ನ್ಯೂಸ್ ನಾಟೌಟ್: ಚಿಕ್ಕಮಗಳೂರಿನಲ್ಲಿ ಯುವ ವಕೀಲರೊಬ್ಬರ ಮೇಲೆ ಪೊಲೀಸರು ನಡೆಸಿದ ದೌಜನ್ಯಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ವಕೀಲ ಸಂಘದ ವತಿಯಿಂದ ವಿವಿಧ ಕಡೆ ಪ್ರತಿಭಟನೆ ನಡೆಯುತ್ತಿದೆ. ಇದೀಗ ಸುಳ್ಯದಲ್ಲೂ ವಕೀಲರು ಸಿವಿಲ್ ನ್ಯಾಯಾಲಯದ ಮುಂದೆ ಸೋಮವಾರ (ಡಿ. 4 ) ಬೆಳಗ್ಗೆ ಪ್ರತಿಭಟನೆ ನಡೆಸಿದರು.
ಈ ವೇಳೆ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸುಳ್ಯ ಬಾರ್ ಅಸೋಶಿಯೇಶನ್ ಅಧ್ಯಕ್ಷ ನಾರಾಯಣ ಕೆ ಮಾತನಾಡಿ, “ಚಿಕ್ಕಮಗಳೂರು ಪೊಲೀಸರಿಂದ ಯುವ ವಕೀಲ ಪ್ರೀತಂ ಮೇಲೆ ಹಲ್ಲೆ ಮಾಡಲಾಗಿದೆ. ನ್ಯಾಯಾಲಯ ವ್ಯವಸ್ಥೆಯಲ್ಲಿ ಪೊಲೀಸರು , ವಕೀಲರು , ಜನಸಾಮಾನ್ಯರಿಗೆ ಸಮಾನ ಚೌಕಟ್ಟು ಇದೆ. ಟ್ರಾಫಿಕ್ ನಲ್ಲಿ ಹೆಲ್ಮಟ್ ಹಾಕಲಿಲ್ಲ ಎಂಬ ಕಾರಣಕ್ಕೆ ವಕೀಲ ಪ್ರೀತಂ ನನ್ನು ಪೊಲೀಸರು ಹಲ್ಲೆ ಮಾಡಿದ್ದಾರೆ. ವಕೀಲರ ಮೇಲೆ ಸುಳ್ಳು ಕೇಸು ದಾಖಲಿಸಿದ್ದಾರೆ.
ಅದರ ಬದಲಿಗೆ ಜನ ಸಾಮಾನ್ಯರಿಗೆ ನೀಡುವಂತಹ ಕಾನೂನು ಬಾಹಿರವಾಗಿ ಫೈನ್ ಹಾಕಬಹುದಿತ್ತು. ಆದರೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಕೆಲವು ಕಡೆ ರಾತ್ತೋ ರಾತ್ರಿ ವಕೀಲರು ಹೋರಾಟ ನಡೆಸಿದ್ದರೂ ಕೂಡಾ ಪೊಲೀಸರು ಒತ್ತಾಯಕ್ಕೆ ಕೇಸು ದಾಖಲಿಸಿಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ಜಿಲ್ಲೆಯಾದ್ಯಂತ ಹೋರಾಟ ನಡೆಯುತ್ತಿದೆ.
ಕೇಸು ನ್ಯಾಯದ ಮೂಲಕ ಹಿಂಪಡೆಯದಿದ್ದರೆ ತೀವ್ರ ಹೋರಾಟ ನಡೆಸುತ್ತೇವೆ ಎಂದು ಮಾತನ್ನಾಡಿದರು. ಹಿರಿಯ ವಕೀಲ ಎಂ . ವೆಂಕಪ್ಪ ಗೌಡ ಮಾತನಾಡಿ, ” ನಮ್ಮ ದೇಶದಲ್ಲಿ ಕೊಲೆ, ದರೋಡೆ ಮಾಡಿದ ಆರೋಪಿಗಳಿಗೆ ಶಿಕ್ಷೆ ಕೊಟ್ಟರೂ ಅವರನ್ನು ರಾಜ ಮಹಾರಾಜರ ತರ ವ್ಯವಸ್ಥೆ ಕಲ್ಪಿಸಿ ನೋಡುತ್ತಾರೆ. ಆದರೆ ತಪ್ಪು ಮಾಡದ ಜನ ಸಾಮಾನ್ಯರನ್ನು ಹಿಡಿದು ಮಾಡದ ತಪ್ಪಿಗೆ ದೌರ್ಜನ್ಯ ಮಾಡಿ ಕೇಸು ದಾಖಲಿಸಿ ಜೈಲಿಗೆ ಹಾಕುತ್ತಾರೆ.
ಅದೇ ರೀತಿಯೇ ವಕೀಲನ್ನು ಹಿಡಿದು ಪೊಲೀಸರು ದೌರ್ಜನ್ಯ ಮಾಡಿ , ಮೇಲಾಧಿಕಾರಿಗಳ ಒತ್ತಾಯಕ್ಕೆ ಕಾನೂನು ಬಾಹಿರವಾಗಿ ನಡೆಯುತ್ತಿದ್ದಾರೆ. ಇಲ್ಲಿ ಜನ ಸಾಮಾನ್ಯರ ಕಣ್ಣು ನಿಮಗೆ ಮುಚ್ಚಿಸಬಹುದು, ಆದರೆ ನ್ಯಾಯ ದೇವತೆಯ ಕಣ್ಣು ಮುಚ್ಚಲು ಸಾಧ್ಯವಿಲ್ಲ ಎಂದು ತಿಳಿಸಿದರು. ಸುಳ್ಯ ಬಾರ್ ಅಸೋಶಿಯೇಶನ್ ಕಾರ್ಯದರ್ಶಿ ವಿನಯ ಕುಮಾರ್ ಮುಗಡು , ದೇವಿಪ್ರಸಾದ ಆಳ್ವ , ಸುಕುಮಾರ್ ಕೋಡ್ತುಗುಳಿ , ಸುದೀಪ್ ಮದುವೆ ಗದ್ದೆ, ಕೃಷ್ಣ ಪ್ರಸಾದ್, ಪ್ರದೀಪ್ ಬೊಳ್ಳೂರು , ಚಂಪಾ. ವಿ, ಸುಬ್ರಮ್ಮಣ್ಯ ಭಟ್ , ರಂಜಿತ್ ಕುಕ್ಕೇಟಿ, ಕೆ.ಎ ರವೀಂದ್ರನಾಥ್ , ಲೋಲಾಕ್ಷಿ, ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು.