ನ್ಯೂಸ್ ನಾಟೌಟ್ : ಬಿಗ್ಬಾಸ್ ಸೀಸನ್ ೧೦ ನಲ್ಲಿ ಸ್ಪರ್ಧಿಗಳ ಆಟ ದಿನದಿಂದ ದಿನಕ್ಕೆ ರೋಚಕವಾಗಿದೆ. ಅದರಲ್ಲೂ ಈ ಬಗ್ಗೆ ಹೊಸ ಹೊಸ ಚರ್ಚೆಗಳು ಶುರುವಾಗಿದೆ.ಆರಂಭದಲ್ಲಿ ಫ್ರೆಂಡ್ಸ್ ಆಗಿದ್ದವರು ಈಗ ಮುಖ ಮುಖ ಕೊಟ್ಟು ಮಾತನಾಡದ ಪರಿಸ್ಥಿತಿಯಲ್ಲೂ ಕೆಲವರಿದ್ದಾರೆ.ಇತ್ತ ಗಟ್ಟಿ ಮನಸ್ಸಿನ ಸಂಗೀತಾ ಕೂಡ ಗೋಳೋ ಅಳುವುದನ್ನು ನೋಡಿ ಆಕೆ ಅಭಿಮಾನಿಗಳು ಬೇಸರ ವ್ಯಕ್ತ ಪಡಿಸುತ್ತಿದ್ದಾರೆ.
ಇಲ್ಲಿಯವರೆಗೆ ಸ್ವಲ್ಪ ಸೈಲೆಂಟಾಗಿದ್ದ ಮೈಕಲ್ ಕೂಡ ಒಂದು ಹೆಜ್ಜೆ ಮುಂದೆ ಹೋಗಿ ಸಂಗೀತಾ ದೊಡ್ಡ ನೆಗೆಟಿವ್ ಎನರ್ಜಿ ಎಂದು ವಾಗ್ದಾಳಿ ನಡೆಸಿದ್ದಾರೆ. ನಾವು ಆಡಲಿಲ್ಲ ಅಂದ್ರೆ ಇವರ ಹಣವನ್ನು ಇವರಿಗೆ ವಾಪಸ್ ಕೊಡಬೇಕಂತೆ. ನಾವೇನು ಇವರ ಗುಲಾಮರ ಎಂದು ಕಿಡಿ ಕಾರಿದ್ದಾರೆ. ಕಡಿಮೆ ಹಣ ಕೊಟ್ಟದ್ದಕ್ಕೆ ಕಳಪೆ ಮಾಲೀಕ ಎಂದು ಸಂಗೀತಾ ಮೇಲೆ ಆರೋಪ ಮಾಡಿದ್ದರು. ಇದಕ್ಕೆ ಅವಿನಾಶ್ ಕೂಡ ಕೈ ಜೋಡಿಸಿ ಹೌದು ಎಷ್ಟೇ ಚೆನ್ನಾಗಿ ಆಟವಾಡಿದ್ರು ಸಂಗೀತಾ ನನ್ನನ್ನು ಕಳಪೆ ಎಂದರು ಅಂತೇಳಿ ತಮ್ಮ ಅಸಮಾಧಾನ ಹೊರ ಹಾಕಿದ್ದರು.
ಇದಷ್ಟೆ ಅಲ್ಲದೇ ಮಾತಿನ ಭರದಲ್ಲಿ ಸಂಗೀತಾ ನಿಮಗೆಲ್ಲ ನಾನು ಸ್ಕ್ರೀನ್ ಸ್ಪೇಸ್ ಕೊಟ್ಟಿದ್ದೀನಿ ಅಂತೇಳಿದ ಮಾತಿಗೆ ಇಡೀ ಮನೆಯೇ ಕೆರಳಿ ಕೆಂಡವಾಯ್ತು. ಅದರಲ್ಲೂ ಮೈಕಲ್ ನೀನೇನು ಬಿಗ್ಬಾಸ್ ಮನೆ ಕಟ್ಟಿ ಇಲ್ಲಿಗೆ ನನ್ನನ್ನು ಸೆಲೆಕ್ಟ್ ಮಾಡಿಕೊಂಡು ಬಂದೆಯಾ ಎಂದು ಖಡಕ್ ಪ್ರಶ್ನೆ ಮಾಡಿದ್ದಾರೆ. ಇದರ ಮಧ್ಯೆ ವಿನಯ್ ಕೂಡ ಪ್ರವೇಶಿಸಿ ಸಂಗೀತಾ ಒಂದೊಮ್ಮೆ ನೀನು ಸ್ಕ್ರೀನ್ ಸ್ಪೇಸ್ ಬಗ್ಗೆ ಮಾತಾಡಿದ್ದು ನಿಜವೇ ಆದ್ರೆ ನೀನು ಮಾಡಿದ್ದು ತಪ್ಪು ಎಂದು ಸಂಗೀತಾ ಮಾತನ್ನು ಖಂಡಿಸಿದ್ರು. ಆದ್ರೆ ಸಂಗೀತಾ ಇದೆಲ್ಲ ಆರೋಪವನ್ನು ತಳ್ಳಿ ಹಾಕಿದ್ದು ನಾನು ಸ್ಕ್ರೀನ್ ಸ್ಪೇಸ್ ಬಗ್ಗೆ ಹೇಳಿದ್ದು ನೀವು ಅಂದುಕೊಂಡ ರೀತಿಯಲ್ಲಿ ಅಲ್ಲ ಎಂದು ತಮ್ಮದೇ ರೀಸನ್ ಕೊಟ್ಟರಾದ್ರೂ ಯಾರು ಅದನ್ನು ಒಪ್ಪಿಕೊಳ್ಳಲು ರೆಡಿ ಇರಲಿಲ್ಲ.
ಇತ್ತ ಈ ಬಗ್ಗೆ ಮನೆ ಹೊರಗೆ ಬಿಗ್ಬಾಸ್ ವೀಕ್ಷಕರು ಪರವಿರೋಧ ಚರ್ಚೆ ಮಾಡ್ತಿದ್ದು ಸಂಗೀತಾ ನಿರ್ಧಾರ ಹಾಗೂ ಆಕೆಯ ಮಾತು ಸರಿ ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು ಇಲ್ಲ ಆಕೆ ಮಾತನಾಡಿದ ರೀತಿ ತಪ್ಪು. ಸಂಗೀತಾ ನೀವ್ಯಾಕೆ ಹಿಂಗೆ ಅಂತ ಪ್ರಶ್ನೆ ಮಾಡ್ತಿದ್ದಾರೆ. ಈ ಬಗ್ಗೆ ವೀಕೆಂಡ್ನಲ್ಲಿ ಕಿಚ್ಚ ಬಂದಾಗ ಏನೆಲ್ಲ ಚರ್ಚೆ ಆಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.ಈ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ..