ನ್ಯೂಸ್ ನಾಟೌಟ್ : ನವೆಂಬರ್ 11ರಂದು ಸುಳ್ಯದ ಕುಕ್ಕುಜಡ್ಕದಲ್ಲಿ ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಶಿಬಿರ ನಡೆಯಲಿದ್ದು,ಸಾರ್ವಜನಿಕರು ಇದರ ಪ್ರಯೋಜನ ಪಡೆಯುವಂತೆ ಸಂಘಟಕರು ಮನವಿ ಮಾಡಿದ್ದಾರೆ.
ಅಮರ ಸಂಘಟನಾ ಸಮಿತಿ (ರಿ.) ಸುಳ್ಯ ಇದರ ಆಶ್ರಯದಲ್ಲಿ ಭಾರತೀಯ ಅಂಚೆ ಇಲಾಖೆ ಹಾಗೂ ಅಮರಮುಡ್ನೂರು ಗ್ರಾಮ ಪಂಚಾಯತ್ ಸಹಕಾರದೊಂದಿಗೆ ಈ ಶಿಬಿರ ನೆರವೇರಲಿದೆ.ಅಮರಮುಡ್ನೂರು ಗ್ರಾಮ ಸಭಾಭವನ ಕುಕ್ಕುಜಡ್ಕದಲ್ಲಿ ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಶಿಬಿರ ಬೆಳ್ಳಿಗೆ 9 ರಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.