ನ್ಯೂಸ್ ನಾಟೌಟ್: ಇತ್ತೀಚಿನ ದಿನಗಳಲ್ಲಿ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗುತ್ತಿರುವ ಪ್ರಕರಣಗಳು ದೇಶದಲ್ಲಿ ಹೆಚ್ಚುತ್ತಿವೆ. ಕೊನೆಗೆ ನಂಬಿದ ವ್ಯಕ್ತಿ ಮೋಸ ಮಾಡಿದಾಗ ನೊಂದು ಯುವತಿಯರು ವಿಷ ಸೇವಿಸಿ ಸಾವಿಗೆ ಶರಣಾಗುತ್ತಿರುವ ಘಟನೆ ಕೂಡ ಬೆಳಕಿಗೆ ಬರುತ್ತಿದೆ. ಅಂತಹುದೇ ಒಂದು ಪ್ರಕರಣ ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯದಿಂದ ವರದಿಯಾಗಿದೆ.
ಅಪ್ರಾಪ್ತ ಬಾಲಕಿಯನ್ನು ಆಟೋ ಚಾಲಕನೊಬ್ಬ ತನ್ನ ಕಾಮ ತೃಷೆಗೆ ಬಳಸಿಕೊಂಡು ಬಳಿಕ ಆಕೆಯೊಂದಿಗೆ ಮಾತನಾಡುವುದಕ್ಕೆ ನಿರಾಕರಿಸಿದ್ದಾನೆ. ಇದರಿಂದ ನೊಂದ ಯುವತಿ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯನ್ನು ಆಟೋ ಚಾಲಕನೊಬ್ಬ ಲವ್ ಮಾಡುತ್ತೇನೆಂದು ನಂಬಿಸಿದ್ದ. ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಲಾಡ್ಜ್ ವೊಂದಕ್ಕೆ ಕರೆದೊಯ್ದು ಕಳೆದ ಜೂನ್ ನಲ್ಲಿಯೇ ತನ್ನ ಆಸೆಯನ್ನು ತೀರಿಸಿಕೊಂಡಿದ್ದ. ಬಳಿಕ ಆಕೆಯೊಂದಿಗೆ ಮಾತನಾಡುವುದನ್ನು ದಿಢೀರ್ ನಿಲ್ಲಿಸಿದ್ದ. ಇದರಿಂದ ಮನನೊಂದು ಬಾಲಕಿ ವಿಷ ಸೇವಿಸಿದ್ದಳು. ಸದ್ಯ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಫೋಕ್ಸೊ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ. ಮೂಲಗಳ ಪ್ರಕಾರ ಆಟೋ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.