ನ್ಯೂಸ್ ನಾಟೌಟ್ : ದೇಶದಲ್ಲಿ ಅನೇಕ ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್ಗಳಿವೆ. ಆದರೆ ದಿವಾಳಿಯಾಗಿರುವಂಥ ಅನೇಕ ಬ್ಯಾಂಕ್ ಗಳ ಬಗ್ಗೆ ನಾವು ಕೇಳಿರುತ್ತೇವೆ. ನಷ್ಟದಲ್ಲೇ ನಡೆಯುತ್ತಿರುವ ಬ್ಯಾಂಕ್ ಗಳು ಕೂಡಾ ಇವೆ. ಹೀಗಾಗಿ ಯಾವ ಬ್ಯಾಂಕ್ ಸುರಕ್ಷಿತವಾಗಿದೆ ಎನ್ನುವ ಮಾಹಿತಿ ಜನ ಸಾಮಾನ್ಯರ ಬಳಿ ಇರುವುದಿಲ್ಲ. ಇದೀಗ ಅತ್ಯಂತ ವಿಶ್ವಾಸಾರ್ಹ ಬ್ಯಾಂಕ್ಗಳ ಪಟ್ಟಿಯನ್ನು ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿದೆ ಎಂದು ವರದಿ ತಿಳಿಸಿದೆ.
ದೇಶೀಯ ಮಟ್ಟದಲ್ಲಿ ಹಣಕಾಸು ವ್ಯವಸ್ಥೆಗೆ ಸಂಬಂಧಿಸಿದಂತೆ ಎಸ್ ಬಿಐ, ಹೆಚ್ ಡಿ ಎಫ್ ಸಿ ಮತ್ತು ಐಸಿಐಸಿಐ ಬ್ಯಾಂಕ್ ಪ್ರಮುಖ ಬ್ಯಾಂಕ್ಗಳಾಗಿ ಉಳಿದಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಹೇಳಿದೆ.
ದೇಶದ ಹಣಕಾಸು ವ್ಯವಸ್ಥೆಯ ಮಟ್ಟದಲ್ಲಿ, ಈ ಬ್ಯಾಂಕುಗಳು ದೊಡ್ಡ ಪಾತ್ರ ವಹಿಸುತ್ತದೆ ಎಂದು ಆರ್ ಬಿಐ ಹೇಳಿದೆ.
ನಿಯಮಗಳ ಪ್ರಕಾರ, ಸಿಸ್ಟಮ್ ಮಟ್ಟದಲ್ಲಿ (SIS) ಪ್ರಾಮುಖ್ಯತೆಯ ಆಧಾರದ ಮೇಲೆ ಬ್ಯಾಂಕ್ ಗಳನ್ನು ನಾಲ್ಕು ವಿಭಾಗಗಳಲ್ಲಿ ಇರಿಸಬಹುದು. ಈ ಪೈಕಿ ಬಕೆಟ್ ಒಂದು ಎಂದರೆ ಕಡಿಮೆ ಪ್ರಾಮುಖ್ಯತೆಯ ಬ್ಯಾಂಕ್.
ಪ್ರಸ್ತುತ ಎಸ್ಬಿಐ ಬಕೆಟ್ ಮೂರರಂದ ನಾಲ್ಕಕ್ಕೆ ಏರಿದರೆ ಎಚ್ಡಿಎಫ್ಸಿ ಒಂದರಿಂದ ಎರಡನೇ ವರ್ಗಕ್ಕೆ ಸ್ಥಳಾಂತರಗೊಂಡಿದೆ. ಐಸಿಐಸಿಐ ಬ್ಯಾಂಕ್ ಕಳೆದ ವರ್ಷದಂತೆ ಸ್ಥಿರವಾಗಿ ಉಳಿದಿದೆ ಎಂದು ಕೇಂದ್ರ ಬ್ಯಾಂಕ್ ಹೇಳಿಕೆಯಲ್ಲಿ ತಿಳಿಸಿದೆ. ಇದರರ್ಥ ಎಸ್ಬಿಐ ಮತ್ತು ಎಚ್ಡಿಎಫ್ಸಿ ಬ್ಯಾಂಕ್ ಉನ್ನತ ವರ್ಗಕ್ಕೆ ಏರಿದೆ ಎನ್ನಲಾಗಿದೆ. ಎಸ್ ಬಿ ಐ ಕೆಳಗೆ ಬರುವ ಬ್ಯಾಂಕುಗಳನ್ನು ಅದರ ಪ್ರಾಮುಖ್ಯತೆಯ ಆಧಾರದಲ್ಲಿ ಅಳೆಯಲಾಗಿದೆ ಎಂದು ವರದಿ ತಿಳಿಸಿದೆ ಮತ್ತು ಸುರಕ್ಷಿತ ಎಂದು ಹೇಳಿದೆ.