇಶ್ ಡಿಸೋಜಾ, ಬೆಂಗಳೂರು, ಹಾಸನದಿಂದಲೂ ಸಹೃದಯಿ ಬಂಧುಗಳು ಮುಂದೆ ಬಂದು ಕೃತಕ ಕಾಲು ಹಾಗೂ ಆ ಕುಟುಂಬಕ್ಕೆ ಅಗತ್ಯ ಆರ್ಥಿಕ ನೆರವು ನೀಡುವುದಕ್ಕೆ ಮುಂದೆ ಬಂದಿದ್ದಾರೆ. ನಮ್ಮ ಮನವಿಗೆ ಕ್ಷಿಪ್ರವಾಗಿ ಸ್ಪಂದಿಸಿದ ಎಲ್ಲ ವೀಕ್ಷಕ ಬಂಧುಗಳಿಗೆ ನಾವು ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇವೆ