ನ್ಯೂಸ್ ನಾಟೌಟ್:ರಾಷ್ಟ್ರೀಯ ಹೆದ್ದಾರಿಯ ರಸ್ತೆ ಬದಿ ಮೂತ್ರ ವಿಸರ್ಜನೆ ಮಾಡುತ್ತಿದ್ದ ವೇಳೆ ವ್ಯಕ್ತಿಯೋರ್ವರಿಗೆ ಟ್ಯಾಂಕರ್ವೊಂದು ಡಿಕ್ಕಿ ಹೊಡೆದು ಒಂದು ಕಾಲನ್ನು ಕಳೆದು ಕೊಂಡಿದ್ದರು.ಇದೀಗ 53 ವರ್ಷದ ವ್ಯಕ್ತಿಯೊಬ್ಬರಿಗೆ ಬರೋಬ್ಬರಿ ಮೊತ್ತದ ಪರಿಹಾರ ಸಿಕ್ಕಿದೆ.ಹೌದು, ಅವರಿಗೆ ಮೋಟಾರ್ ಅಪಘಾತ ಹಕ್ಕುಗಳ ನ್ಯಾಯಮಂಡಳಿ ಪರಿಹಾರವಾಗಿ ಬಡ್ಡಿ ಸಮೇತ 2 ಕೋಟಿ ಮೊತ್ತದ ಭರ್ಜರಿ ಪರಿಹಾರ ನೀಡುವಂತೆ ಆದೇಶಿಸಿದೆ.
ಈ ವ್ಯಕ್ತಿ ಎಫ್ಎಂಸಿಜಿಯಲ್ಲಿ (FMCG) ಡೆಪ್ಯೂಟಿ ಜನರಲ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು.ಹೀಗೆ ಒಂದು ದಿನ ಅವರು ತಮ್ಮ ಸ್ನೇಹಿತನ ಜೊತೆ ಮಧ್ಯಪ್ರದೇಶದ ದತಿಯಾಗೆ ತೆರಳುತ್ತಿದ್ದ ವೇಳೆ ಮೂತ್ರ ವಿಸರ್ಜನೆಗಾಗಿ ಹೆದ್ದಾರಿಯ ಸಮೀಪದಲ್ಲಿದ್ದ ಡಾಬಾವೊಂದರ ಬಳಿ ವಾಹನ ನಿಲ್ಲಿಸಿ ಮೂತ್ರ ಮಾಡುತ್ತಿದ್ದರು.ಆಗ ಈ ಅವಘಡ ಸಂಭವಿಸಿತ್ತು. ತಪ್ಪು ದಿಕ್ಕಿನಿಂದ ಬಂದ ಟ್ಯಾಂಕರೊಂದು ಮೂತ್ರ ಮಾಡುತ್ತಿದ್ದ ಇವರಿಗೆ ಡಿಕ್ಕಿ ಹೊಡೆದಿತ್ತು. 2016ರ ಅಕ್ಟೋಬರ್ 18ರಂದು ಈ ಘಟನೆ ನಡೆದಿದ್ದು, ಅಪಘಾತದಲ್ಲಿ ಮುರಿದ ಸೊಂಟಕ್ಕೆ ಚಿಕಿತ್ಸೆ ನೀಡಲಾಗುತ್ತಿತ್ತು. ಮತ್ತು ಒಂದು ಕಾಲನ್ನು ಕತ್ತರಿಸಲಾಯ್ತು. ಪೊಲೀಸ್ ದಾಖಲೆಗಳಲ್ಲಿ ಉಲ್ಲೇಖಿಸಲಾಗಿದ್ದ ಈ ಸಾಕ್ಷ್ಯಗಳ ಮೇಲೆ ಮೋಟಾರ್ ಅಪಘಾತ ಹಕ್ಕುಗಳ ನ್ಯಾಯಮಂಡಳಿ ಈ ತೀರ್ಪು ನೀಡಿದೆ. ಅಪಘಾತದಿಂದಾಗಿ ಅವರ ಕುಟುಂಬಕ್ಕೆ ಲಕ್ಷಾಂತರ ರೂ ವೆಚ್ಚವಾಗಿದ್ದು,ಅವರಿಗೆ ಶೇಕಡಾ 50ರಷ್ಟು ಶಾಶ್ವತ ಅಂಗವೈಕಲ್ಯ ಉಂಟಾಗಿದೆ. ದಿನವೂ ಕೋಲಿನ ಹಾಗೂ ವ್ಯಕ್ತಿಯ ಸಹಾಯ ಪಡೆಯಲೇಬೇಕಾಗುತ್ತದೆ. ಹೀಗಾಗಿ ನಡೆದಾಡಲು ತನ್ನ ಕೆಲಸವನ್ನು ಸುಲಭವಾಗಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ ನ್ಯಾಯಾಲಯ ಈ ಭಾರಿ ಮೊತ್ತದ ಪರಿಹಾರ ನೀಡಲು ಸೂಚಿಸಿದೆ.