ನ್ಯೂಸ್ ನಾಟೌಟ್ :ಪೆಟ್ರೋಲ್ ಬಂಕ್ನಲ್ಲಿ ಸಹೋದರನ ಬರುವಿಕೆಗಾಗಿ ಕಾದುಕೊಂಡಿದ್ದ ಸಹೋದರಿಯನ್ನೇ ಮುಸುಕುಧಾರಿಗಳಿಬ್ಬರು ಹಾಡಹಗಲೇ ಕಿಡ್ನಾಪ್ ಮಾಡಿರುವ ಘಟನೆ ನಡೆದಿದೆ.ಸದ್ಯ ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಭಾರಿ ವೈರಲ್ ಆಗಿದೆ.
ಮಧ್ಯ ಪ್ರದೇಶದ (Madhya Pradesh) ಗ್ವಾಲಿಯರ್ನಲ್ಲಿ (Gwalior) ಈ ಘಟನೆ ಸಂಭವಿಸಿದ್ದು,ಮುಸುಕುಧಾರಿಗಳಿಬ್ಬರು ಒತ್ತಾಯದಿಂದ ಯುವತಿಯನ್ನು ಎತ್ತಿಕೊಂಡು ಹೋಗುತ್ತಿರುವ ವಿಡಿಯೋ ಸೆರೆಯಾಗಿದೆ. ದ್ವಿಚಕ್ರ ವಾಹನದ ಮೇಲೆ ಬಂದ ಮುಸುಕುಧಾರಿಗಳು ಏಕಾಏಕಿ ಬಂದು ಯುವತಿಯನ್ನು ಬೈಕ್ನಲ್ಲಿ ಕುಳ್ಳಿರಿಸಿಕೊಂಡು ಹೋಗುವುದನ್ನು ವಿಡಿಯೋದಲ್ಲಿ ಕಾಣಬಹುದು.ಆದರೂ ಈ ವೇಳೆ ಸ್ಥಳದಲ್ಲಿ ಹಾಜರಿದ್ದ ಇತರರು ಯಾವುದೇ ಪ್ರತಿಕ್ರಿಯೆ ನೀಡದೇ ಮೂಕಪ್ರೇಕ್ಷಕರಾಗಿ ನಿಂತು ನೋಡುತ್ತಿರುವುದನ್ನು ಕೂಡ ಕಾಣಬಹುದು.ಸಂತ್ರಸ್ತ ಯುವತಿ ಬಿಎ ಪ್ರಥಮ ವರ್ಷದ ವಿದ್ಯಾರ್ಥಿನಿ ಎಂದು ತಿಳಿದು ಬಂದಿದೆ. ಮಧ್ಯ ಪ್ರದೇಶದ ಭಿಂಡ್ ಜಿಲ್ಲೆಯ ವಾಸಿಯಾಗಿದ್ದು, ಸೋಮವಾರ ಆಕೆ ಬಸ್ನಿಂದ ಕೆಳಗಿಳಿಯುತ್ತಿದ್ದಂತೆ ಅಪರಿಚಿತರು ಆಕೆಯನ್ನು ಅಪಹರಿಸಿದ್ದಾರೆ. ಸಂತ್ರಸ್ತ ಯುವತಿ ದೀಪಾವಳಿ ಹಬ್ಬಕ್ಕಾಗಿ ಭಿಂಡ್ಗೆ ಹೋಗಿದ್ದಳು. ಪೆಟ್ರೋಲ್ ಪಂಪ್ನಲ್ಲಿ ತನ್ನ ಸಹೋದರನ ಬರುವಿಕೆಗಾಗಿ ಕಾಯುತ್ತಿದ್ದರು. ಆಗ ಈ ಘಟನೆ ನಡೆದಿದೆ.
ಸೆರೆಯಾದ ವಿಡಿಯೋವನ್ನು ಸರಿಯಾಗಿ ಗಮನಿಸಿದಾಗ ಇಬ್ಬರ ಪೈಕಿ ಒಬ್ಬ ವ್ಯಕ್ತಿ ಹೆಲ್ಮೆಟ್ ಧರಿಸಿದ್ದರೆ, ಮತ್ತೊಬ್ಬ ವ್ಯಕ್ತಿ ಬಟ್ಟೆಯಿಂದ ತನ್ನ ಮುಖವನ್ನು ಮುಚ್ಚಿಕೊಂಡಿದ್ದಾನೆ. ಪೆಟ್ರೋಲ್ ಬಂಕ್ಗೆ ಆಗಮಿಸುವ ಇಬ್ಬರ ಪೈಕಿ ಒಬ್ಬ ಬೈಕ್ನಿಂದ ಇಳಿದು, ಯುವತಿಯನ್ನು ಎತ್ತಿಕೊಂಡು ಆಕೆಯನ್ನು ಬೈಕ್ನಲ್ಲಿ ಕೂರಿಸುತ್ತಾನೆ. ಬಳಿಕ ಅಲ್ಲಿಂದ ಹೊರಟು ಹೋಗುತ್ತಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.ಹಾಡಹಗಲಲ್ಲೇ ಇಂತಹ ಭಯಾನಕ ಘಟನೆಗಳು ನಡೆಯುತ್ತವೆಯಾದರೆ ಮಹಿಳೆಯರಿಗೆ ರಕ್ಷಣೆ ಎಲ್ಲಿದೆ? ಅಥವಾ ಯಾವುದೇ ಭಯವಿಲ್ಲದೇ ಮುಸುಕುಧಾರಿಗಳಿಬ್ಬರೂ ಈ ಕೃತ್ಯ ಎಸಗಿದ್ದು,ಈ ಯುವತಿಯನ್ನು ಎತ್ತ ಕಡೆ ಕರೆದುಕೊಂಡು ಹೋಗಿದ್ದಾರೆ ಅನ್ನೋದನ್ನು ಕೂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ಈ ಬಗ್ಗೆ ಮಾತನಾಡಿದ ಗ್ವಾಲಿಯರ್ನ ನಾಕಾ ಚಂದ್ರವದ್ನಿ ಪೆಟ್ರೋಲ್ ಬಂಕ್ ಬಳಿ ಮೋಟಾರ್ಬೈಕ್ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಯುವತಿಯನ್ನು ಅಪಹರಿಸಿದ್ದಾರೆ. ಪ್ರಕರಣದ ತನಿಖೆಗಾಗಿ ಎರಡು ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಹುಡುಗಿಯನ್ನು ಪತ್ತೆ ಮಾಡುವುದು ಮತ್ತು ರಕ್ಷಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ. ಹುಡುಗಿಯ ಕುಟುಂಬದ ಪ್ರಕಾರ, ಆಕೆಯ ವಯಸ್ಸು 19 ಎಂದು ಎಎಸ್ಪಿ ಕ್ರೈಮ್ ರಿಷಿಕೇಶ್ ಮೀನಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.