ನ್ಯೂಸ್ ನಾಟೌಟ್: ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (AIMIM) ಮುಖ್ಯಸ್ಥ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ (Asaduddin Owaisi) ಮಸೂದೆಯ ಮೇಲಿನ ಚರ್ಚೆಯ ಸಂದರ್ಭದಲ್ಲಿ ಕೆಲವು ಪುರುಷರು ಕೂಡ ಲೈಂಗಿಕ ದೌರ್ಜನ್ಯ ಎದುರಿಸುತ್ತಿದ್ದಾರೆ ಎಂದು ಪ್ರಸ್ತಾಪಿಸಿದ್ದು ವಿಶೇಷವಾಗಿತ್ತು.
ಕ್ರಿಮಿನಲ್ ಕಾನೂನುಗಳಿಗೆ (Indian Criminal Laws) ಸಂಬಂಧಿಸಿದ ಮೂರು ಮಸೂದೆಗಳನ್ನು ಲೋಕಸಭೆಯಲ್ಲಿ (Lok Sabha) ಬುಧವಾರ (ಡಿಸೆಂಬರ್ 20) ಅಂಗೀಕರಿಸಲಾಗಿದೆ. ಈ ಮೂರು ವಿಧೇಯಕಗಳ ಮೇಲೆ ಸಂಸತ್ನಲ್ಲಿ ಸಾಕಷ್ಟು ಚರ್ಚೆಗಳು ನಡೆದವು. ಈ ವೇಳೆ ಇದನ್ನು ಹೇಳಿದಾಗ, ಕೆಲವು ಸದಸ್ಯರು ನಗಲು ಪ್ರಾರಂಭಿಸಿದರು, ಅದಕ್ಕೆ ಓವೈಸಿ ಇದರ ಬಗ್ಗೆ ಬಹುಶಃ ನಿಮಗೆ ತಿಳಿದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಮಸೂದೆ ಮೇಲಿನ ಚರ್ಚೆಯ ವೇಳೆ ಲೋಕಸಭೆ ಸಂಸದ ಅಸಾದುದ್ದೀನ್ ಓವೈಸಿ, ‘ಅತ್ಯಾಚಾರ ಮಹಿಳೆಯರ ಮೇಲೆ ಮಾತ್ರ ನಡೆಯುತ್ತದೆಯೇ? ಪುರುಷರು ಅತ್ಯಾಚಾರಕ್ಕೊಳಗಾಗುವುದಿಲ್ಲವೇ? ಮಸೂದೆಯಲ್ಲಿ ಈ ಬಗ್ಗೆ ಯಾವುದೇ ಪ್ರಸ್ತಾಪವಾಗಿಲ್ಲ. ಇದು ಪುರುಷರಿಗೆ ಅನ್ವಯವಾಗುವುದಿಲ್ಲವೇ?’ ಎಂದು ಓವೈಸಿ ಕೇಳಿದ್ದು ಎಲ್ಲರನ್ನೂ ನಗಿಸಿತು. ಆದರೆ, ಕೆಲವರು ಇದನ್ನು ಗಂಭೀರವಾಗಿ ಪರಿಗಣಿಸಿ ಕಾಯ್ದೆಗಳಲ್ಲಿ ಸೇರಿಸಲು ಒತ್ತಾಯಿಸಿದರು ಎನ್ನಲಾಗಿದೆ.
ಅಂಗೀಕರಿಸಲಾದ ಮೂರು ಮಸೂದೆಗಳಲ್ಲಿ ಭಾರತೀಯ ನ್ಯಾಯ ಸಂಹಿತೆ (ಎರಡನೇ) ಕೋಡ್ 2023, ಭಾರತೀಯ ನಾಗರಿಕ ರಕ್ಷಣಾ ಕೋಡ್ 2023 ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ 2023 ವಿಧೇಯಕಗಳನ್ನು ಜಾರಿ ಮಾಡಲು ಹೊರಟಿದೆ. ಗೃಹ ಸಚಿವ ಅಮಿತ್ ಶಾ ವಿವರವಾದ ಉತ್ತರದ ನಂತರ ಧ್ವನಿ ಮತದ ಮೂಲಕ ಈ ವಿಧೇಯಕಗಳನ್ನು ಅಂಗೀಕರಿಸಲಾಯಿತು. ಭಾರತೀಯ ದಂಡ ಸಂಹಿತೆ (IPC), 1860, ಕ್ರಿಮಿನಲ್ ಪ್ರೊಸೀಜರ್ ಕೋಡ್ (CrPC), 1898 ಮತ್ತು ಭಾರತೀಯ ಸಾಕ್ಷ್ಯ ಕಾಯಿದೆ, 1872 ರ ಬದಲಿಗೆ ಈ ಮೂರು ಮಸೂದೆಗಳನ್ನು ಜಾರಿಗೆ ತರಲಾಗಿದೆ ಎಂದು ವರದಿ ತಿಳಿಸಿದೆ.
ಇನ್ನು ಓವೈಸಿ, ‘ಕಲಂ 69ರಲ್ಲಿ ಲವ್ ಜಿಹಾದ್ ಉಲ್ಲೇಖಿಸಲಾಗಿದೆ. ನೀವು ಅದನ್ನು ಸಾಬೀತುಪಡಿಸಲು ಸಾಧ್ಯವಾಗುವುದಿಲ್ಲ. ಇದರಲ್ಲಿ ಗುರುತನ್ನು ಮರೆಮಾಚುವ ಮೂಲಕ ಸಂಬಂಧವನ್ನು ರಚಿಸಲಾಗಿದೆ. ಅಲ್ಲದ ‘ನೀವು ವ್ಯಭಿಚಾರ ಮತ್ತು ಸಲಿಂಗಕಾಮವನ್ನು ಈ ಕಾಯ್ದೆಯಲ್ಲಿ ತೆಗೆದುಹಾಕಿದ್ದೀರಿ. ಇದರಲ್ಲಿ ಒಮ್ಮತದ ಸಂಬಂಧ ಹೊಂದುವ ಹಕ್ಕನ್ನು ರದ್ದುಪಡಿಸಲಾಗಿದೆ. ಒಮ್ಮತದ ಸಂಬಂಧಕ್ಕೆ ಕೋರ್ಟ್ ಅನುಮತಿ ನೀಡಿದೆ, ನಾನು ಧಾರ್ಮಿಕವಾಗಿ ಇದನ್ನೂ ವಿರೋಧಿಸುತ್ತೇನೆ, ಆದರೆ ಈ ಹಕ್ಕನ್ನು ಏಕೆ ತೆಗೆದುಹಾಕಿದ್ದೀರಿ? ಎಂದು ಪ್ರಶ್ನಿಸಿದ್ದಾರೆ.