ನ್ಯೂಸ್ ನಾಟೌಟ್ : ಮಕ್ಕಳ ಬಗ್ಗೆ ಪೋಷಕರು ಎಷ್ಟೇ ಎಚ್ಚರಿಕೆಯಿಂದಿದ್ದರೂ ಸಾಲೋದಿಲ್ಲ.ಒಂದು ಕ್ಷಣ ಕಣ್ಣು ಮುಚ್ಚಿದರೂ ಕೂಡ ಮಕ್ಕಳು ಏನಾದರೊಂದು ಅವಾಂತರಗಳನ್ನು ಸೃಷ್ಟಿಸುತ್ತಲೇ ಇರುತ್ತಾರೆ.ಒಂದು ವೇಳೆ ಹೊರಗಡೆ ಮಕ್ಕಳನ್ನು ಆಟವಾಡಲು ಬಿಟ್ಟರೂ ಕೂಡ ಅವರ ಮೇಲೆ ನಿಗಾ ಇಟ್ಟಿರಬೇಕಾಗುತ್ತದೆ.ಹೀಗೆ ಆಟವಾಡಲೆಂದು ಹೋಗಿದ್ದ ಬಾಲಕಿ ನೀರಿನ ಸಂಪ್ಗೆ ಬಿದ್ದು (Drowned in water) ದುರಂತ ಅಂತ್ಯವಾಗಿರುವ ಘಟನೆ ಬೆಂಗಳೂರಿನಿಂದ ವರದಿಯಾಗಿದೆ.
ಬೆಂಗಳೂರಿನ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ಸಂಜೆ ಈ ಘಟನೆ ನಡೆದಿದ್ದು, ಆಯಿದಾ (5) ಕೊನೆಯುಸಿರೆಳೆದ ಬಾಲಕಿ. ಬಾಡಿಗೆದಾರರು ನೀರಿನ ಸಂಪ್ನ ಕ್ಯಾಪ್ ಓಪನ್ ಮಾಡಿ ಒಳ ಹೋಗಿದ್ದರು. ಇದೇ ವೇಳೆ ಆಯಿದಾ ತಾಯಿ ಆಟವಾಡಲು ಬಿಟ್ಟು ಮನೆಯೊಳಗೆ ಹೋಗಿದ್ದಾರೆ.ಇದೇ ಸಂದರ್ಭ ಮನೆ ಮುಂದೆ ಆಟವಾಡುತ್ತಿದ್ದಾಗ ಆಯಿದಾ ಆಯತಪ್ಪಿ ಸಂಪ್ನಲ್ಲಿ ಬಿದ್ದಿದ್ದಾಳೆ. ಸಂಪ್ನಲ್ಲಿ ನೀರು ತುಂಬಿ ಇದ್ದಿದ್ದರಿಂದ ಆಯಿದಾ ಉಸಿರುಗಟ್ಟಿ ಬಾರದ ಲೋಕಕ್ಕೆ ತೆರಳಿದ್ದಾಳೆ. ತುಂಬಾ ಸಮಯದವರೆಗೆ ಬಾಲಕಿ ಕಾಣದಿದ್ದಾಗ ಅನುಮಾನಗೊಂಡು ಸಂಪ್ನಲ್ಲಿ ನೋಡಿದಾಗ ಆಕೆ ಪತ್ತೆಯಾಗಿದ್ದಾಳೆ.ಪ್ರಕರಣ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ.