ನ್ಯೂಸ್ ನಾಟೌಟ್ : ಕೆವಿಜಿ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯಲ್ಲಿಂದು (KVG Medical College and Hospital) ವಿಶ್ವ ಮಧು ಮೇಹ ದಿನಾಚರಣೆ ಅಂಗವಾಗಿ ಮಧುಮೇಹದ ಅಪಾಯಕಾರಿ ಅಂಶಗಳ ಉಚಿತ ತಪಾಸಣಾ ಶಿಬಿರ ಹಾಗೂ ಮಾಹಿತಿ ಕಾರ್ಯಕ್ರಮ ನ.16 ರಂದು ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ ಅಧ್ಯಕ್ಷ (AOLE President) ಡಾ.ಕೆ. ವಿ ಚಿದಾನಂದ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ‘ಪ್ರತಿ ದಿನ ವ್ಯಾಯಾಮ ಮಾಡಿ, ಉತ್ತಮ ಆಹಾರ ಪದಾರ್ಥಗಳನ್ನು ಸೇವಿಸಿ. ವಾರಕ್ಕೊಮ್ಮೆ ವೈದ್ಯರನ್ನು ಭೇಟಿ ನೀಡಿ ಆರೋಗ್ಯದ ಏರುಪೇರುಗಳನ್ನು ವಿಚಾರಿಸಿಕೊಂಡು ವೈದ್ಯರ ಸಲಹೆಯನ್ನು ಪಡೆಯಿರಿ. ಪ್ರತಿ ಆಸ್ಪತ್ರೆಗಳಲ್ಲಿ, ಶಿಕ್ಷಣ ಸಂಸ್ಥೆಗಳಲ್ಲಿ ಸಾರ್ವಜನಿಕರಿಗೆ ಈ ಮಧುಮೇಹದ ಅಪಾಯಕಾರಿ ಅಂಶಗಳ ಬಗ್ಗೆ ತಿಳಿಹೇಳುವಂತಹ ಕಾರ್ಯಕ್ರಮಗಳಾಗಬೇಕು.ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಇತ್ತೀಚಿನ ದಿನಗಳಲ್ಲಿ ಇಂತಹ ಕಾರ್ಯಕ್ರಮಗಳ ಅವಶ್ಯಕತೆ ತುಂಬಾ ಇದೆ ಎಂದು ಹೇಳಿದರು.ಈ ವೇಳೆ ಆಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಉಪಾಧ್ಯಕ್ಷೆ ಶೋಭಾ ಚಿದಾನಂದ, ಡೀನ್ ನೀಲಾಂಬಿಕೈ ನಟರಾಜನ್ ಕಾರ್ಯಕ್ರಮದ ಮಹತ್ವದ ಬಗ್ಗೆ ಮಾಹಿತಿ ಹಂಚಿಕೊಂಡರು.ಕೆ.ವಿ.ಜಿ ಮೆಡಿಸಿನ್ ಅಸಿಸ್ಟೆಂಟ್ ಪ್ರೊ . ಸರ್ಫ್ರಾಜ್ ‘ಮಧುಮೇಹ ರೋಗದ ಲಕ್ಷಣ ಮತ್ತು ಮುನ್ನೆಚ್ಚರಿಕಾ ಕ್ರಮವನ್ನು’ ವಿವರಿಸಿದರು. ಈ ಸಂದರ್ಭ ಮೆಡಿಸಿನ್ ಮುಖ್ಯಸ್ಥ ಡಾ. ಸಿ. ಆರ್ ಭಟ್ , ಡಾ. ಪ್ರಕಾಶ್ ರಾವ್,ಡಾ ವೈಶಾಕ್, ಮೆಡಿಸಿನ್ ವಿದ್ಯಾರ್ಥಿ, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.