ನ್ಯೂಸ್ ನಾಟೌಟ್ : ಆರೋಗ್ಯ ಕೆಟ್ಟಾಗ ನೇರವಾಗಿ ಆಸ್ಪತ್ರೆಗೆ ಹೋಗಿ ಪರೀಕ್ಷೆಗೆ ಒಳಗಾಗಬೇಕು ಅಲ್ವೇ..?ಆದರೆ ಇಲ್ಲೊಂದು ಕುಟುಂಬ, ಮನೆಯಲ್ಲಿ ಆರೋಗ್ಯ ಸಮಸ್ಯೆಯಿಂದ ನರಳಾಡುತ್ತಿದ್ದ ಬಾಲಕಿಯನ್ನು ಜ್ಯೋತಿಷಿ ಬಳಿ ಕರೆದುಕೊಂಡು ಹೋಯಿತು.ಜ್ಯೋತಿಷಿ ಮಾತನ್ನು ಕೇಳಿ ಬರೋಬ್ಬರಿ ನಾಲ್ಕು ತಿಂಗಳ ಕಾಲ ಮನೆಯೊಳಗೆ ಕೂಡಿ ಹಾಕಿತು.ಆ ಬಾಲಕಿ ಈಗ ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದೆ.ಇಂತಹ ಮನಕಲಕುವ ಘಟನೆಯೊಂದು ಬೆಂಗಳೂರಿನಿಂದ ವರದಿಯಾಗಿದೆ.
ಆ ಕುಟುಂಬ ಮೌಢ್ಯಕ್ಕೆ ಶರಣಾಗಿದ್ದು, ಬಾಲಕಿಯ ಜೀವನವೇ ನರಕವಾಗಿ ಬಿಟ್ಟಿದೆ.ಕಳ್ಳ ಜ್ಯೋತಿಷಿ ಯುವತಿ (26) ಪ್ರಾಣದ ಜತೆ ಆಟವಾಡಿದ್ದಾನೆ. ಬೆಂಗಳೂರಿನ ಲಗ್ಗೆರೆಯಲ್ಲಿ ಈ ಅಮಾನುಷ ಘಟನೆ ಬೆಳಕಿಗೆ ಬಂದಿದೆ. ಸ್ವಂತ ತಮ್ಮನಿಂದಲೇ ನಾಲ್ಕು ತಿಂಗಳಿಂದ ನಾಲ್ಕು ಗೋಡೆಗಳ ಮಧ್ಯೆ ಮಮತಾಶ್ರೀ (26) ಎಂಬಾಕೆ ಗೃಹ ಬಂಧನಕ್ಕೆ ಒಳಗಾಗಿದ್ದಾಳೆ ಅನ್ನೋದು ಭಾರಿ ಬೇಸರದ ಸಂಗತಿ.
ಆರೋಗ್ಯದಿಂದಿದ್ದ ಯುವತಿಗೆ ಇದ್ದಕ್ಕಿದ್ದ ಹಾಗೆ ಹೊಟ್ಟೆ ಊದಿಕೊಂಡು ಹೋಯಿತು. ಎಷ್ಟೇ ನರಳಾಡುತ್ತಿದ್ದರೂ ಆಸ್ಪತ್ರೆಗೆ ತೋರಿಸದೇ ಕುಟುಂಬಸ್ಥರು ನಿರ್ಲಕ್ಷ್ಯ ವಹಿಸಿಸುತ್ತಾ ಹೋದರು.ಆಗ ತೀವ್ರ ಹೊಟ್ಟೆ ನೋವು ತಾಳಲಾರದೇ ಯುವತಿ ಕಿರುಚಾಡಿದ್ದಕ್ಕೆ, ತಮ್ಮ ಅಕ್ಕನ ಮೇಲೆಯೇ ಬಾರಿಸಿದ್ದಾನೆ. ತಾಳಲಾರದೇ ಯುವತಿ ಪ್ಲೀಸ್ ನನ್ನನ್ನು ಕಾಪಾಡಿ, ಸಹಾಯ ಮಾಡಿ ಎಂದು ಪರಿಚಯಸ್ಥರಿಗೆ ಯುವತಿ ಮೆಸೇಜ್ ಮಾಡಿದ್ದಾಳೆ.
ಮಮತಾಶ್ರೀ ಮೂಲತಃ ಚನ್ನರಾಯಪಟ್ಟಣದ ಮಾದೇಹಳ್ಳಿ ಗ್ರಾಮದವಳು. ಪದವಿ ಮುಗಿಸಿದ್ದ ಮಮತಾಳಿಗೆ ನಾಲ್ಕು ತಿಂಗಳ ಹಿಂದೆ ಬೆನ್ನು ನೋವು ಶುರುವಾಗಿತ್ತು. ಮನೆ ಮದ್ದು, ಮೆಡಿಕಲ್ನಿಂದ ಮಾತ್ರೆಗಳನ್ನು ನುಂಗಿದ್ದರೂ ನೋವು ಮಾತ್ರ ಶಮನವಾಗಲಿಲ್ಲ. ಇತ್ತ ಮಮತಾಳ ಬೆನ್ನು ನೋವಿಗೆ ಆಸ್ಪತ್ರೆಗೆ ತೋರಿಸದೇ ಆಕೆಯ ತಮ್ಮ ಪ್ರಶಾಂತ್ ಎಂಬಾತ ಆಸ್ಪತ್ರೆ ಸಹವಾಸ ಬೇಡ್ವೇ ಬೇಡ ಎಂದು, ಬಾಬಾನ ಮೊರೆ ಹೋಗಿದ್ದ.
ನಕಲಿ ಬಾಬಾನ ಮಾತು ಕೇಳಿ ಮಮತಾಳಿಗೆ ಮೂರು ತಿಂಗಳಿಂದ ಅರಿಶಿನದ ನೀರು, ನಿಂಬೆ ಹಣ್ಣು ನೀರು ಕುಡಿಸುತ್ತಿದ್ದ. ಆದರೆ ಊಟವನ್ನೇ ನೀಡುತ್ತಿರಲಿಲ್ಲ ಎನ್ನಲಾಗಿದೆ. ಇದರಿಂದಾಗಿ ಆಕೆಯ ಆರೋಗ್ಯದಲ್ಲಿ ತೀವ್ರ ಸಮಸ್ಯೆಯಾಗಿತ್ತು. ಇದೀಗ ಕೊನೆಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತೋರಿಸಿದಾಗ ಆಕೆಗೆ ಕ್ಯಾನ್ಸರ್ ಇರುವುದು ದೃಢವಾಗಿದೆ.ನಾಲ್ಕು ತಿಂಗಳ ಹಿಂದೆಯೇ ಮಮತಾಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರೆ, ಕ್ಯಾನ್ಸರ್ ರೋಗ ನಿವಾರಣೆಯ ಹಂತಕ್ಕೆ ಬರುತ್ತಿತ್ತು. ಆದರೆ ಜ್ಯೋತಿಷಿ ಮಾತು ಕೇಳಿದ ಕುಟುಂಬಸ್ಥರು ಯುವತಿಗೆ ಚಿಕಿತ್ಸೆ ಕೊಡಿಸದೇ ಜೀವಕ್ಕೆ ಕುತ್ತು ತಂದಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಮಹಿಳಾ ಮತ್ತು ಮಕ್ಕಳಾಭಿವೃದ್ದಿ ಇಲಾಖೆಯ ಅಧಿಕಾರಿಗಳು ಗೃಹ ಬಂಧನದಲ್ಲಿದ್ದ ಯುವತಿಯನ್ನು ರಕ್ಷಣೆ ಮಾಡಿದ್ದಾರೆ.
ಕುಟುಂಬಸ್ಥರ ಮೌಡ್ಯಕ್ಕೆ ಯುವತಿ ಅನುಭವಿಸಿದ ನರಳಾಟಕ್ಕೆ ಮುಕ್ತಿ ನೀಡಿದ್ದಾರೆ. ಅಬ್ದುಲ್ ಎಂಬಾತ ನಕಲಿ ಬಾಬಾ ಎಂದು ತಿಳಿದು ಬಂದಿದೆ. ಆತನನ್ನು ಹಿಡಿದು ಪೊರಕೆ ಸೇವೆ ಮಾಡಲಾಗಿದೆ.