ನ್ಯೂಸ್ ನಾಟೌಟ್ : ಮದುವೆ ಮಂಟಪದಲ್ಲಿಯೇ ವಧು ತನ್ನ ಬಾವಿ ಗಂಡನಿಗೆ ಕಪಾಳಮೋಕ್ಷ ಮಾಡಿರುವ ಘಟನೆ ವರದಿಯಾಗಿದೆ.ಮದುವೆಗೆಂದು ನೂರಾರು ಮಂದಿ ಸೇರಿದ್ದರು.ಅವರ ಮುಂದೆಯೇ ಕೋಪಗೊಂಡ ವಧು ವರನಿಗೆ ಹೊಡೆದ ದೃಶ್ಯ ಬಾರಿ ವೈರಲ್ ಆಗಿದೆ.
ಸಾಮಾನ್ಯವಾಗಿ ವಧು-ವರರು ಅಂದು ಖುಷಿ ಖುಷಿಯಾಗಿ ಮಾತನಾಡಿಕೊಂಡಿರುತ್ತಾರೆ.ಇಲ್ಲವೇ ಮುಂದಿನ ಜೀವನದ ಬಗ್ಗೆ ಚಿಂತೆನೂ ಕಾಡುತ್ತಿರುತ್ತೆ.ಇಂತಹ ವಾತಾವರಣದಲ್ಲಿ ವಧುವಿನ ಈ ವರ್ತನೆ ನಿಜಕ್ಕೂ ಆಶ್ಚರ್ಯವೆಂಬಂತಿದೆ. ಅಷ್ಟಕ್ಕೂ ಆಕೆ ಯಾಕೆ ಹೀಗೆ ಮಾಡಿದ್ದಾಳೆ ಗೊತ್ತಾ? ವರನು ವಧುವಿನ ಕೊರಳಿಗೆ ಮಾಲೆ ಹಾಕಲು ಮುಂದಾದ ತಕ್ಷಣ ವರನ ಬಾಯಿಯಿಂದ ಮದ್ಯದ ದುರ್ವಾಸನೆ ಬರುತ್ತಿತ್ತು ಎನ್ನಲಾಗಿದೆ. ವಧು ಇದನ್ನು ಗ್ರಹಿಸುತ್ತಾಳೆ, ನಂತರ ಕೋಪಗೊಂಡು ವಧು ವೇದಿಕೆಯ ಮೇಲೆಯೇ ವರನನ್ನು ಹೊಡೆಯಲು ಪ್ರಾರಂಭಿಸುತ್ತಾಳೆ. ಕೊರಳಿಗೆ ಹಾರವನ್ನು ಹಾಕದೆ, ವೇದಿಕೆಯಿಂದ ಹೊರ ನಡೆಯುತ್ತಾಳೆ. ವರ ಮತ್ತು ಉಳಿದ ಅತಿಥಿಗಳು ವೇದಿಕೆಯ ಮೇಲೆ ನಿಂತು ಇದೆಲ್ಲವನ್ನು ವೀಕ್ಷಿಸುತ್ತಿರುವಾಗಲೇ ವಧು ಕೋಪಗೊಂಡು ಅಲ್ಲಿಂದ ಹೊರಟೇ ಹೋಗುತ್ತಾಳೆ.
ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ X ನಲ್ಲಿ @gharkekalesh ಹೆಸರಿನ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಜನರು ಈ ವಿಡಿಯೋವನ್ನು ಸಾಕಷ್ಟು ಶೇರ್ ಮಾಡುತ್ತಿದ್ದಾರೆ. 4 ಲಕ್ಷ ಮಂದಿ ವಿಡಿಯೋ ವೀಕ್ಷಿಸಿದ್ದು, ಬಗೆ ಬಗೆಯ ಕಾಮೆಂಟ್ ಕೂಡ ಮಾಡಿದ್ದಾರೆ. ಅನೇಕ ಜನರು ವಧುವಿನ ಈ ನಡೆಯನ್ನು ಸರಿಯೆಂದು ಪರಿಗಣಿಸಿದ್ದಾರೆ. ಒರ್ವ ಬಳಕೆದಾರನು, ‘ವರನು ಮಾದಕ ವ್ಯಸನಿಯಾಗಿದ್ದಾನೆ ಎಂದು ವಧು ಮುಂಚಿತವಾಗಿಯೇ ತಿಳಿದುಕೊಂಡಿರುವುದು ಒಳ್ಳೆಯದು ಎಂದರೆ ಮತ್ತೆ ಕೆಲವರು ಮದುವೆಯಾಗಿದ್ದಾರೋ ಇಲ್ಲವೋ…’ಎಂದು ಪ್ರಶ್ನಿಸಿದ್ದಾರೆ.