ನ್ಯೂಸ್ ನಾಟೌಟ್ :ಅಲ್ಪಸಂಖ್ಯಾತರ ಹುಡುಗಿಯರ ಹಾಸ್ಟೆಲ್ನ ಬಾತ್ ರೂಮ್ನಲ್ಲಿ ಕಾಮುಕನೊಬ್ಬ ಮೊಬೈಲ್ ಕ್ಯಾಮೆರಾ ಇಟ್ಟು ವಿಡಿಯೋ ಮಾಡಿದಂತಹ ಘಟನೆಯೊಂದು ವರದಿಯಾಗಿದೆ. ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣದ ಶಾಂತನಗರ ಎಂಬಲ್ಲಿ ಘಟನೆ ಬೆಳಕಿಗೆ ಬಂದಿದ್ದು, ಸಲೀಂ ಎನ್ನುವ ಕಾಮುಕನೇ ಈ ಹೇಯ ಕೃತ್ಯ ಎಸಗಿದಾತ ಎಂದು ತಿಳಿದು ಬಂದಿದೆ.
ಹಾಸ್ಟೇಲ್ನಲ್ಲಿ ಬಾತ್ ರೂಮ್ನಲ್ಲಿ ಕ್ಯಾಮರಾ ಇರೋದನ್ನು ನೋಡಿ ಕೆಲವು ವಿದ್ಯಾರ್ಥಿನಿಯರಿಗೆ ಈ ಅನುಮಾನ ಮೂಡಿದೆ.ಇದನ್ನು ಕಂಡು ಗಾಬರಿಗೊಂಡ ಬಾಲಕಿಯರು ವಾರ್ಡನ್ಗೆ ಮಾಹಿತಿ ಕೊಟ್ಟಿದ್ದಾರೆ.ಆಗ ಪರಿಶೀಲಿದಾಗ ಹಾಸ್ಟೆಲ್ ಪಕ್ಕದಲ್ಲಿಯೇ ಬಾಡಿಗೆಗೆ ರೂಂ ಪಡೆದಿದ್ದ ಸಲೀಂ ಹಾಸ್ಟೆಲ್ನ ಬಾತ್ರೂಮ್ನ ಕಿಟಕಿಯಿಂದ ಪೈಪ್ ಬಳಸಿ ಅದಕ್ಕೆ ವೈಫೈ ಕ್ಯಾಮೆರಾ ಅಳವಡಿಸಿದ್ದ ಎಂದು ಮೂಲಗಳಿಂದ ಮಾಹಿತಿ ತಿಳಿದುಬಂದಿದೆ.
ಇನ್ನು ಸ್ಥಳೀಯರ ಸಹಾಯದಿಂದ ಸಲೀಂ ಎಸ್ಕೇಪ್ ಆಗಿದ್ದ ಎನ್ನಲಾಗಿದೆ. ಆದರೆ ಜೇವರ್ಗಿ ತಹಶೀಲ್ದಾರ ಹಾಗೂ ಜೇವರ್ಗಿ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿರುವುದರಿಂದ ಸ್ಥಳಕ್ಕೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಸಲೀಂ ಕುಟುಬಸ್ಥರನ್ನು ವಿಚಾರಿಸಿದಾಗ ಎಸ್ಕೇಪ್ ಆಗಿದ್ದ ಸಲೀಂನನ್ನು ಕುಟುಂಬಸ್ಥರೇ ಹಿಡಿದು ಠಾಣೆಗೆ ತಂದು ಒಪ್ಪಿಸಿದ್ದಾರೆ.ಪ್ರಕರಣದ ಕುರಿತು ದೂರು ದಾಖಲಿಸಿಕೊಂಡಿರುವ ಜೇವರ್ಗಿ ಪೊಲೀಸರು ಆರೋಪಿಯ ವಿಚಾರಣೆ ನಡೆಸಿದ್ದಾರೆ.