ನ್ಯೂಸ್ ನಾಟೌಟ್: ಮಂಗನ ದಾಳಿಯಿಂದ ವ್ಯಕ್ತಿಯೊಬ್ಬರು ಪ್ರಾಣವನ್ನೇ ಕಳೆದುಕೊಂಡ ಘಟನೆ ಹೊನ್ನಾಳಿ ತಾಲೂಕಿನ ಅರೆಕೆರೆ ಕಾಲನಿಯಲ್ಲಿ ನಡೆದಿದೆ.
ಹೊನ್ನಾಳಿ ಪಿಎಲ್ಡಿ ಬ್ಯಾಂಕ್ ಉಪಾಧ್ಯಕ್ಷ ಅರೆಕೆರೆ ಗುತ್ಯಪ್ಪ (66) ಕೊನೆಯುಸಿರೆಳೆದ ವ್ಯಕ್ತಿ ಎಂದು ಗುರುತಿಸಲಾಗಿದೆ.
ಭಾನುವಾರ(ನ.12) ತಡರಾತ್ರಿ ಸುಮಾರು 1 ಘಂಟೆಯಲ್ಲಿ ಮೂತ್ರ ವಿಸರ್ಜನೆಗೆ ಹೊರ ಬಂದಾಗ ಏಕಾಏಕಿ ಮಂಗ ದಾಳಿ ಮಾಡಿದೆ. ಅರೆಕೆರೆ ಪ್ರದೇಶವು ಹರಿಹರದಿಂದ ಹೊನ್ನಾಳಿ ಹೋಗುವ ಮಾರ್ಗದಲ್ಲಿ ಮಂಗದ ದಾಳಿಯಿಂದ ವ್ಯಕ್ತಿಯೊಬ್ಬರು ಕೊನೆಯುಸಿರೆಳೆದಿದ್ದಾರೆ ಎಂದು ಅರಣ್ಯ ಇಲಾಖೆಯು ಹೇಳಿದೆ.
‘ದಾಳಿಯ ಪರಿಣಾಮ ಗುತ್ಯಪ್ಪ ಮುಂಗೈಯ ರಕ್ತನಾಳಕ್ಕೆ ಏಟಾದ ಕಾರಣ ಸ್ಥಳದಲ್ಲೇ ಬಹಳಷ್ಟು ರಕ್ತಸ್ರಾ* ವ ಆಗಿದೆ.’ಎನ್ನಲಾಗಿದೆ.
ಗ್ರಾಮಸ್ತರು ಕೂಡಲೆ ಗ್ರಾಮಸ್ಥರು ಪಟ್ಟಣದ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿದರು. ಹೆಚ್ಚು ರ* ಕ್ತ ಸ್ರಾವ ಉಂಟಾಗಿದ್ದರಿಂದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ರಾತ್ರಿಯ ವೇಳೆ ಭಯ ಪಟ್ಟು ಈ ಸ್ಥಿತಿ ಆಗಿರಬಹುದು ಎಂದು ಊಹಿಸಲಾಗಿದೆ.