ನ್ಯೂಸ್ ನಾಟೌಟ್ : ಗ್ರಾಮ ಡಿ ಜಿ ವಿಕಸನ ಕಾರ್ಯಕ್ರಮದಡಿಯಲ್ಲಿ ಸುಳ್ಯ ತಾಲೂಕಿನಲ್ಲಿ ಆಯ್ಕೆಯಾದ 8 ಗ್ರಾಮ ಪಂಚಾಯತ್ ಗ್ರಂಥಾಲಯಗಳಿಗೆ ಡಿಜಿಟಲ್ ಸಾಧನಗಳಾದನ್ನು ವಿತರಿಸಲಾಯಿತು.
ಶಿಕ್ಷಣ ಫೌಂಡೇಶನ್, ಡೆಲ್ ಸಂಸ್ಥೆ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆ ಸಹಯೋಗದೊಂದಿಗೆ ನಡೆಯುತ್ತಿರುವ ಗ್ರಾಮ ಡಿ ಜಿ ವಿಕಸನ ಕಾರ್ಯಕ್ರಮದ ಮೂಲಕ ಮೊಬೈಲ್ ಮತ್ತು ಸ್ಪೀಕರ್ ಡಿಜಿಟಲ್ ಸಾಧನಗಳನ್ನು ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಹಾಗೂ ಸುಳ್ಯ ತಾಲೂಕು ಕಾರ್ಯನಿರ್ವಹಣಾಧಿಕಾರಿಗಳದ ರಾಜಣ್ಣನ ಮೂಲಕ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಹಸ್ತಾಂತರಿಸಲಾಯಿತು.
ಸಂದರ್ಭದಲ್ಲಿ ಶಿಕ್ಷಣ ಫೌಂಡೇಶನ್ ನ ಗ್ರಾಮ ಡಿಜಿ ವಿಕಸನದ ಜಿಲ್ಲಾ ಸಂಯೋಜಕ ಲವಿಶ್ ಕುಮಾರ್ ಪಿ ಹಾಗೂ ತಾಲೂಕು ಸಂಯೋಜಕರಾದ ದಿನೇಶ್ ಡಿ ಎಸ್ ಉಪಸ್ಥಿತರಿದ್ದರು. ಗ್ರಾಮ ಡಿಜಿ ವಿಕಸನದ ಬಗ್ಗೆ ಮಾಹಿತಿ ಕಾರ್ಯಗಾರ ನಡೆಸಿದ್ದು,ಈ ವೇಳೆ ಗ್ರಂಥಾಲಯ ಮೇಲ್ವಿಚಾರಕರು, ತಾ.ಪಂ. ಸಿಬ್ಬಂದಿವರ್ಗ ಉಪಸ್ಥಿತರಿದ್ದರು ಎಂದು ವರದಿ ತಿಳಿಸಿದೆ.