ನ್ಯೂಸ್ ನಾಟೌಟ್: ಎಂಬಿಬಿಎಸ್ ವಿದ್ಯಾರ್ಥಿನಿ (MBBS student) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳೂರಿನಿಂದ ವರದಿಯಾಗಿತ್ತು.ಇದೀಗ ಈ ಘಟನೆಗೆ ಸಂಬಂಧ ಪಟ್ಟ ಹಾಗೆ ಡೆತ್ ನೋಟ್ ಪತ್ತೆಯಾಗಿದ್ದು,ತಾನು ದಪ್ಪಗಿದ್ದೇನೆ ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದೇನೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ.
ವೈದ್ಯಕೀಯ ವಿದ್ಯಾರ್ಥಿನಿಯಾಗಿದ್ದ ಈಕೆ ಮುಂದೆ ಡಾಕ್ಟರ್ (doctor) ಆಗಿ ರೋಗಿಗಳ (patients) ಪ್ರಾಣವನ್ನು ಕಾಪಾಡಬೇಕಾದ ಮಹತ್ತರ ಜವಾಬ್ದಾರಿ ಹೊತ್ತಿದ್ದವಳು. ಆದರೆ ಆ ಒಂದು ಸಣ್ಣ ಕಾರಣಕ್ಕಾಗಿ ತನ್ನ ಪ್ರಾಣವನ್ನೇ ಕಳೆದು ಕೊಂಡಿದ್ದು ಮಗಳನ್ನು ಕಳೆದು ಕೊಂಡು ಕುಟುಂಬಸ್ಥರು ಕಣ್ಣೀರಲ್ಲಿ ಕಾಲ ಕಳೆಯುವಂತಾಗಿದೆ.ತಮ್ಮ ಮೆಡಿಕಲ್ ಕಾಲೇಜ್ ಹಾಸ್ಟೆಲ್ನ 6ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ (Suicide) ಮಾಡಿಕೊಂಡಿದ್ದ ಈಕೆ ಆತ್ಮಹತ್ಯೆಗೂ ಮುನ್ನ ಸುದೀರ್ಘ ಡೆತ್ ನೋಟ್ (Death Note) ಬರೆದಿಟ್ಟಿದ್ದಾಳೆ ಎನ್ನಲಾಗಿದೆ. “ನಾನು ತುಂಬಾ ದಪ್ಪ (Fat) ಇದ್ದೇನೆ, ನನ್ನ ಸೌಂದರ್ಯಕ್ಕೆ (Beauty) ದಪ್ಪ ಅನ್ನೋದು ಅಡ್ಡಿಯಾಗಿದೆ. ಇದೇ ಕಾರಣಕ್ಕೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ” ಅಂತ ಬರೆದಿದ್ದಾಳೆ ಎನ್ನಲಾಗಿದೆ..!