ನ್ಯೂಸ್ ನಾಟೌಟ್: ಪ್ರಖರ ವಾಗ್ಮಿ ಸೌಜನ್ಯ ಪರ ಹೋರಾಟದಲ್ಲಿ ಭಾಗಿಯಾಗಿರುವ ತುಳುನಾಡಿನ ಸಂಸ್ಕೃತಿಯ ಆರಾಧಕ ತಮ್ಮಣ್ಣ ಶೆಟ್ಟಿಯವರ ಮೇಲೆ ಎಫ್ಐಆರ್ ದಾಖಲಾಗಿದೆ.
ಹಿಂದೂ ಧರ್ಮದ ಶೃದ್ಧಾ ಬಿಂದು ಸಾಧು ಸಂತರ ಅವಹೇಳಕಾರಿ ಭಾಷಣ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಕೋರ್ಟ್ ಮೂಲಕ ಬಜ್ಪೆ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಕೈಕಂಬ ಜಂಕ್ಷನ್ ನಲ್ಲಿ ಕಾರ್ಯಕ್ರಮ ಆಗಿತ್ತು. ಈ ವೇಳೆ ಸಾಧು ಸಂತರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆಂದು ರವಿ ಅನ್ನುವವರು ದೂರು ನೀಡಿದ್ದಾರೆ.
ಜನಾಂದೋಲನ ಸಭೆಯ ವೇದಿಕೆಯಲ್ಲಿ ಅತಿಥಿಯಾಗಿ ಆಗಮಿಸಿದ ತಮ್ಮಣ್ಣ ಶೆಟ್ಟಿ ಎಂಬವರು ಪ್ರಚೋದನಕಾರಿಯಾಗಿ ತುಳುವಿನಲ್ಲಿ ಹೇಳಿಕೆ ನೀಡಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ. ತಮ್ಮಣ್ಣ ಶೆಟ್ಟಿ ಹೇಳಿದ್ದಾರೆಂದು ದಾಖಲಿಸಿರುವ ದೂರಿನ ಸಾರಾಂಶ ಇಲ್ಲಿದೆ ನೋಡಿ..
“ಸ್ವಾಮೀಜಿಗಳ ಬಗ್ಗೆ ಸಂತರ ಬಗ್ಗೆ ಪ್ರಸನ್ನಕ್ಕ ಹೇಳಿದ್ರು, ಅಯ್ಯಪ್ಪ ಗುರು ಸ್ವಾಮಿಗೆ ಇರುವ ನಿಷ್ಠೆ ಇವರ ಹತ್ರ ಇಲ್ಲ. ಹಾಗಾಗಿ ಯಾವುದೇ ತಲೆಬಿಸಿ ಇಲ್ಲ. ಮುಂದೆಗೂ ನೀವು ತಲೆಬಿಸಿ ಮಾಡಿಕೊಳ್ಳಬೇಡಿ, ಈಗೆಲ್ಲ ಬಂದಿರುವವರು 10 -15 ವರ್ಷದಲ್ಲಿ ಮನೆಯಲ್ಲಿ ಭಜನೆ ಮಾಡಿ, ದೀಪ ಹಚ್ಚಿ, ಬಟ್ಟೆ ಸುತ್ತಿಕೊಂಡು ಇರುವುದು ಮಾತ್ರ, ಇವರಿಗೆಲ್ಲ ಪೀಠ ಗೀಟ ಏನಿಲ್ಲ. ಈಗಿನ ಸ್ವಾಮೀಜಿಗಳನ್ನು ನಂಬಬೇಡಿ. ಅವದೂತರನ್ನು ನಂಬಿ. ನಿತ್ಯಾನಂದರನ್ನು, ನಾರಾಯಣ ಗುರುಸ್ವಾಮಿಗಳನ್ನು, ಸಾಯಿಬಾಬಾ ಅವರನ್ನು ನಂಬಿ, ಇವರನ್ನು ಹೊರತುಪಡಿಸಿ ಯಾರನ್ನೂ ನಂಬಬೇಡಿ. ಈಗಿನ ವೇಷದ ಸ್ವಾಮಿಗಳನ್ನು ದಯಮಾಡಿ ನಂಬಲೇ ಬೇಡಿ, ಇವರೆಲ್ಲ ಸ್ವಾಮಿಗಳಲ್ಲ. ವ್ಯಾಪಾರಿಗಳು, ವ್ಯಾಪಾರಿಗಳು , ಮುಂದಿನ ದಿನಗಳಲ್ಲಿ ಇವರೆಲ್ಲ ಜೀನ್ಸ್ ಟೀ ಶರ್ಟ್ ಹಾಕಿಕೊಂಡು ಮಾರ್ಗದಲ್ಲಿ ತಿರುಗುವ ದಿನಗಳು ಬರುತ್ತವೆ” ಎಂದು ಭಾಷಣದಲ್ಲಿ ತಮ್ಮಣ್ಣ ಶೆಟ್ಟಿ ಹೇಳಿದ್ದಾರೆ ಎಂದು ತಿಳಿಸಲಾಗಿದೆ.
(ತುಳು ಭಾಷಣದ ಸಾರ: ಸ್ವಾಮಿನಕ್ಲೆನ ಬೊಕ್ಕ ಸಂತರೆನ ಬಗ್ಗೆ ಪ್ರಸನ್ನಕ್ಕೆ ಪಂಡೆರ್, ಅಯ್ಯಪ್ಪ ಗುರು ಸ್ವಾಮಿಗು ಇತ್ತಿನ ನಿಷ್ಠೆ ಮೊಕ್ಲೆಡ ಇಜ್ಜಿ. ಐರ್ ದಾತ್ರಾ ಅಕ್ಲೆನಾ ತರೆಬೆಚ್ಚಡೇ ಇಜ್ಜಾ, ನನಲ ನಿಕುಲು ತರೆಬೆಚ್ಚ ಮನ್ಪೋಚಿ, ಇತ್ತೇ ಪೂರಾ ಬತ್ತಿನ, 10 -15 ವರ್ಷದ್ ಇಲ್ಲಡು ಭಜನೆ ಮಂತು, ದೀಪ ದೀದ್, ಕುಂಟು ತುತ್ತೊಂದು ಸ್ವಾಮಿ ಮಾತ್ರ, ಮೊಕ್ಲೆಗು ಪೀಠ ಗೀಟ ಪುರ ದಾಲ ಇಜ್ಜಿ, ಇತ್ತದೆ ಸ್ವಾಮಿ ನಕ್ಲೆನು ನಂಬೋಚಿ ಅವದೂತರೆನು ನಂಬ್ಲೆ, ನಿತ್ಯಾನಂದೆರೆನು ನಂಬುಲೆ, ನಾರಾಯಣ ಗುರುಸ್ವಾಮಿಲೆನು ನಂಬುಲೆ, ಸಾಯಿಬಾಬಾನು ನಂಬ್ಲೆನು, ಬೇತೆ ಏರೆನ್ಲಾ ನಂಬೊಚಿ, ಇನಿತಾ ಈ ವೇಷದ ಸ್ವಾಮಿ ನಕ್ಲೆನು ದಯದೀದು ನಂಬೋಚಿ, ಮೊಕಲು ಸ್ವಾಮಿ ಅತ್ ಬ್ಯಾರದಕುಲು , ಮೊಕುಲು ಬ್ಯಾರದಕುಲು, ಆಯಿನಾತ್ ಬೇಗ ಮೊಕುಲು ಜೀನ್ಸ್ ಟೀ ಶರ್ಟ್ ಪಾಡ್ದ್ ಮಾರ್ಗಡು ತಿರ್ಗುನಂಚಿನ ದಿನ ಬರ್ಪುಂಡು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.