ನ್ಯೂಸ್ ನಾಟೌಟ್: ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಚೊಚ್ಚಲ ಜಯಭೇರಿಯಾಗಿದೆ. ವಿಶೇಷವೆಂದರೆ ಪ್ರಸಕ್ತ ಚುನಾವಣೆಯಲ್ಲಿ ಶಾಸಕರಾದ ಆಯ್ಕೆಯಾದವರಲ್ಲಿ 15 ಮಂದಿ ವೈದ್ಯರು!
ತೆಲಂಗಾಣದಲ್ಲಿ ಸರ್ಕಾರ ರಚಿಸಲು ಬೇಕಾದ ಬಹುಮತವನ್ನು ಕಾಂಗ್ರೆಸ್ ಪಕ್ಷ ಪಡೆದುಕೊಂಡಿದೆ. ರಾಜ್ಯಾದ್ಯಂತ ಕಾಂಗ್ರೆಸ್ ಪಕ್ಷ ಭರ್ಜರಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ ಮತ್ತು ಬಿಆರ್ಎಸ್ ನಡುವಿನ ಈ ಪ್ರತಿಷ್ಠಿತ ಚುನಾವಣೆಯಲ್ಲಿ 15 ವೈದ್ಯರು ತೆಲಂಗಾಣ ವಿಧಾನಸಭೆಯ ಶಾಸಕರಾಗಿ ಆಯ್ಕೆಯಾದರು. ಅದರಲ್ಲಿ 11 ವೈದ್ಯರು ಕಾಂಗ್ರೆಸ್ನಿಂದ ಆಯ್ಕೆಯಾಗಿದ್ದು, ಒಬ್ಬರು ಬಿಜೆಪಿಯಿಂದ ಮತ್ತು ಮೂವರು ವೈದ್ಯರು ಬಿಆರ್ ಎಸ್ ಪಕ್ಷದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದ ವೈದ್ಯರು ಇದೀಗ ಸಾರ್ವಜನಿಕ ಸಮಸ್ಯೆಗಳನ್ನು ಪರಿಹರಿಸಲು ರಾಜಕೀಯ ಪ್ರವೇಶಿಸಿರುವುದು ಗಮನಾರ್ಹವಾಗಿದೆ.
ಶಾಸಕರಾಗಿ ಆಯ್ಕೆಯಾದ ವೈದ್ಯರು
1. ಡಾ. ಪಾಲ್ವಾಯಿ ಹರೀಶ್, ಎಂಎಸ್ ಆರ್ಥೋ, ಸಿರ್ಪುರ – ಬಿಜೆಪಿ, 2. ಡಾ. ವಂಶಿಕೃಷ್ಣ, ಎಂಎಸ್ ಜನರಲ್ ಸರ್ಜನ್, ಅಚ್ಚಂಪೇಟ, ಕಾಂಗ್ರೆಸ್, 3. ಡಾ. ಮುರಳಿ ನಾಯಕ್, ಎಂಎಸ್ ಜನರಲ್ ಸರ್ಜನ್, ಮಹಬೂಬಾಬಾದ್, -ಕಾಂಗ್ರೆಸ್, 4. ಡಾ. ಸತ್ಯನಾರಾಯಣ, ಎಂಎಸ್ ಜನರಲ್ ಸರ್ಜನ್, ಮಣಕೊಂಡೂರು,-ಕಾಂಗ್ರೆಸ್, 5. ಡಾ. ಮೈನಂಪಲ್ಲಿ ರೋಹಿತ್ ರಾವ್, ಎಂಬಿಬಿಎಸ್, ಮೇದಕ್,- ಕಾಂಗ್ರೆಸ್, 6. ಡಾ.ಪರ್ಣಿಕಾ ರೆಡ್ಡಿ, ಜನರಲ್ ವೈದ್ಯಾಧಿಕಾರಿ, ನಾರಾಯಣಪೇಟೆ- ಕಾಂಗ್ರೆಸ್, 7. ಡಾ. ಸಂಜೀವ ರೆಡ್ಡಿ, ಮಕ್ಕಳ ವೈದ್ಯರು, ನಾರಾಯಣಖೇಡ್, -ಕಾಂಗ್ರೆಸ್., 8. ಡಾ. ವಿವೇಕ್ ವೆಂಕಟಸ್ವಾಮಿ, ಎಂಬಿಬಿಎಸ್, ಚೆನ್ನೂರು, -ಕಾಂಗ್ರೆಸ್, 9. ಡಾ. ಭೂಪತಿ ರೆಡ್ಡಿ, ಎಂಎಸ್ ಆರ್ಥೋ, ನಿಜಾಮಾಬಾದ್ ಗ್ರಾಮಾಂತರ,-ಕಾಂಗ್ರೆಸ್, 10. ಡಾ. ಕುಚುಕುಳ್ಳ ರಾಜೇಶ್ ರೆಡ್ಡಿ, ಎಂಡಿಎಸ್, ನಾಗರಕರ್ನೂಲ್-ಕಾಂಗ್ರೆಸ್, 11. ಡಾ. ರಾಗಮಾಯಿ, ಎಂಡಿ ಶ್ವಾಸಕೋಶಶಾಸ್ತ್ರಜ್ಞ, ಸತ್ತುಪಲ್ಲಿ- ಕಾಂಗ್ರೆಸ್, 12. ಡಾ. ತೆಲ್ಲಂ ವೆಂಕಟ್ ರಾವ್, ಎಂಎಸ್ ಆರ್ಥೋ, ಭದ್ರಾಚಲಂ- ಬಿ.ಆರ್.ಎಸ್, 13. ಡಾ. ಸಂಜಯ್ ಕುಮಾರ್, ಎಂಎಸ್ ನೇತ್ರವಿಜ್ಞಾನ, ಜಗಿತ್ಯಾಲ- ಬಿ.ಆರ್.ಎಸ್., 14. ಡಾ. ಕಲ್ವಕುಂಟ್ಲ ಸಂಜಯ್, ಎಂ.ಸಿ.ಎಚ್.ನ್ಯೂರೋ, ಕೋರುಟ್ಲ-ಬಿ.ಆರ್.ಎಸ್ 15. ಡಾ. ರಾಮಚಂದ್ರ ನಾಯ್ಕ್, ಎಂಎಸ್ ಜನರಲ್ ಸರ್ಜನ್, ಡೋರ್ನಕಲ್- ಕಾಂಗ್ರೆಸ್.