ನ್ಯೂಸ್ ನಾಟೌಟ್ : ಮಹಿಳೆಯೊಬ್ಬಳು ಮೆಟ್ರೋ ರೈಲಿನಲ್ಲಿ ದೇಣಿಗೆ ಸಂಗ್ರಹ ಮಾಡಲು ಹೋಗಿ ಪೊಲೀಸರ ಅತಿಥಿಯಾದ ಘಟನೆ ಬೆಂಗಳೂರಿನ ಬೆನ್ನಿಗಾನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ.
ಭಾಗ್ಯ ಎಂಬ ಮಹಿಳೆಯಿಂದ ಮೆಟ್ರೋ ರೈಲಿನಲ್ಲಿ ದೇಣಿಗೆ ಸಂಗ್ರಹ ಮಾಡಿದ್ದು, ದೇಣಿಗೆ ಸಂಗ್ರಹಿಸುತ್ತಿದ್ದ ವೇಳೆ ಹಿಡಿದು ದಂಡ ವಿಧಿಸಿದ ಸೆಕ್ಯೂರಿಟಿ ಗಾರ್ಡ್ ಗೆ ಜನರು ಮೆಚ್ಚುಗೆ ಸೂಚಿಸಿದ್ದಾರೆ. ಮಹಿಳೆ ಮೇಲೆ ಮೆಟ್ರೋ ಕಾಯಿದೆ ಸೆಕ್ಷನ್ 59 ರ ಅಡಿ ಪ್ರಕರಣ ಮಹಿಳೆ ವಿರುದ್ಧ ದಾಖಲು ಮಾಡಿದ ಮೆಟ್ರೋ ನಿಗಮ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದೆ.
ಮೆಟ್ರೋದಲ್ಲಿ ದೂರವಾಣಿ ನಗರದಲ್ಲಿರುವ ಸಮಾಜ ಸೇವೆ ಸಂಸ್ಥೆಯೊಂದರ ಹೆಸರು ಹೇಳಿಕೊಂಡು ದೇಣಿಗೆ ಸಂಗ್ರಹಕ್ಕೆ ಮುಂದಾಗಿದ್ದ ಮಹಿಳೆ ಶುಕ್ರವಾರ ಮೆಟ್ರೋ ರೈಲಿನಲ್ಲಿ ಪ್ರಯಾಣಿಕರಿಂದ ದೇಣಿಗೆ ಸಂಗ್ರಹಿಸಿಕೊಂಡು ಹೋಗಿದ್ದಾರೆ. ಆದರೆ ಮಹಿಳೆ ದೇಣಿಗೆ ಸಂಗ್ರಹಿಸಿರುವುದು ಯಾರ ಗಮನಕ್ಕೂ ಬಂದಿಲ್ಲ. ಆದರೆ ಮರುದಿನ ಬೆಳಗ್ಗೆ ಶನಿವಾರದಂದು ಮತ್ತೆ ದೇಣಿಗೆ ಸಂಗ್ರಹಿಸಲು ಬೆನ್ನಿಗಾನಹಳ್ಳಿ ಮೆಟ್ರೊ ನಿಲ್ದಾಣದಲ್ಲಿ ರೈಲು ಹತ್ತಿದ್ದಾರೆ. ಮೆಟ್ರೋ ಹತ್ತುವಾಗ ಕೈಯಲ್ಲಿ ದೇಣಿಗೆ ಸಂಗ್ರಹದ ಪೆಟ್ಟಿಗೆ ತೆಗೆದುಕೊಂಡು ಬಂದಿದ್ದ ಮಹಿಳೆ ಈ ಬಾರಿ ಕ್ಯೂಆರ್ ಕೋಡ್ ಸಹ ಜೊತೆಗೆ ತಂದಿದ್ದಾಳೆ ಎನ್ನಲಾಗಿದೆ.
ಮೆಟ್ರೋದಲ್ಲಿ ದೇಣಿಗೆ ಕೇಳಿದಾಗ ಕೆಲವು ಪ್ರಯಾಣಿಕರು ಹಣ ನೀಡಿದ್ದಾರೆ. ದೇಣಿಗೆ ಸಂಗ್ರಹಿಸುತ್ತಿದ್ದ ಮಹಿಳೆಯನ್ನ ಗಮನಿಸಿದ ಸಹಾಯಕ ಭದ್ರತಾ ಸಿಬ್ಬಂದಿ, ಮಹಿಳೆಯನ್ನ ಬೈಯಪ್ಪನಹಳ್ಳಿ ನಿಲ್ದಾಣದಲ್ಲಿ ಇಳಿಸಿ ನಿಯಂತ್ರಣ ಕೊಠಡಿಯಲ್ಲಿ ಮಹಿಳೆಯನ್ನು ವಿಚಾರಿಸಿದ್ದಾರೆ. ಬಳಿಕ ಮಹಿಳೆ ಹೇಳಿಕೆ ಆಧಾರದಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ.
ಜ್ಞಾನಜ್ಯೋತಿ ಸೇವಾ ಸಂಸ್ಥೆಯ ಕಾರ್ಯದರ್ಶಿ ಎಂದು ಗುರುತಿಸಿಕೊಂಡು ಮೆಟ್ರೋದಲ್ಲಿ ದೇಣಿಗೆ ಸಂಗ್ರಹಿಸಿದ್ದ ಮಹಿಳೆಯಿಂದ 500 ರೂಪಾಯಿ ದಂಡ ಕಟ್ಟಿಸಿಕೊಂಡು, ಕ್ಷಮಾಪಣೆ ಪತ್ರ ಬರೆಸಿಕೊಂಡಿದ್ದಾರೆ ಎನ್ನಲಾಗಿದೆ.
FB PAGE : https://www.facebook.com/NewsNotOut2023
Insta : https://www.instagram.com/newsnotout/
Tweet : https://twitter.com/News_Not_Out
YouTube : https://www.youtube.com/@newsnotout8209
Koo app: https://www.kooapp.com/profile/NewsNotOut
Website : https://newsnotout.com/