ನ್ಯೂಸ್ ನಾಟೌಟ್ :ಬಹುಶಃ ಪಾನೀಪುರಿ ಇಷ್ಟಪಡದವರು ಯಾರಿಲ್ಲ ಅನ್ಸುತ್ತೆ.. ಪಾನೀಪುರಿಯ ಖಾರ-ಖಾರ ಹುಳಿ -ಹುಳಿ ನೀರಿಗಾಗಿಯೇ ಪಾನೀಪುರಿ ಮಾರುವವನ ಸುತ್ತ ರಾಶಿ ಜನ ಸೇರುತ್ತಾರೆ.ಹೀಗೆ ಬಾಯಿಗೆ ಟೇಸ್ಟಿಯಾಗಿರುವ ಪಾನೀಪುರಿ ನಾಲಗೆಗೆ ಸಕತ್ ಮಜಾ ನೀಡುತ್ತೆ ಅನ್ನೋದರಲ್ಲಿ ಎಡರು ಮಾತಿಲ್ಲ.
ಆದರೆ ನಾಲಗೆಗೆ ಬೊಂಬಾಟ್ ರುಚಿ ಹೆಚ್ಚಿಸುವ ಈ ಪಾನೀಪುರಿ ನೀರನ್ನು ಹೇಗೆ ತಯಾರಿಸುತ್ತಾರೆ ಗೊತ್ತಾ? ಇಂಥದ್ದೊಂದು ವಿಡಿಯೋ ಇದೀಗ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಲಾಗಿದೆ.ಆ ವಿಡಿಯೋ ನೋಡಿದ್ರೆ ಖಂಡಿತಾ ನೀವು ಶಾಕ್ಗೊಳಗಾಗುತ್ತೀರಾ?
ಶೇರ್ ಮಾಡಲಾದ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಪಾನೀಪುರಿ ನೀರನ್ನು ತಯಾರಿಸುತ್ತಿರುವುದನ್ನು ಕಾಣಬಹುದು. ಮೊದಲು ಹಸಿರು ಸೊಪ್ಪು ಮತ್ತು ಮೆಣಸಿನಕಾಯಿಗಳೊಂದಿಗೆ ದಪ್ಪ ಪೇಸ್ಟ್ ಅನ್ನು ತಯಾರಿಸುತ್ತಿದ್ದಾರೆ. ನಂತರ ಆ ಪೇಸ್ಟ್ ಅನ್ನು ಹದ ಮಾಡಲು ಹೆಚ್ಚಿನ ನೀರು ಸೇರಿಸುವುದನ್ನು ಕಾಣಬಹುದು. ಬಳಿಕ ಅದಕ್ಕೆ ಒಂದಷ್ಟು ಹುಣಸೆಹಣ್ಣು ಮತ್ತು ನೀರು ಸೇರಿಸಿ ರುಬ್ಬುವುದನ್ನು ಕೂಡಾ ಕಾಣಬಹುದು. ಇಲ್ಲಿ ಪಾನೀಪುರಿ ನೀರನ್ನು ತಯಾರಿಸುವ ಸಂಪೂರ್ಣ ಪ್ರಕ್ರಿಯೆ ಬರಿಗೈಯ್ಯಲ್ಲಿಯೇ ಸಾಗುತ್ತದೆ. ಈ ಎಲ್ಲಾ ಪೇಸ್ಟ್ ಗಳನ್ನು ಜೊತೆಯಾಗಿ ಮಿಶ್ರಣ ಮಾಡಿ ನಂತರ ಅದಕ್ಕೆ ಟ್ಯಾಪ್ ನೀರನ್ನು ಸೇರಿಸಲಾಗುತ್ತದೆ..!
@yummybites_kt ಎಂಬ ಬಳಕೆದಾರರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿದ್ದಾರೆ. ವಿಡಿಯೋ 1.8 ಮಿಲಿಯನ್ಗೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ.ಇಲ್ಲಿ ಪಾನೀಪೂರಿ ನೀರನ್ನು ತಯಾರಿಸುವ ಬಗೆ ನೋಡಿ ವೀಕ್ಷಕರು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.