ನ್ಯೂಸ್ ನಾಟೌಟ್ : ಹಲವು ದಶಕಗಳಿಂದ ತಮ್ಮ ಚಿಟಪಟ ಮಾತಿನ ಮೂಲಕವೇ ಕನ್ನಡ ಕಿರುತೆರೆ (Kannada TV) ಲೋಕದಲ್ಲಿ ಕಮಾಲ್ ಮಾಡುತ್ತಾ ಬಂದಿದ್ದಾರೆ ಆ್ಯಂಕರ್ ಅನುಶ್ರೀ ಅವರು (Anchor Anushree). ಸರಿಗಮಪ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ಕಾಮಿಡಿ ಕಿಲಾಡಿಗಳು ಸೇರಿದಂತೆ ಹಲವು ಯಶಸ್ವಿ ರಿಯಾಲಿಟಿ ಶೋಗಳನ್ನು ತಮ್ಮ ಅದ್ಭುತ ನಿರೂಪಣ ಶೈಲಿಯಿಂದಲೇ ಖ್ಯಾತಿಗಳಿಸಿದ್ದಾರೆ.
ಮಾತ್ರವಲ್ಲ , ಕನ್ನಡ ಕಿರುತೆರೆಯ (Kannada Serials) ಧಾರವಾಹಿ ಹಾಗೂ ಬೆಳ್ಳಿ ತೆರೆಯ ಸಿನಿಮಾಗಳಲ್ಲಿಯೂ ಅಭಿನಯಿಸುತ್ತಾ ನಟಿ ಕಮ್ ಆಂಕರ್ ಆಗಿ ಹೊರಹೊಮ್ಮಿರುವ ಅನುಶ್ರೀ ಅವರು ಎಲ್ಲೇ ಹೋದರು ಅಭಿಮಾನಿಗಳು ಮಾತ್ರ ಇವರನ್ನು ಬಿಡುವಂತೆ ಕಾಣುತ್ತಿಲ್ಲ. ಮದುವೆ (Anchor Anushree Marriage) ಯಾವಾಗ ಎಂಬ ಪ್ರಶ್ನೆಯನ್ನು ಕೇಳಿಯೇ ಕೇಳುತ್ತಾರೆ.ಸಾಮಾಜಿಕ ಜಾಲತಾಣದ ಲೈವ್ಗೆ ಬಂದಾಗ ಅನುಶ್ರೀ ಅವರನ್ನು ಮದುವೆ ಯಾವಾಗ? ಎಂಬ ಪ್ರಶ್ನೆ ಕೇಳುತ್ತಲೇ ಇರುತ್ತಾರೆ.ಅನುಶ್ರೀ ತಮ್ಮ ಉದ್ಯೋಗದಲ್ಲಿ ಸಂತೋಷ ಕಂಡರೂ ಕೂಡ , ಅಭಿಮಾನಿಗಳ ಈ ಪ್ರಶ್ನೆಯೇ ಅವರಿಗೆ ತಲೆನೋವಾಗಿದೆ.
ಕರ್ನಾಟಕದ ಕರಾವಳಿ ಮಂಗಳೂರಿನ ಸುರತ್ಕಲ್’ನಲ್ಲಿ ಹುಟ್ಟಿ ಬೆಳೆದ ಅನುಶ್ರೀ, ದಕ್ಷಿಣ ಭಾರತದಲ್ಲೇ ಅತೀ ಹೆಚ್ಚು ಸಂಭಾವನೆ ಪಡೆಯುವ ನಿರೂಪಕಿಯರಲ್ಲಿ ಒಬ್ಬರು.ತಮ್ಮ ಸ್ಪಷ್ಟ ನಿರೂಪಣೆಗೆ ಹೆಸರುವಾಸಿ.ಇನ್ನು ಇಷ್ಟೊಂದು ಹೆಸರು ಗಳಿಸಿರುವ ಅನುಶ್ರೀ ಮದುವೆಯಾಗದೆ ಒಬ್ಬಂಟಿ ಜೀವನ ನಡೆಸಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಇವರ ವೈಯಕ್ತಿಕ ಜೀವನದ ಬಗ್ಗೆ ಅನೇಕ ವದಂತಿಗಳಿವೆ. ಅಂದಹಾಗೆ ಏಕಾಂಗಿಯಾಗಿ ಉಳಿಯುವ ನಿರ್ಧಾರದ ಬಗ್ಗೆ ಅನುಶ್ರೀ ಬಳಿ ಕೇಳಿದಾಗ, “ನನ್ನ ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಮತ್ತು ಜೀವನದಲ್ಲಿ ಅನುಸರಿಸಿಕೊಂಡು ನಡೆಯುವ ಸಂಗಾತಿ ನನಗೆ ಇನ್ನೂ ಸಿಕ್ಕಿಲ್ಲ” ಎಂದು ಹೇಳಿದ್ದಾರೆ.
ಅಷ್ಟೇ ಅಲ್ಲದೆ, ಅನುಶ್ರೀಗೆ ಯಾವಾಗಲೂ ಮದುವೆಗಿಂತ ತನ್ನ ವೃತ್ತಿಜೀವನ ಮುಖ್ಯ. ಅವರಿಗೆ ತಮ್ಮ ಜೀವನದಲ್ಲಿ ಇನ್ನಷ್ಟೂ ಸಾಧಿಸಬೇಕೆಂಬ ಹಂಬಲವಿದೆ. ಇದೇ ಕಾರಣದಿಂದ 35 ವರ್ಷ ವಯಸ್ಸಾದರೂ ಮದುವೆಯಾಗದೆ ಉಳಿದಿದ್ದಾರೆ ಎನ್ನಲಾಗಿದೆ.