ನ್ಯೂಸ್ ನಾಟೌಟ್ : ಆಲೆಟ್ಟಿ ಗ್ರಾಮದ ಕಲ್ಚರ್ಪೆಯ ಸಿರಿ ಕುರಲ್ ನಗರದ ಶ್ರೀ ವನದುರ್ಗಾ ರಕ್ತೇಶ್ವರಿ ಪರಿವಾರ ದೈವಗಳ ಸೇವಾ ಟ್ರಸ್ಟ್ ಮತ್ತು ಉತ್ಸವ ಸಮಿತಿಯ ಆಶ್ರಯಲ್ಲಿ ಶ್ರೀ ವನದುರ್ಗಾ ರಕ್ತೇಶ್ವರಿ ಪರಿವಾರ ದೈವಗಳ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಗುಳಿಗ ದೈವದ ನೇಮೋತ್ಸವ ಡಿ.12 ರಂದು ನಡೆಯಲಿದೆ ಎಂದು ಶ್ರೀ ವನದುರ್ಗಾ ರಕ್ತೇಶ್ವರಿ ಪರಿವಾರ ದೈವಗಳ ಸೇವಾ ಟ್ರಸ್ಟ್ನ ಅಧ್ಯಕ್ಷ ಕೆ.ಗೋಕುಲ್ ದಾಸ್ ಹೇಳಿದ್ದಾರೆ.
ಸುಳ್ಯ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಡಿ.12 ರಂದು ಬೆಳಿಗ್ಗೆ 7.30ರಿಂದ ಸ್ಥಳ ಶುದ್ದಿ, ಗಣಹೋಮ, ವನದುರ್ಗಾ ಹೋಮ, ಆಶ್ಲೇಷ ಬಲಿ, ತಂಬಿಲ ಸೇವೆ ನಡೆಯಲಿದೆ.ಮಧ್ಯಾಹ್ನ 12.30ರಿಂದ ಮಹಾಪೂಜೆ, ಪ್ರಸಾದ ವಿತರಣೆ ,ಮಧ್ಯಾಹ್ನ 1ರಿಂದ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ ಎಂದರು. ಸಂಜೆ 6 ರಿಂದ ಗುಳಿಗ ದೈವದ ನೇಮ,ರಾತ್ರಿ 10ಕ್ಕೆ ಪ್ರಸಾದ ವಿತರಣೆ, ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ. ಬೆಳಿಗ್ಗೆ 7 ರಿಂದ ಸಂಜೆ 4 ಗಂಟೆಯ ತನಕ ನಿರಂತರ ಭಜನಾ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು. ಸಂಜೆ 4ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ಉತ್ಸವ ಸಮಿತಿಯ ಗೌರವಾಧ್ಯಕ್ಷ ವಾಸುದೇವ ಗೌಡ ಕುಡೆಕಲ್ಲು ಅಧ್ಯಕ್ಷತೆ ವಹಿಸುವರು. ಶ್ರೀ ವನದುರ್ಗಾ ರಕ್ತೇಶ್ವರಿ ಪರಿವಾರ ದೈವಗಳ ಸೇವಾ ಟ್ರಸ್ಟ್ನ ಅಧ್ಯಕ್ಷ ಕೆ.ಗೋಕುಲ್ ದಾಸ್ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕಿ ಭಾಗೀರಥಿ ಮುರುಳ್ಯ, ಆಲೆಟ್ಟಿ ಗ್ರಾಮ ಪಂಚಾಯತ್ ಅಧ್ಯಕ್ಷೆ ವೀಣಾ ಕುಮಾರಿ, ಎಪಿಎಂಸಿ ಮಾಜಿ ಅಧ್ಯಕ್ಷ ಎನ್.ಜಯಪ್ರಕಾಶ್ ರೈ, ನಗರ ಪಂಚಾಯತ್ ಸದಸ್ಯ ಎಂ.ವೆಂಕಪ್ಪ ಗೌಡ, ಸೂರ್ತಿಲ ಶ್ರೀ ರಕ್ತೇಶ್ವರಿ ಕ್ಷೇತ್ರದ ಅಧ್ಯಕ್ಷ ನಾರಾಯಣ ಕೇಕಡ್ಕ ಉತ್ಸವ ಸಮಿತಿ ಅಧ್ಯಕ್ಷ ಕರುಣಾಕರ ಪಾಲಡ್ಕ, ಪ್ರಗತಿಪರ ಕೃಷಿಕ ಪ್ರಭಾಕರ ರೈ ಪೆರಾಜೆ, ಲೋಕೇಶ್ ಸುಳ್ಳಿ, ಆಲೆಟ್ಟಿ ಗ್ರಾ.ಪಂ. ಸದಸ್ಯರಾದ ಸುಧೇಶ್ ಅರಂಬೂರು, ಪುಷ್ಪಾವತಿ ಕುಡೆಕಲ್ಲು, ಅನಿತಾ ಇಡ್ಯಡ್ಕ, ವೇದಾವತಿ, ಅರಂಬೂರು ಸ್ಥಾನದ ಮನೆಯ ರತೀಶನ್ ಭಾಗವಹಿಸಲಿದ್ದಾರೆ ಎಂದು ಗೋಕುಲ್ ದಾಸ್ ತಿಳಿಸಿದ್ದಾರೆ.