ನ್ಯೂಸ್ ನಾಟೌಟ್ : ಲವ್ ಜಿಹಾದ್ (Love Jihad) ವಿರುದ್ಧ ಧ್ವನಿಯೆತ್ತುವ ಬಜರಂಗದಳದಲ್ಲೇ ಅಂತರ್ಧರ್ಮೀಯ ವಿವಾಹ ಜರುಗಿದ್ದು, ಮುಸ್ಲಿಂ ಯುವತಿ ಭಜರಂಗದಳದ ಕಾರ್ಯಕರ್ತನನ್ನೇ ವರಿಸಿರುವ ಘಟನೆ ಮಂಗಳೂರು ಸಮೀಪದ ಸುರತ್ಕಲ್ನಿಂದ ವರದಿಯಾಗಿದೆ. ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ಪ್ರಶಾಂತ್ ಭಂಡಾರಿ ಎಂಬ ಯುವಕ ಮುಸ್ಲಿಂ ಯುವತಿಯ ಜೊತೆ ವಿವಾಹವಾಗಿರುವ ಫೋಟೋಗಳು ಇದೀಗ ವೈರಲ್ ಆಗುತ್ತಿದೆ.
ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ 7ನೇ ಬ್ಲಾಕ್ ಕಾಟಿಪಳ್ಳದ ಯುವಕ ಪ್ರಶಾಂತ್ ಭಂಡಾರಿ (31) ಹಾಗೂ 3ನೇ ಬ್ಲಾಕ್ ಆಶ್ರಯ ಕಾಲೋನಿ ನಿವಾಸಿ ಆಯೇಷಾ (19) ನ.30ರಂದೇ ನಾಪತ್ತೆಯಾಗಿದ್ದರು.ಇದೀಗ ಇವರಿಬ್ಬರು ವಿವಾಹವಾಗಿದ್ದಾರೆ ಎಂದು ಹೇಳಲಾಗಿದ್ದು, ಪ್ರಶಾಂತ್ ಭಂಡಾರಿ ಮುಸ್ಲಿಂ ಯುವತಿ ಜೊತೆ ವಿವಾಹವಾಗಿದ್ದಾರೆ ಎಂದು ಹೇಳಲಾಗುತ್ತಿರುವ ಫೋಟೋಗಳು ಲಭ್ಯವಾಗಿವೆ.
ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸಿದ ಬಳಿಕ ಈ ಜೋಡಿ ಈಗ ವಿವಾಹವಾಗಿದ್ದಾರೆ. ಅಂದಹಾಗೆ ಪ್ರಶಾಂತ್, ಸುರತ್ಕಲ್ ಪೊಲೀಸ್ ಠಾಣೆಯ ರೌಡಿ ಶೀಟರ್ ಆಗಿದ್ದಾನೆ.ದೀಪಕ್ ರಾವ್ ಹ**ತ್ಯೆ ಆರೋಪಿ ಪಿಂಕಿ ನವಾಜ್ ಎಂಬಾತನ ಹ**ತ್ಯೆಗೂ ಪ್ರಶಾಂತ್ ಭಂಡಾರಿ ಯತ್ನಿಸಿದ್ದ ಎಂದು ಆರೋಪಿಸಲಾಗಿದೆ. ಆಯೇಷಾ ಪೋಷಕರು ಸದ್ಯ ಸುರತ್ಕಲ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ.