ನ್ಯೂಸ್ ನಾಟೌಟ್ : ಪಶುವೈದ್ಯಕೀಯ ಇಲಾಖೆ ಮತ್ತು ಜಿಲ್ಲಾ ಪಂಚಾಯತ್ ವತಿಯಿಂದ ರುಡ್ಸೆಟ್ ಕಾರ್ಯಕರ್ತರಿಗೆ ಭೋಧನಾ ತರಬೇತಿ ಆಯೋಜಿಸಲಾಗಿತ್ತು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ವತಿಯಿಂದ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಮತ್ತು ಕರ್ನಾಟಕ ಜಾನುವಾರು ಅಭಿವೃದ್ಧಿ ಸಂಸ್ಥೆ ಹಾಗೂ ರಾಷ್ಟ್ರೀಯ ಗೋಕುಲ್ ಮಿಷನ್ ಸಹಯೋಗದೊಂದಿಗೆ ಇಂದು(ನ.8) ದ. ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯ ರುಡ್ಸೆಟ್ ಸಂಸ್ಥೆಯಲ್ಲಿ ಮೈತ್ರಿ ಕಾರ್ಯಕರ್ತರಿಗೆ ಒಂದು ತಿಂಗಳ ಬೋಧನಾ ತರಬೇತಿಯನ್ನು ಆರಂಭಗೊಂಡಿದೆ.
ದ.ಕ ಜಿಲ್ಲಾ ಪಶುಪಾಲನಾ ಇಲಾಖೆಯ ಉಪನಿರ್ದೇಶಕರಾದ ಡಾ. ಅರುಣ ಕುಮಾರ್ ಶೆಟ್ಟಿ . ಎನ್ ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು .
ಈ ಸಂದರ್ಭದಲ್ಲಿ ಶಿಬಿರ ಫಲಾನುಭವಿಗಳಿಗೆ ಬೋಧನಾ ಕಿಟ್ ವಿತರಣೆ ಮಾಡಲಾಯಿತು.
ಈ ವೇಳೆ ರುಡ್ಸೇಟ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಶ್ರೀ ಗಿರಿಧರ ಕಲ್ಲಾಪೂರ , ನಿರ್ದೇಶಕ ಎಂ. ಸುರೇಶ್, ಡಾ. ಮಂಜಾ ನಾಯ್ಕ್, ಡಾ. ರವಿ ಕುಮಾರ್ , ಡಾ. ವಿನಯ ಕುಮಾರ್ ಹಾಗೂ ಬೆಳ್ತಂಗಡಿ ತಾಲೂಕಿನ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.