ನ್ಯೂಸ್ ನಾಟೌಟ್ : ಒಂಬತ್ತು ದಿನಗಳ ಕಾಲ ನಡೆದ ವೈಭವದ ಸುಳ್ಯ ದಸರಾ ಕಾರ್ಯಕ್ರಮಕ್ಕೆ ಅದ್ದೂರಿ ತೆರೆ ಎಳೆಯಲಾಗಿದೆ.ಈ ಕಾರ್ಯಕ್ರಮದ ಯಶಸ್ಸಿಗೆ ವೈಶಿಷ್ಟಪೂರ್ಣ ಸೌಂಡ್ಸ್ ಮತ್ತು ಲೈಟಿಂಗ್ಸ್ ವ್ಯವಸ್ಥೆ ಮಾಡಿ ಶಾಫಿ ಪೈಚಾರ್ರವರು ವಿಶೇಷವಾಗಿ ಎಲ್ಲರ ಗಮನವನ್ನು ಸೆಳೆದರು..!
ಒಂದು ಕಾರ್ಯಕ್ರಮ ಯಶಸ್ಸಾಗಬೇಕಾದರೆ ಎಲ್ಲರ ಸಹಕಾರ ತುಂಬಾನೇ ಮುಖ್ಯ.ಅದರಲ್ಲೂ ವಿಶೇಷವಾಗಿ ಸುಳ್ಯ ದಸರಾದಂತಹ ಕಾರ್ಯಕ್ರಮದಲ್ಲಿ ಸೌಂಡ್ಸ್ ಮತ್ತು ಲೈಟಿಂಗ್ಸ್ ಪಾತ್ರ ಪ್ರಮುಖವಾಗಿದ್ದು,ಕಾರ್ಯಕ್ರಮವು ಮತ್ತಷ್ಟು ಅಬ್ಬರಿಸುವಂತೆ ಮಾಡಿತ್ತು. ಈ ಹಿನ್ನಲೆಯಲ್ಲಿ ವೈಶಿಷ್ಟಪೂರ್ಣ ಸೌಂಡ್ಸ್ ಮತ್ತು ಲೈಟಿಂಗ್ಸ್ ವ್ಯವಸ್ಥೆಯನ್ನು ಮಾಡಿ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದ ಪ್ರಗತಿ ಸೌಂಡ್ಸ್ ಮಾಲಕ ಶಾಫಿ ಪೈಚಾರ್ ರವರಿಗೆ ದಸರಾ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಸಮಿತಿಯ ಪದಾಧಿಕಾರಿಗಳು ಗೌರವಿಸಿದರು.
ಶುಕ್ರವಾರ ನಡೆದ ಸಂಗೀತ ರಸಮಂಜರಿ ಕಾರ್ಯಕ್ರಮಕ್ಕೆ ವಿಶೇಷವಾದ ಆಕರ್ಷಣೀಯವಾದ ಧ್ವನಿ, ಬೆಳಕಿನ ವ್ಯವಸ್ಥೆ ಮಾಡಿದ್ದು,ಸಾವಿರಾರು ಮಂದಿಯ ಮೆಚ್ಚುಗೆಗೂ ಕಾರಣವಾಯಿತು.
ಈ ವೇಳೆ ಸಮಿತಿಯ ಪದಾಧಿಕಾರಿಗಳಾದ ಕೆ.ಗೋಕುಲ್ ದಾಸ್, ನಾರಾಯಣ ಕೇಕಡ್ಕ, ಚಿದಾನಂದ ವಿದ್ಯಾನಗರ, ನವೀನ್ ಚಂದ್ರ ಬೆಂಗಳೂರು, ಬೂಡು ರಾಧಾಕೃಷ್ಣ ರೈ, ರವಿಚಂದ್ರ ಕೊಡಿಯಾಲ ಬೈಲು, ಚಂದ್ರಶೇಖರ ಪಂಡಿತ್, ಪುರುಷೋತ್ತಮ ಉಪಸ್ಥಿತರಿದ್ದರು.