ನ್ಯೂಸ್ ನಾಟೌಟ್ : ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸಹಯೋಗದೊಂದಿಗೆ ವಿಶ್ವ ಹಿಂದೂ ಪರಿಷದ್ ಬಜರಂಗದಳ ಸುಳ್ಯ ಪ್ರಖಂಡ ಅಯೋಧ್ಯಾ ಬಲಿದಾನ್ ದಿವಸ್ ಅಂಗವಾಗಿ ರಕ್ತದಾನ ಶಿಬಿರ ಕಾರ್ಯಕ್ರಮ ನಡೆಯಿತು.
ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ಈ ಕಾರ್ಯಕ್ರಮದ ಉದ್ಘಾಟನೆಯನ್ನು ಬ್ಲಡ್ ಬ್ಯಾಂಕ್ ಮುಖ್ಯಸ್ಥೆ ಡಾ. ನವ್ಯ ಮತ್ತು ಪ್ಯಾಥಾಲಜಿ ಮುಖ್ಯಸ್ಥೆ ಸತ್ಯಾವತಿ ಆಳ್ವ ನೆರವೇರಿಸಿದರು. ಬಳಿಕ ಮಾತನಾಡಿದ ಪ್ಯಾಥಾಲಜಿ ಮುಖ್ಯಸ್ಥೆ ಸತ್ಯಾವತಿ ಆಳ್ವ “ರಕ್ತ ದಾನ ಶಿಬಿರ ಎಂಬುದು ದೇವರ ಸೇವೆಯಂತೆ, ಇನ್ನೊಬ್ಬರ ಜೀವ ಉಳಿಸುವ ಮಹತ್ವದ ಕಾರ್ಯ ಇದಾಗಿದೆ. ಇಂದು ಹಲವು ಯುವಕರು ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ಜೀವಉಳಿಸುವ ಕಾರ್ಯ ಮಾಡುತ್ತಿದ್ದಾರೆ” ಎಂದು ಹೇಳಿದರು.
ಬ್ಲಡ್ ಬ್ಯಾಂಕ್ ಮುಖ್ಯಸ್ಥೆ ಡಾ.ನವ್ಯ ಮಾತನಾಡಿ “ಪ್ರತಿ ವರ್ಷ ಕೂಡ ಕೆವಿಜಿಯಲ್ಲಿ ರಕ್ತದಾನ ಶಿಬಿರ ಕಾರ್ಯಕ್ರಮ ನಡೆಯುತ್ತಿರುತ್ತದೆ. ಅದರಲ್ಲೂ ವಿಶ್ವ ಹಿಂದೂ ಪರಿಷತ್ ಬಜರಂಗದಳ ಯುವಕರು ಹೆಚ್ಚಾಗಿ ರಕ್ತದಾನ ಮಾಡುತ್ತಿದ್ದಾರೆ. ಇನ್ನ ಕೂಡ ರಕ್ತದಾನ ಮಾಡಿ ಜೀವ ಉಳಿಸುವ ಪುಣ್ಯ ಕಾರ್ಯದಲ್ಲಿ ತೊಡಗಬೇಕು” ಎಂದರು.
ಪುತ್ತೂರು ಜಿಲ್ಲಾ ಬಜರಂಗದಳ ಸಹ ಸಂಚಾಲಕ ಲತೀಶ್ ಗುಂಡ್ಯ ಮಾತನಾಡಿ “ಅಯೋಧ್ಯಾ ಬಲಿದಾನ್ ಅಂಗವಾಗಿ ವಿಶ್ವ ಹಿಂದೂ ಪರಿಷದ್ ಬಜರಂಗದಳ ಸುಳ್ಯ ಪ್ರಖಂಡ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ಸಮಾಜ ಸೇವೆಯಲ್ಲಿ ಯುವಕರು ಪಾತ್ರರಾಗ ಬೇಕು” ಎಂದು ಹೇಳಿದರು.
ಸುಳ್ಯ ಪ್ರಖಂಡ ಬಜರಂಗದಳ ಅಧ್ಯಕ್ಷ ಸೋಮಶೇಖರ ಪೈಕ, ಕೆವಿಜಿ ಸೂಪರಿಂಟೆಂಡೆಂಟ್ ಡಾ.ದಿನೇಶ್, ಬಜರಂಗದಳ ತಾಲೂಕು ಸಂಚಾಲಕ ಹರಿಪ್ರಸಾದ್ ಎಲಿಮಲೆ, ಕಾರ್ಯಕರ್ತರು, ರಕ್ತದಾನಿಗಳು ಉಪಸ್ಥಿತರಿದ್ದರು.ವಿಶ್ವ ಹಿಂದೂ ಪರಿಷತ್ ಪ್ರಧಾನ ಕಾರ್ಯದರ್ಶಿ ನವೀನ್ ಎಲಿಮಲೆ ಸ್ವಾಗತಿಸಿ, ಸಂದೀಪ್ ವಳಲಂಬೆ ವಂದಿಸಿದರು.