ನ್ಯೂಸ್ ನಾಟೌಟ್: ಕೆಲವು ಸಲ ಸ್ಪರ್ಧೆಗಳು ವಿಜೇತರನ್ನು ನಿರ್ಧರಿಸುತ್ತದೆ. ಇನ್ನೂ ಕೆಲವು ಸಲ ಸ್ಪರ್ಧೆಗಳು ಎದುರಾಳಿಗಳನ್ನು ಮುಗಿಸುವುದಲ್ಲದೆ ತಾವೂ ಕೂಡ ಮುಳುಗುವಂತೆ ಮಾಡುತ್ತದೆ. ಈ ಮಾತನ್ನು ಯಾಕೆ ಇಲ್ಲಿ ಉಲ್ಲೇಖಿಸಲಾಗಿದೆ ಅಂದ್ರೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸಂಪಾಜೆಯ ಕಲ್ಲುಗುಂಡಿಯಲ್ಲಿ ಕೋಳಿ ಅಂಗಡಿಗಳ ನಡುವೆ ತೀವ್ರ ಪೈಪೋಟಿ ಶುರುವಾಗಿದ್ದು ಅಗ್ಗದ ದರಕ್ಕೆ ಕೋಳಿ ಮಾಂಸ ಸಿಗುವಂತಾಗಿದೆ.
ಹೌದು, ನಿನ್ನಿಂದ ಕಡಿಮೆ ನಾನು, ಅವನಿಂದ ಕಡಿಮೆಗೆ ಇವನು ಅನ್ನುವ ಪರಿಸ್ಥಿತಿ ಕೋಳಿ ಮಾಂಸದ ದರ ನಿಗದಿಯಾಗುತ್ತಿದೆ. ದಿನಕ್ಕೊಂದು ರೀತಿಯಲ್ಲಿ ದರ ಕಡಿಮೆಯಾಗುತ್ತಿದೆ. ಕಲ್ಲುಗುಂಡಿಯಲ್ಲಿ ಕೆ.ಜಿ. ಕೋಳಿಗೆ ಕೇವಲ 78 ರೂ. ಆಗಿದ್ದು ಅಂಗಡಿಯವರು ಸ್ಪರ್ಧೆಗೆ ಬಿದ್ದಿದ್ದಾರೆ. ಇದರಿಂದ ಗ್ರಾಹಕರು ಮಾತ್ರ ಭರ್ಜರಿ ಲಾಭ ಪಡೆದುಕೊಳ್ಳುತ್ತಿದ್ದಾರೆ. ಇಬ್ಬರ ಜಗಳದಲ್ಲಿ ಮೂರನೆಯವನಿಗೆ ಲಾಭ ಎನ್ನುವಂತೆ ಗ್ರಾಹಕ ತರಕಾರಿ ಬಿಟ್ಟು ಬಾಡೂಟದ ಕಡೆಗೆ ಈಗ ಹೆಚ್ಚುಆಸಕ್ತಿ ವಹಿಸುತ್ತಿದ್ದಾನೆ ಎಂದು ಸ್ಥಳೀಯರೊಬ್ಬರು ನ್ಯೂಸ್ ನಾಟೌಟ್ ಗೆ ತಿಳಿಸಿದ್ದಾರೆ.
ಈ ದರ ಕಡಿಮೆ ಆಗುವುದರ ಹಿಂದೆ ತಮಿಳುನಾಡಿನಲ್ಲಿ ಕೋಳಿ ಉದ್ಯಮಕ್ಕೆ ಅತಿ ವೃಷ್ಟಿಯಿಂದ ಆಗಿರುವ ಹಿನ್ನಡೆ ಎಂದು ಹೇಳಲಾಗುತ್ತಿದೆ. ಈ ಸ್ಪರ್ಧೆ ಮುಂದೆ ಎಲ್ಲಿ ಹೋಗಿ ಮುಟ್ಟುತ್ತದೋ ಗೊತ್ತಿಲ್ಲ. ಒಟ್ಟಿನಲ್ಲಿ ಕೋಳಿ ಪೈಪೋಟಿಯಿಂದ ಜನ ಮಾತ್ರ ಫುಲ್ ಖುಷಿಯಾಗಿದ್ದಾರೆ.
- +91 73497 60202
- [email protected]
- November 23, 2024 7:25 AM