ನ್ಯೂಸ್ ನಾಟೌಟ್ : ವಿವಿಧತೆಯಲ್ಲಿ ಏಕತೆಯನ್ನು ಹೊಂದಿದ ದೇಶ ನಮ್ಮದು. ಈ ನಾಡಿನ ಸಂಸ್ಕೃತಿಯ ಸಾರ ಕರ್ನಾಟಕದಲ್ಲಿದೆ. ಕರ್ನಾಟಕದ ಸಂಸ್ಕೃತಿಯ ಸಾರ ದಕ್ಷಿಣ ಕನ್ನಡದಲ್ಲಿದೆ. ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ಈ ಸಂಸ್ಕೃತಿ ಅನುರಣಿಸಿದೆ ಎಂದು ವಿಧಾನ ಸಭೆಯ ಸ್ಪೀಕರ್ ಯು.ಟಿ. ಖಾದರ್ ತಿಳಿಸಿದರು.
ಪುತ್ತೂರಿನಲ್ಲಿ ಸೋಮವಾರ ರೈ ಎಸ್ಟೇಟ್ ಎಜ್ಯುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಜನಸೇವಾ ಕೇಂದ್ರದ ವತಿಯಿಂದ ಆಯೋಜಿಸಿದ ಸೇವಾ ಸೌರಭ ವಸ್ತ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಬಡಜನರ ಬಗೆಗಿನ ಕಾಳಜಿಯಿಂದ ಅಶೋಕ್ ರೈ ಅವರಿಗೆ ಇಂತಹ ಕಾರ್ಯ ಮಾಡಲು ಸಾಧ್ಯವಾಗಿದೆ. ಶಾಸಕರಿಂದ ಇನ್ನಷ್ಟು ಪುಣ್ಯ ಕಾರ್ಯಗಳು ನಡೆಯಲಿ ನಾವೆಲ್ಲ ಜೊತೆ ಜೊತೆಯಾಗಿ ಮುನ್ನಡೆಯೋಣ. ಪುತ್ತೂರಿನ ಜನತೆ ಶಾಂತಿಪ್ರೀಯರು. ನಾವೆಲ್ಲರೂ ಒಗ್ಗಟ್ಟಾಗಿ ಇಲ್ಲಿನ ಅಶೋಕ್ ರೈ ಅವರಿಗೆ ಬೆಂಬಲ ನೀಡಿ, ಶಾಂತಿ ಸ್ಥಾಪಿಸುವುದಕ್ಕೆ ಸಹಕಾರ ನೀಡಬೇಕು. ಶಾಸಕ ಅಶೋಕ್ ರೈ ಅವರಿ ಈ ಕಾರ್ಯ ಇಡೀ ರಾಜ್ಯಕ್ಕೆ ಮಾದರಿಯಾಗಿದೆ.
ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯರಾದ ಹರೀಶ್ ಕುಮಾರ್, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಕಾಂಗ್ರೆಸ್ ಮುಖಂಡರಾದ ಕಾವು ಹೇಮನಾಥ ಶೆಟ್ಟಿ, ಎಂ.ಎಸ್. ಮಹಮ್ಮದ್ ಮತ್ತಿತರರು ಇದ್ದರು.