ನ್ಯೂಸ್ ನಾಟೌಟ್ : ಸುಳ್ಯ ತಾಲೂಕಿನ ಕೋಲ್ಚಾರು ಸರಕಾರಿ ಶಾಲಾ ಮೈದಾನದಲ್ಲಿ ‘ಆಲೆಟ್ಟಿ ಕ್ರಿಕೆಟ್ ಬೋರ್ಡ್ ಮತ್ತು ಹಳೆ ವಿದ್ಯಾರ್ಥಿಗಳ ಸಂಘ ಕೋಲ್ಚಾರು’ ಇದರ ಸಹಯೋಗದಲ್ಲಿ ಆಲೆಟ್ಟಿ ಗ್ರಾಮದ 8 ತಂಡಗಳ ಲೀಗ್ ಮಾದರಿಯ ಹೊನಲು ಬೆಳಕಿನ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ‘ ನಮ್ಮೂರ ಕ್ರಿಕೆಟ್ ಹಬ್ಬ’ನಡೆಯಿತು.
ಡಿ.9 ರಂದು ಸಂಜೆ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟದ ಟ್ರೋಫಿಯನ್ನು ಮಾಜಿ ಸಚಿವ ಎಸ್.ಅಂಗಾರ ರವರು ಅನಾವರಣಗೊಳಿಸಿದ್ದು,ಹಿರಿಯ ಕ್ರೀಡಾಪಟು ಗಿರಿಜಾ ಶಂಕರ ತುದಿಯಡ್ಕ ಪಂದ್ಯಾಟವನ್ನು ಉದ್ಘಾಟಿಸಿದರು. ಎ.ಓ.ಎಲ್.ಇ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ ಪಂದ್ಯಾಟದ ಮೈದಾನವನ್ನು ಅನಾವರಣಗೊಳಿಸಿದರು.ಎ.ಪಿ.ಎಲ್ ಸಮಿತಿ ಅಧ್ಯಕ್ಷ ಹರೀಶ್ ಕೊಯಿಂಗಾಜೆ ಅಧ್ಯಕ್ಷತೆ ವಹಿಸಿದ್ದರು.
ಹೊನಲು ಬೆಳಕಿನ ನಮ್ಮೂರ ಕ್ರಿಕೆಟ್ ಹಬ್ಬದಲ್ಲಿ ಹಿರಿಯ ಆಟಗಾರರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಮುಖ್ಯ ಅತಿಥಿಗಳಾಗಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್ ಕೊಯಿಂಗಾಜೆ, ತಾ.ಪಂ.ಮಾಜಿ ಅಧ್ಯಕ್ಷ ಜಯಪ್ರಕಾಶ್ ಕುಂಚಡ್ಕ, ಆಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕರುಣಾಕರ ಹಾಸ್ಪಾರೆ, ಯುವ ಉದ್ಯಮಿ ವಿಕ್ರಂ ಅಡ್ಪಂಗಾಯ, ಆಲೆಟ್ಟಿ ಪಂಚಾಯತ್ ಮಾಜಿ ಅಧ್ಯಕ್ಷ ಪುರುಷೋತ್ತಮ ಕೋಲ್ಚಾರು, ಆಲೆಟ್ಟಿ ಪಂಚಾಯತ್ ಉಪಾಧ್ಯಕ್ಷೆ ಕಮಲಾ ನಾಗಪಟ್ಟಣ, ಪಂ.ಸದಸ್ಯ ಧರ್ಮಪಾಲ ಕೊಯಿಂಗಾಜೆ, ಸತ್ಯ ಕುಮಾರ್ ಆಡಿಂಜ, ಗೀತಾ ಕೋಲ್ಚಾರು, ಕುಸುಮಾವತಿ ಬಿಲ್ಲರಮಜಲು, ನಾಗಪಟ್ಟಣ ಸದಾಶಿವ ದೇವಸ್ಥಾನದ ವ್ಯ.ಸ.ಅಧ್ಯಕ್ಷ ದಿನೇಶ್ ಕೋಲ್ಚಾರು, ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಗುರುದತ್ ನಾಯಕ್, ಯುವ ಉದ್ಯಮಿ ಶಾಫಿ ಕುತ್ತಮೊಟ್ಟೆ, ಕೋಲ್ಚಾರು ಅರಣ್ಯ ರಕ್ಷಕ ಪತ್ರಪ್ಪ ಚವಡಪ್ಪನವರ್, ಶಾಲಾ ಮುಖ್ಯ ಶಿಕ್ಷಕ ಚಿನ್ನಸ್ವಾಮಿ ಶೆಟ್ಟಿ,ನಿವೃತ್ತ ಶಿಕ್ಷಕಿ ನಾಗವೇಣಿ ಕೊಯಿಂಗಾಜೆ, ಸರಕಾರಿ ಆಸ್ಪತ್ರೆ ಆಪ್ತ ಸಮಾಲೋಚಕ ರಾಜೇಶ್ ಕುಡೆಕಲ್ಲು ಉಪಸ್ಥಿತರಿದ್ದರು.
ಪಂದ್ಯಾಟದಲ್ಲಿ ವಿನ್ನರ್ ರೂ. 32,222/- ಎ.ಪಿ.ಎಲ್ ಟ್ರೋಫಿ, ರನ್ನರ್ ಅಪ್ ರೂ. 16,166/- ಎ.ಪಿ.ಎಲ್ ಟ್ರೋಫಿ ಹಾಗೂ ವೈಯುಕ್ತಿಕ ಬಹುಮಾನಗಳನ್ನು ಪಡೆದುಕೊಂಡರು.ಈ ಸಂದರ್ಭ ಆಕರ್ಷಕ ಸಿಡಿ ಮದ್ದಿನ ಪ್ರದರ್ಶನ ನಡೆಯಿತು. ಆಟಗಾರರಿಗೆ ಮತ್ತು ಕ್ರೀಡಾಭಿಮಾನಿಗಳಿಗೆ ಮಧ್ಯಾಹ್ನ ಮತ್ತು ರಾತ್ರಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು.