ನ್ಯೂಸ್ ನಾಟೌಟ್: ಸರ್ಕಾರಿ ಅಧಿಕಾರಿಗಳೆಂದ ಮೇಲೆ ವರ್ಗಾವಣೆ ಇದೆಲ್ಲ ಮಾಮೂಲಿ. ಇಂದು ಇಲ್ಲಿ ನಾಳೆ ಇನ್ನೆಲ್ಲೂ ಕೆಲಸ ಮಾಡಬೇಕಾದ ಅನಿವಾರ್ಯತೆ ಇದ್ದೇ ಇರುತ್ತೆ. ಆದರೆ ಇಲ್ಲೊಬ್ಬರು ಅಧಿಕಾರಿ ವರ್ಗಾವಣೆ ಆದೇಶವನ್ನು ಉಲ್ಲಂಘಿಸಿ ಮಂಗಳೂರಿನ ಕಚೇರಿಯಲ್ಲಿಯೇ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಬಗ್ಗೆ ವರದಿಯಾಗಿದೆ.
ಮಂಗಳೂರು ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರ ಕಚೇರಿ ಅಧೀಕ್ಷಕಿ ಕೆ ಎಸ್ ಪಾರ್ವತಿ ಅವರಿಗೆ ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ವರ್ಗಾವಣೆ ಆದೇಶವಾಗಿದೆ. ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯಕ್ಕೆ ವರ್ಗಾವಣೆ ಮಾಡಲಾಗಿದೆ. ವರ್ಗಾವಣೆ ಆದೇಶವಾದರೂ ಮಂಗಳೂರೇ ಬೇಕೆಂದು ಅಧಿಕಾರಿ ಪಟ್ಟು ಹಿಡಿದಿದ್ದಾರೆ ಎಂದು ತಿಳಿದು ಬಂದಿದೆ.
ಸುಳ್ಯ ತಾಲೂಕಿಗೆ ಅತ್ಯಂತ ಜರೂರಾಗಿ ಸಮಾಜಕಲ್ಯಾಣ ಇಲಾಖೆ ಅಧಿಕಾರಿ ಬೇಕಾಗಿದ್ದಾರೆ. ಕಳೆದ ಹಲವು ವರ್ಷಗಳಿಂದ ಹುದ್ದೆ ಖಾಲಿ ಬಿದ್ದಿದೆ. ಇದೀಗ ಸುಳ್ಯಕ್ಕೆ ಅಧಿಕಾರಿ ನೇಮಕವಾದರೂ, ಕರ್ತವ್ಯಕ್ಕೆ ಹಾಜರಾಗಿಲ್ಲ. ಇದರಿಂದ ಸಾರ್ವಜನಿಕರಿಗೂ ಕೆ.ಎಸ್.ಪಾರ್ವತಿ ಮೇಲೆ ಅಸಮಾಧಾನ. ಕಚೇರಿ ಸಮಯದಲ್ಲಿ ದಿನಂಪ್ರತಿ ಸೇವೆಗೆ ಲಭ್ಯವಿಲ್ಲದ ಕೆ.ಎಸ್. ಪಾರ್ವತಿ ಹತ್ತು ಗಂಟೆಗೆ ಕಚೇರಿ ಸಮಯ ಆರಂಭವಾದ್ರೂ ಮಧ್ಯಾಹ್ನದವರೆಗೂ ಕಚೇರಿಗೆ ಬಾರದೆ ಸಾರ್ವಜನಿಕರಿಗೆ ಸತಾಯಿಸುತ್ತಿರುವ ಅಧೀಕ್ಷಕಿ ಕೆ.ಎಸ್. ಪಾರ್ವತಿ ಮೇಲೆ ಅಸಮಾಧಾನಕ್ಕೆ ಕಾರಣವಾಗಿದೆ. ಅಷ್ಟಕ್ಕೂ ಕೆ.ಎಸ್. ಪಾರ್ವತಿ ಮಂಗಳೂರು ಕಚೇರಿಯನ್ನೇ ಪಟ್ಟುಹಿಡಿದು ಕುಳಿತಿರುವುದಾದ್ರೂ ಯಾಕೇ ಅನ್ನೊದು ಸಾರ್ವಜನಿಕರ ಪ್ರಶ್ನೆ…? ಮಂಗಳೂರಿನಿಂದ ಸುಳ್ಯ ತಾಲೂಕಿಗೆ ವರ್ಗಾವಣೆ ಆದೇಶವಿದ್ರೂ ಕುರ್ಚಿ ಬಿಟ್ಟು ಕದಲದ ಅಧೀಕ್ಷಕಿ. ಸರ್ಕಾರದ ವರ್ಗಾವಣೆ ಆದೇಶವನ್ನೇ ತಳ್ಳಿ ಹಾಕಿದ್ರಾ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.