ನ್ಯೂಸ್ ನಾಟೌಟ್ : ಆನ್ಲೈನ್ ಫುಡ್ ಆರ್ಡರ್ ಮಾಡುವಾಗ ಜೀವ ಕಳೆದು ಕೊಂಡ ಇಲಿ,ಹಲ್ಲಿ,ಕೂದಲು,ಜಿರಳೆ ಸಿಕ್ಕಿರುವುದರ ಬಗ್ಗೆ ನೀವೆಲ್ಲಾ ಕೇಳಿದ್ದೀರಿ.ಈ ಬಗ್ಗೆ ಗ್ರಾಹಕರು ಕೂಡ ದೂರನ್ನು ಸಲ್ಲಿಸುತ್ತಲೇ ಇದ್ದಾರೆ.ಆದರೂ ಈ ಮಿಸ್ಟೇಕ್ಗಳು ಪದೇ ಪದೇ ಆಗುತ್ತಲೇ ಇರುತ್ತವೆ. ಇದೀಗ ಇಂತಹುದ್ದೇ ಮತ್ತೊಂದು ಘಟನೆ ವರದಿಯಾಗಿದೆ.ಆದರೆ ಈ ಬಾರಿ ಪ್ರಾಣಕಳೆದುಕೊಂಡ ಜೀವಿಗಳು ಅಲ್ಲ,ಬದಲಾಗಿ ಜೀವಂತವಾಗಿರುವ ಹುಳವೇ ಪ್ರತ್ಯಕ್ಷವಾಗಿದೆ.
ಹೌದು, ಬೆಂಗಳೂರು ನಗರದ ನಿವಾಸಿಯೊಬ್ಬರು ಸ್ವಿಗ್ಗಿಯಲ್ಲಿ ಆರ್ಡರ್ ಮಾಡಿದ ಆಹಾರದಲ್ಲಿ ಜೀವಂತವಾಗಿರುವ ಬಸವನಹುಳು ಸಿಕ್ಕಿದೆ. ಇದನ್ನು ನೋಡಿದ ಗ್ರಾಹಕರು ಹೌಹಾರಿದ್ದಾರೆ.ಇತ್ತೀಚಿನ ದಿನಗಳಲ್ಲಿ ಆನ್ಲೈನ್ ಮೂಲಕ ಫುಡ್ ಆರ್ಡರ್ ಮಾಡುವವರ ಸಂಖ್ಯೆಯೇ ಹೆಚ್ಚು. ಕೆಲವೇ ನಿಮಿಷದಲ್ಲಿ ಮನೆಗೆ ತಲುಪುತ್ತೆ ಅನ್ನೋ ಕಾರಣಕ್ಕೆ ಆನ್ಲೈನ್ನಲ್ಲಿ ಫುಡ್ ಆರ್ಡರ್ ಮಾಡೋದಕ್ಕೆ ಇಷ್ಟಪಡುತ್ತಾರೆ.ಆದರೆ, ಇತ್ತೀಚಿಗೆ ಬೆಂಗಳೂರಿನ ಸ್ಥಳೀಯ ನಿವಾಸಿಯೊಬ್ಬರು ಆಹಾರ ವಿತರಣಾ ಅಪ್ಲಿಕೇಶನ್ ಸ್ವಿಗ್ಗಿ ಮೂಲಕ ಜನಪ್ರಿಯ ರೆಸ್ಟೋರೆಂಟ್ ‘ಲಿಯಾನ್ ಗ್ರಿಲ್’ನಿಂದ ಆರ್ಡರ್ ಮಾಡಿದ ಸಲಾಡ್ನಲ್ಲಿ ಜೀವಂತ ಬಸವ ಹುಳುವನ್ನು ಕಂಡು ಅಸಹ್ಯ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಕೆಟ್ಟ ಅನುಭವವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ತಮ್ಮ ಪೋಸ್ಟ್ನೊಂದಿಗೆ ವೀಡಿಯೊವನ್ನು ಹಂಚಿಕೊಂಡಿದ್ದಾರೆ ಸಿಂಗ್, ತಮ್ಮ ತಾಜಾ ಸಲಾಡ್ನಲ್ಲಿ ಬಸವನ ಹುಳು ಸಿಕ್ಕಿದ್ದನ್ನು ಬಹಿರಂಗಪಡಿಸಿದರು. ವೀಡಿಯೋದಲ್ಲಿ ತರಕಾರಿಗಳಿಂದ ತುಂಬಿದ ಬೌಲ್ನ್ನು ನೋಡಬಹುದು. ಇದರ ಮೇಲೆ ಸಣ್ಣ ಬಸವನ ಹುಳು ಚಲಿಸುತ್ತಿರುವುದನ್ನು ನೋಡಿದ್ರೆ ಅಸಹ್ಯವೆಂಬಂತಿದೆ.ತಮ್ಮ ಟ್ವೀಟ್ನಲ್ಲಿ, ‘ಲಿಯಾನ್ ಗ್ರಿಲ್ನಿಂದ ಮತ್ತೆ ಎಂದಿಗೂ ಆರ್ಡರ್ ಮಾಡುವುದಿಲ್ಲ’ ಎಂದು ಹೇಳಿದ್ದಾರೆ. ಕಾಮೆಂಟ್ಗಳ ವಿಭಾಗದಲ್ಲಿ, ‘ನಾನು ಹುಳುವಿದ್ದ ಸಲಾಡ್ ಸ್ವೀಕರಿಸಿದ್ದು ಮಾತ್ರವಲ್ಲದೆ, ಆರ್ಡರ್ ಮಾಡಿದ ಪಾನೀಯ ಸಹ ಕೆಟ್ಟದಾಗಿತ್ತು ಎಂದು ಸಿಂಗ್ ಬಹಿರಂಗಪಡಿಸಿದ್ದಾರೆ.
ಘಟನೆಗೆ ಪ್ರತಿಕ್ರಿಯಿಸಿದ ಸ್ವಿಗ್ಗಿ, ಎಕ್ಸ್ನಲ್ಲಿ ಧವಲ್ ಸಿಂಗ್ನ ಪೋಸ್ಟ್ಗೆ ಪ್ರತಿಕ್ರಿಯೆ ನೀಡಿ, ಘಟನೆಯನ್ನು ಭಯಾನಕ ಎಂದು ತಿಳಿಸಿದೆ. ಸ್ವಿಗ್ಗಿ, ಆರಂಭದಲ್ಲಿ ಕೇವಲ ಭಾಗಶಃ ಮರುಪಾವತಿಯನ್ನು ಮಾತ್ರ ನೀಡಿತು. ಆದರೆ ನಂತರ ಸಂಪೂರ್ಣ ಆರ್ಡರ್ಗೆ ಸಂಪೂರ್ಣ ಮರುಪಾವತಿಯನ್ನು ಒದಗಿಸುವ ಮೂಲಕ ಅದನ್ನು ಸರಿಪಡಿಸಿತು ಎಂದು ಸಿಂಗ್ ಸ್ಪಷ್ಟಪಡಿಸಿದ್ದಾರೆ.ಧವಲ್ ಸಿಂಗ್ ಹಂಚಿಕೊಂಡಿರುವ ವೀಡಿಯೋಗೆ ನೆಟ್ಟಿಗರು ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ. ‘ಕಳಪೆ ನೈರ್ಮಲ್ಯ ಮತ್ತು ಸೇವೆಯ ಹಿಂದಿನ ನಿದರ್ಶನಗಳನ್ನು ಉಲ್ಲೇಖಿಸಿ ರೆಸ್ಟೋರೆಂಟ್ ಅನ್ನು ತಕ್ಷಣವೇ ಬ್ಲ್ಯಾಕ್ ಲಿಸ್ಟ್ಗೆ ಸೇರಿಸಬೇಕೆಂದು’ ಒಬ್ಬ ಬಳಕೆದಾರರು ಒತ್ತಾಯಿಸಿದ್ದಾರೆ.