ನ್ಯೂಸ್ ನಾಟೌಟ್ : ಬಿಗ್ ಬಾಸ್ ಮನೆಯಲ್ಲಿ ವಾದ-ವಿವಾದಗಳು,ಆರೋಪ-ಪ್ರತ್ಯಾರೋಪಗಳು ನಡಿತಾನೇ ಇರುತ್ತೆ.ಇದೀಗ ಮತ್ತೊಂದು ಹೊಸ ವಿಡಿಯೋವೊಂದು ಟ್ರೋಲ್ ಆಗಲು ಶುರುವಾಗಲಾರಂಭಿಸಿದೆ.ಇದೀಗ ಸುಶಾಂತ್ ಸಿಂಗ್ ರಜಪೂತ್ (Bigg Boss 17) ಮಾಜಿ ಲವರ್, ನಟಿ ಅಂಕಿತಾ ಲೋಖಂಡೆ ಹಾಗೂ ಅವರ ಪತಿ ವಿಕ್ಕಿ ಜೈನ್ ‘ಬಿಗ್ ಬಾಸ್ 17’ ಮೂಲಕ ಮತ್ತೊಂದು ಸುದ್ದಿ ಮೂಲಕ ಟ್ರೋಲ್ ಆಗಿದ್ದಾರೆ.
ಬಿಗ್ ಬಾಸ್ ನಲ್ಲಿ ಆಗಾಗ ಈ ಜೋಡಿ ಗಲಾಟೆ ಕೂಡ ಮಾಡಿಕೊಳ್ಳುತ್ತಲೇ ಇರುತ್ತದೆ.ಬಿಗ್ ಬಾಸ್ ಮನೆಗೆ ಬರುವ ಮುಂಚೆ ಈ ಜೋಡಿ ಅದೆಷ್ಟೋ ಪ್ರೇಮಿಗಳಿಗೆ ಮಾದರಿಯಾಗಿದ್ದರು.ಆದರೆ ಯಾವಾಗ ಜೋಡಿ ಮನೆಗೆ ಎಂಟ್ರಿ ಕೊಟ್ಟಿತ್ತೋ ಜೋಡಿಯ ಅಸಲಿ ಮುಖ ಬಯಲಾದಂತಿದೆ. ಈ ಹಿಂದೆ ಅಂಕಿತಾ ಅವರು ಇತರ ಮನೆಯ ಸದಸ್ಯರ ಮುಂದೆ ಪತಿ ವಿಕ್ಕಿ ಮೇಲೆ ಚಪ್ಪಲಿ ಬಿಸಾಡಿದ್ದರು. ಆ ಬಳಿಕ ಜೋಡಿಯ ಮಧ್ಯೆ ಡಿವೋರ್ಸ್ ಮಾತುಕತೆಯೂ ಆಯ್ತು. ಆದರೀಗ ಅಂಕಿತಾ ಕೆನ್ನೆಗೆ ವಿಕ್ಕಿ ಹೊಡೆಯಲು ಹೋಗಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ಆಗುತ್ತಿವೆ.
ವಿಕ್ಕಿ ಬೆಡ್ ಮೇಲೆ ಮಲಗಿ ಮಾತನಾಡುತ್ತಿದ್ದರು. ಈ ವೇಳೆ ಅಂಕಿತಾ ಮಾತಿನ ಮಧ್ಯೆ ಏನನ್ನೋ ಹೇಳಲು ಪ್ರಯತ್ನಿಸಿದರು. ಇದರಿಂದ ಸಿಟ್ಟಾದ ವಿಕ್ಕಿ ಅವರು ಅಂಕಿತಾ ಕೆನ್ನೆಗೆ ಬಾರಿಸಲು ಹೋಗಿದ್ದಾರೆ. ಅಲ್ಲಿಯೇ ಇದ್ದ ಅಭಿಷೇಕ್ ಕುಮಾರ್ ಹಾಗೂ ಅರುಣ್ ಅವರು ಗಾಬರಿಯಾದರು. ವಿಕ್ಕಿ ಅವರು ಮಾಡಿದ್ದು ತಪ್ಪು ಎಂದು ಅನೇಕರು ಖಂಡಿಸಿದ್ದಾರೆ. ಜನರು ವಿಕ್ಕಿಯನ್ನು ಸಾಕಷ್ಟು ಟ್ರೋಲ್ ಮಾಡಿದ್ದಾರೆ. ‘ಇದು ಅತ್ಯಂತ ಅಸಭ್ಯ ಕೃತ್ಯ. ಅಂಕಿತಾ ಅವರು ಇಂಥ ವ್ಯಕ್ತಿ ಜತೆ ಬದುಕಬಾರದು’ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.
ಕಳೆದ ಸಂಚಿಕೆಯಲ್ಲಿ ವಿಕ್ಕಿ ಅವರು ಮದುವೆ ಬಳಿಕ ಪುರುಷರಿಗೆ ತುಂಬ ಕಷ್ಟ. ವಿವಾಹಿತ ಪುರುಷರು ತಾವು ಅನುಭವಿಸುತ್ತಿರುವ ನೋವನ್ನು ಎಂದಿಗೂ ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದರು. ಇದನ್ನು ಕೇಳಿಸಿಕೊಂಡ ಬಳಿಕ ಅಂಕಿತಾ ಲೋಖಂಡೆ ಅವರು ʻಮದುವೆ ಬಳಿಕ ಗಂಡಸಿಗೆ ಅಷ್ಟೆಲ್ಲ ಕಷ್ಟ ಆಗುತ್ತೆ ಎಂಬುದಾದರೆ ವಿಚ್ಛೇದನ ಪಡೆಯೋಣʼ ಎಂದು ಹೇಳಿದ್ದರು.
ಕೆಲವು ವೀಕ್ಷಕರು ವಿಕ್ಕಿಯ ವರ್ತನೆಯು ಬರಬರುತ್ತಾ ಅವರ ಪತ್ನಿ ಅಂಕಿತಾಗೆ ಅಗೌರವ ತರುವಂತೆ ಮಾಡುತ್ತಿದೆ. ಎಂದು ಅಭಿಪ್ರಾಯಪಟ್ಟಿದ್ದಾರೆ. ಹಿಂದಿ ಕಿರುತೆರೆಯ ಧಾರಾವಾಹಿಗಳ ಮೂಲಕ ಫೇಮಸ್ ಆದವರು ಅಂಕಿತಾ ಲೋಖಂಡೆ. ‘ಪವಿತ್ರ ರಿಷ್ತಾ’ ಸೀರಿಯಲ್ನಲ್ಲಿ ನಟಿಸುವಾಗ ಸುಶಾಂತ್ ಸಿಂಗ್ ರಜಪೂತ್ ಜತೆ ಪ್ರೀತಿ ಚಿಗುರಿತ್ತು. ನಂತರ ಅವರಿಬ್ಬರು ಬ್ರೇಕಪ್ ಮಾಡಿಕೊಂಡರು. ಆ ಬಳಿಕ ಅಂಕಿತಾ ಡಿಸೆಂಬರ್ 2021ರಲ್ಲಿ, ಉದ್ಯಮಿ ವಿಕ್ಕಿ ಜೈನ್ ಅವರೊಂದಿಗೆ ವಿವಾಹವಾದರು.