ನ್ಯೂಸ್ ನಾಟೌಟ್ : ಸದಾ ಒಂದಿಲ್ಲೊಂದು ವಿವಾದಗಳಿಗೆ ಕಾರಣವಾದ ಬಿಗ್ ಬಾಸ್ ಸೀಸನ್ ೧೦ ಈ ಬಾರಿ ಮತ್ತೊಂದು ಬಿಸಿ ಬಿಸಿ ಚರ್ಚೆಗಳಿಗೆ ಕಾರಣವಾಗಿದೆ. ಅದಕ್ಕೆ ಕಾರಣ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವಂಥ ಆ ಒಂದು ಫೋಟೋ..ಸದ್ಯ ಈ ಫೋಟೋ ನೋಡಿ ನೆಟ್ಟಿಗರು ಫುಲ್ ಗೊಂದಲದಲ್ಲಿದ್ದಾರೆ.
ಬಿಗ್ ಬಾಸ್ ನಿಯಮದ ಪ್ರಕಾರ ಮನೆಯಲ್ಲಿ ಸ್ಪರ್ಧಿಗಳು ಹೊರ ಜಗತ್ತಿನಿಂದ ದೂರವಿರಬೇಕು.ಅವರಿಗೆ ಯಾರದ್ದೇ ಸಂಪರ್ಕವೂ ಇರಬಾರದು. ಮೊಬೈಲ್ ಯೂಸ್ ಇಲ್ಲದೇ,ಮನೆ ಮಂದಿಯನ್ನು ನೋಡದೇ 90 ಅಥವಾ 100 ದಿನ ಇರಬೇಕು ಇದು ನಿಯಮ.ಆದರೆ ಈ ವೈರಲ್ ಆದ ಫೊಟೋವನ್ನು ನೋಡಿದಾಗ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ಮೊಬೈಲ್ ಫೋನ್ ಬಳಕೆ ಮಾಡುತ್ತಾರಾ? ಸ್ಪರ್ಧಿಗಳು ಮನೆಯವರೊಂದಿಗೆ ಸಂಪರ್ಕದಲ್ಲಿಲ್ಲ ಅನ್ನೋದು ಸುಳ್ಳಾ?ಜನರ ಕಣ್ಣಿಗೆ ಮಣ್ಣೆರಚಿ ಈ ಕಾರ್ಯಕ್ರಮ ನಡೆಸಲಾಗುತ್ತದಾ ಅನ್ನುವ ಅನುಮಾನಗಳು ಮೂಡುತ್ತಿದ್ದು, ನೆಟ್ಟಿಗರು ಈ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ.
ವೈರಲ್ ಆಗಿರೋ ಫೋಟೋವನ್ನು ಸರಿಯಾಗಿ ಗಮನಿಸಿದ್ರೆ ಆ ಫೋಟೋದಲ್ಲಿ ಮೊಬೈಲ್ ಚಾರ್ಜರ್ ಗಳು ಕಂಡುಬಂದಿದೆ. ಅಂದಹಾಗೆ ಸಂಗೀತಾ ಶೃಂಗೇರಿ ಅವರು ಪೌಡರ್ ರೂಮ್ನಲ್ಲಿ ನಮ್ರತಾ ಗೌಡ ಜೊತೆ ಕೂತು ಮಾತನಾಡುತ್ತಿದ್ದಾರೆ. ಈ ವೇಳೆ ಮೊಬೈಲ್ ಚಾರ್ಜರ್ ಕ್ಯಾಮರಾ ಕಣ್ಣಿಗೆ ಬಿದ್ದಿದೆ.ಈ ಸಂದರ್ಭವನ್ನೇ ಕೆಲವರು ಫೋಟೋ ತೆಗೆದು ಸೋಶಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿದ್ದಾರೆ.ಅನೇಕರು ಇದಕ್ಕೆ ಕಾಮೆಂಟ್ ಮಾಡಿದ್ದ ಪರ ವಿರೋಧದ ಚರ್ಚೆಗಳು ಕೇಳಿ ಬಂದಿವೆ.ಅನೇಕರು ಈ ಬಗ್ಗೆ ಪ್ರತಿಕ್ರಿಯಿಸುತ್ತಾ ಮೊಬೈಲ್ ಬಳಕೆ ಮಾಡಲಾಗ್ತಿದೆ ಅಂತ ಹೇಳಿದ್ದಾರೆ.
ಮತ್ತೆ ಕಲವರು ಇದಕ್ಕೆ ಮೊಬೈಲ್ ಯೂಸ್ ಮಾಡ್ತಿಲ್ಲ ಎಂದು ಹೇಳಿದ್ದಾರೆ.ಬಹುತೇಕರು ಕಾಮೆಂಟ್ ಮಾಡುತ್ತಾ ಮೇಲ್ನೋಟಕ್ಕೆ ಒನ್ಪ್ಲಸ್ ಅಥವಾ Oppo ಮೊಬೈಲ್ ಚಾರ್ಜರ್ ನೋಡಿದ ಹಾಗೆ ಆಗುತ್ತದೆ. ಅದು ಮೊಬೈಲ್ ಚಾರ್ಜರ್ ಅಥವಾ ಟ್ರಿಮ್ಮರ್, ಸ್ಟ್ರೇಟನರ್ ಚಾರ್ಜರ್? ಅಂತ ಅನುಮಾನ ಪಡುತ್ತಿದ್ದಾರೆ. ಸದ್ಯ ಈ ಎಲ್ಲಾ ಪ್ರಶ್ನೆಗಳಿಗೆ ಬಿಗ್ ಬಾಸ್ ಆಯೋಜಕರೇ ಉತ್ತರಿಸಬೇಕಿದೆ.