ಮತ್ತೆ ಹೆಚ್ಚಿತಾ ಕೋವಿಡ್ ಪ್ರಕರಣ..? ದೇಶದ ಒಟ್ಟು ಪ್ರಕರಣಗಳ ಪೈಕಿ 90% ಕೇರಳದಲ್ಲೇ ದಾಖಲಾಗಿದ್ಯಾಕೆ?

ನ್ಯೂಸ್ ನಾಟೌಟ್: ಕೇರಳ (Kerala) ರಾಜ್ಯದಲ್ಲಿ ಕೊರೊನಾ (Corona) ಪಾಸಿಟಿವ್ ಪ್ರಕರಣ ಹೆಚ್ಚಾಗುತ್ತಿದ್ದು ಕರ್ನಾಟಕದ ಗಡಿಭಾಗದಲ್ಲೂ ಆತಂಕ ಹೆಚ್ಚಾಗಿದೆ ಎಂದು ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ. ದೇಶದಲ್ಲಿ (India) ದಾಖಲಾದ ಒಟ್ಟು ಪ್ರಕರಣಗಳ ಪೈಕಿ 90% ಹೊಸ ಕೋವಿಡ್ ಪ್ರಕರಣಗಳು ಕೇರಳದಲ್ಲೇ ದಾಖಲಾಗಿದೆ. ಇದೀಗ ಪತ್ತೆಯಾಗುತ್ತಿರುವ ಸೋಂಕು ಕೋವಿಡ್‌ನ ಸಬ್ ವೇರಿಯಂಟ್ JN1 ಎಂದು ದೃಢಪಟ್ಟಿರುವುದರಿಂದ ಇದ ಅಪಾಯಕಾರಿಯಲ್ಲ ಎನ್ನಲಾಗಿದ್ದು, ಹೀಗಾಗಿ ಇದನ್ನು ನಿರ್ವಹಿಸಬಹುದೆಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ. ಕಳೆದ ನವೆಂಬರ್ (November) ಒಂದೇ ತಿಂಗಳಲ್ಲಿ ಒಟ್ಟು 479 ಕೊರೊನಾ (Covid) ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು ಓರ್ವ ಸೋಂಕಿತ ಕೊನೆಯುಸಿರೆಳೆದಿದ್ದಾನೆ. ಅದರೆ ಡಿಸೆಂಬರ್ ತಿಂಗಳ ಮೊದಲ ಎಂಟು ದಿನವೇ ಬರೋಬ್ಬರಿ 825 ಹೊಸ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು ಆತಂಕಕ್ಕೆ ಕಾರಣವಾಗಿದೆ ಎಂದು ವರದಿ ತಿಳಿಸಿದೆ.