ನ್ಯೂಸ್ ನಾಟೌಟ್: ವಿಶ್ವ ಕಂಡ ಅತ್ಯುತ್ತಮ ಕ್ಯಾಪ್ಟನ್ ಅಂದ್ರೆ ಅದು ಧೋನಿ.ಇವರ ನಾಯಕತ್ವದಲ್ಲಿ ಟೀಮ್ ಇಂಡಿಯಾ ಟಿ೨೦ ವಿಶ್ವಕಪ್,ಒಡಿಐ ವಿಶ್ವಕಪ್ ಮತ್ತು ಐಸಿಸಿ ಚಾಂಪಿಯನ್ಸ್ ಟ್ರೋಫಿ ಸೇರಿದಂತೆ ಎಲ್ಲಾ ಮೂರು ಪ್ರಮುಖ ಐಸಿಸಿ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ.ಇನ್ನು ಧೋನಿಯವರು ಪ್ರಾಣಿ-ಪಕ್ಷಿ ಪ್ರಿಯರೂ ಕೂಡ.ಮೋಟಾಸೈಕಲ್ಗಳು ಹಾಗೂ ಕಾರುಗಳ ಬಗ್ಗೆ ಎಂಎಸ್ ಧೋನಿ ಅವರ ಕ್ರೇಜ್ ಎಲ್ಲರಿಗೂ ತಿಳಿದಿದೆ.ಅವರು ತಮ್ಮ ಗ್ಯಾರೇಜ್ನಲ್ಲಿ ಹಲವಾರು ಆಕರ್ಷಕ ವಾಹನಗಳ ಸಂಗ್ರಹವನ್ನು ಹೊಂದಿದ್ದಾರೆ. ಇದೀಗ ಅಂಥದ್ದೇ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಅದರ ವಿಡಿಯೋ ಸಕತ್ ವೈರಲ್ ಆಗಿದೆ.ಇತ್ತೀಚೆಗೆ ಅವರ ಅಭಿಮಾನಿಯೊಬ್ಬರ ಬೈಕ್ ಮೇಲೆ ಸಹಿ ಹಾಕುವ ವೇಳೆಯೂ ಅವರು ಅದರ ಮೇಲೆ ಪ್ರೀತಿ ತೋರಿಸುವ ಮೂಲಕ ಅಭಿಮಾನಿಗಳ ಶಹಬ್ಬಾಸ್ಗಿರಿ ಪಡೆದುಕೊಂಡಿದ್ದಾರೆ.
ವೀಡಿಯೊದಲ್ಲಿ,ಎಂಎಸ್ ಧೋನಿ ಅಭಿಮಾನಿಯೊಬ್ಬರು ಮೋಟಾರ್ಸೈಕಲ್ ಮೇಲೆ ಆಟೋಗ್ರಾಫ್ ಹಾಕೋದಕ್ಕೆ ವಿನಂತಿ ಮಾಡುತ್ತಾರೆ.ಆಗ ಧೋನಿಯವರು ಮೊದಲು ಬೈಕಿನ ಮುಂಭಾಗದ ಪ್ರದೇಶವನ್ನು ಕ್ಲೀನ್ ಮಾಡುತ್ತಾರೆ.ತಾವು ಯಾವ ಟೀ ಶರ್ಟನ್ನು ಹಾಕಿದ್ದಾರೋ ಅದೇ ಟೀ ಶರ್ಟ್ ಮೂಲಕ ಒರೆಸುವುದನ್ನು ಕಾಣಬಹುದು. ಆಟೋಗ್ರಾಫ್ ನಂತರ ಧೋನಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸವಾರನ ಸೀಟಿನಲ್ಲಿ ಕುಳಿತು ಅದನ್ನು ಪರಿಶೀಲಿಸುವುದನ್ನೂ ಕಾಣಬಹುದು. ಅದರನ್ನು ಆನ್ ಮಾಡಿ ಎಂಜಿನ್ ನ ಶಬ್ದವನ್ನು ಆನಂದಿಸುತ್ತಿದ್ದಂತೆ ಅಭಿಮಾನಿಯ ಮುಖದಲ್ಲಿ ನಗು ಬೀರುತ್ತದೆ.
ಯಮಹಾ, ಡುಕಾಟಿ, ಕವಾಸಕಿ ಮುಂತಾದ ಪ್ರಸಿದ್ಧ ಬ್ರಾಂಡ್ ಗಳು ಧೋನಿ ಅವರ ಆಕರ್ಷಕ ಬೈಕ್ ಗಳ ಸಂಗ್ರಹದಲ್ಲಿವೆ ಎಂದು ಹೇಳಲಾಗಿದೆ. 2019 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾದ ನಂತರವೂ ಎಂಎಸ್ ಧೋನಿ ಇಂಡಿಯನ್ ಪ್ರೀಮಿಯರ್ ಸಿಎಸ್ಕೆ ತಂಡದಲ್ಲಿ ಮುಂದುವರಿದಿದ್ದಾರೆ. ಈ ಮೂಲಕ ತಮ್ಮ ಕ್ರಿಕೆಟ್ ಪ್ರಯಾಣವನ್ನು ಮುಂದುವರಿಸಿದ್ದಾರೆ. ಐಪಿಎಲ್ 2023 ಬಹುಶಃ ಅವರ ಕೊನೆಯ ಸೀಸನ್ ಆಗಿರಬಹುದು ಎಂಬ ಊಹಾಪೋಹಗಳ ಹೊರತಾಗಿಯೂ, ಧೋನಿ, ಫ್ರಾಂಚೈಸಿಗಾಗಿ ದಾಖಲೆಯ ಐದನೇ ಪ್ರಶಸ್ತಿಯನ್ನು ಪಡೆಯುವಲ್ಲಿ ಅವರ ನಾಯಕತ್ವ ಯಶಸ್ಸು ಕಂಡಿತು. ಇದೀಗ ಮುಂದಿನ ಆವೃತ್ತಿಯಲ್ಲೂ ಆಡುವ ಇಚ್ಛೆ ವ್ಯಕ್ತಪಡಿಸುವ ಮೂಲಕ ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿದ್ದಾರೆ.ಒಟ್ಟಿನಲ್ಲಿ ಅತ್ಯಂತ ನಿಪುಣ ಭಾರತೀಯ ನಾಯಕನಾಗಿ ಧೋನಿ ಅವರ ಸ್ಥಾನಮಾನವು ಅಪ್ರತಿಮವಾಗಿ ಉಳಿದಿದೆ, ಅವರ ಗಮನಾರ್ಹ ಸಾಧನೆಗಳು ಇತಿಹಾಸದಲ್ಲಿ ಅಳಿಸಲಾಗದ ಗುರುತನ್ನು ಉಳಿಸಿದೆ.