ನ್ಯೂಸ್ ನಾಟೌಟ್ :ವೈದ್ಯರನ್ನು ನಾವು ವಿಶೇಷ ಗೌರವದಿಂದಲೇ ನೋಡುತ್ತೇವೆ.ಏಕೆಂದರೆ ನಮ್ಮ ಆರೋಗ್ಯ ಕಾಪಾಡುವಲ್ಲಿ ಅವರ ಪಾತ್ರ ಪ್ರಮುಖವಾಗಿರುತ್ತೆ.ಸ್ವಲ್ಪ ಆರೋಗ್ಯ ಹದಗೆಟ್ಟರೂ ವೈದ್ಯರಲ್ಲಿಗೆ ಹೋಗಿ ಬಂದ್ರೆ ಏನೋ ಒಂದು ಸಮಾಧಾನ.ಅಲ್ಲಿಯವರೆಗೆ ಅವರನ್ನು ನಾವು ಅವಲಂಬಿಸಿದ್ದೇವೆ.ಅದೊಂದು ಮಾತಿದೆ. ‘ವೈದ್ಯೋ ನಾರಾಯಣೋ ಹರಿಃ’ ಎಂದು. ವೈದ್ಯನಾದವನು ದೇವರಿಗೆ ಸಮಾನ.ಆದರೆ ಇಲ್ಲೊಬ್ಬ ವೈದ್ಯ ಏನು ಮಾಡಿದ್ದಾನೆ ನೋಡಿ..
ಹೌದು, ಈ ವೈದ್ಯ ಹೆರಿಗೆ ಮಾಡಿಸಲು ಲಂಚಕ್ಕೆ ಬೇಡಿಕೆಯಿಟ್ಟ ಪ್ರಕರಣವೊಂದು ಬೆಳಕಿಗೆ ಬಂದಿದೆ. ಆತನನ್ನು ಇದೀಗ ಲೋಕಾಯುಕ್ತರು ಬಂಧಿಸಿದ್ದಾರೆ.ತುಮಕೂರು ಜಿಲ್ಲೆ ತುರುವೇಕೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಘಟನೆ ನಡೆದಿದೆ. ಡಾ. ಹರಿಪ್ರಸಾದ್ (44) ಎಂಬ ವೈದ್ಯನನ್ನು ಲೋಕಾಯುಕ್ತ ಪೊಲೀಸರ ಅರೆಸ್ಟ್ ಮಾಡಿದ್ದಾರೆ. ಈತ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ.
ತುರುವೇಕೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಡಳಿತ ವೈಧ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ.ಹರಿಪ್ರಸಾದ್ ಮಹಿಳೆಯೊಬ್ಬರಿಗೆ ಹೆರಿಗೆ ಮಾಡಿಸಲು 3 ಸಾವಿರ ಹಣಕ್ಕೆ ಡಿಮ್ಯಾಡ್ ಇಟ್ಟಿದ್ದ. ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಿದ್ದ ಮಹಿಳೆ ಸಂಬಂಧಿ ನಿನ್ನೆ ಸಂಜೆ ಲಂಚದ ಹಣ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾನೆ.ಲೋಕಾಯುಕ್ತ ಇನ್ ಸ್ಪೆಕ್ಟರ್ ರಾಮ ರೆಡ್ಡಿ, ಸಲೀಂ ಅಹ್ಮದ್, ಶಿವರುದ್ರಪ್ಪ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಸದ್ಯ ವೈದ್ಯ ಡಾ.ಹರಿಪ್ರಸಾದ್ನನ್ನ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.