ನ್ಯೂಸ್ ನಾಟೌಟ್ : ಜನಪ್ರೀಯ ನಪ್ರಿಯ ಡ್ರಗ್ಸ್ಗೆ ಮಾರು ಹೋಗಿ ತೂಕ ಇಳಿಸಿಕೊಳ್ಳಲು ಮುಂದಾದ ಮಹಿಳೆಯೊಬ್ಬರು ಜೀವ ಕಳೆದುಕೊಂಡಿರುವ ಘಟನೆ ವರದಿಯಾಗಿದೆ.
ಮಗಳ ಮದುವೆ ಸಡಗರದಲ್ಲಿದ್ದ ಮಹಿಳೆ ತೂಕ ಕಡಿಮೆ ಮಾಡಿಕೊಂಡು ಚೆನ್ನಾಗಿ ಕಾಣುವ ಆಸೆಯಲ್ಲಿದ್ದ ತಾಯಿ ಕೊನೆಯುಸಿರೆಳೆದ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ. ಈ ಉತ್ಸಾಹದಲ್ಲಿಯೇ ಡ್ರಗ್ಸ್ ತೆಗೆದುಕೊಂಡು ಜೀವವನ್ನೇ ಕಳೆದುಕೊಂಡಿದ್ದಾರೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
ಆಸ್ಟ್ರೇಲಿಯಾದ ತ್ರಿಷ್ ವೆಬ್ ಸ್ಟರ್ (56) ಎಂಬುವವರು ಈಗಾಗಲೇ ಜಗತ್ತಿನಾದ್ಯಂತ ಜನಪ್ರಿಯವಾಗಿರುವ ಒಜೆಂಪಿಕ್(Ozempic) ಎನ್ನುವ ಡ್ರಗ್ಸ್ ಅನ್ನು ತೂಕ ಇಳಿಸಲು ಪಡೆದುಕೊಂಡಿದ್ದರು. ಇದು ಮಧುಮೇಹ ಹಾಗೂ ತೂಕ ಇಳಿಕೆಗೆ ಬಳಸುವ ಔಷಧ. ಆದರೆ ಇದು ಆಕೆ ಉದರಸಂಬಂಧಿ ಕಾಯಿಲೆಗೆ ಕಾರಣವಾಗಿ ಕೊನೆಯುಸಿರೆಳೆದಿದ್ದಾರೆ.
ಈ ಸಂಬಂಧ ಆಕೆಯ ಗಂಡ ದೂರು ನೀಡಿದ್ದು, ಇಂತಹ ಡ್ರಗ್ಸ್ಗಳು ಎಲ್ಲರಿಗೂ ಆಗುವುದಿಲ್ಲ. ಬಳಸುವ ಮುನ್ನ ಎಚ್ಚರಿಕೆ ವಹಿಸಿ ಎಂದು ತಿಳಿಸಿದ್ದಾರೆ.
ಒಜೆಂಪಿಕ್(Ozempic) ಜಗತ್ತಿನ ಹಲವು ದೇಶಗಳಲ್ಲಿ ತೂಕ ಇಳಿಸಲು ಬಳಕೆಯಾಗುತ್ತಿರುವ ಡ್ರಗ್ಸ್ಗಳಲ್ಲಿ ಪ್ರಮುಖ ಹೆಸರು ಪಡೆದಿದೆ. ಬಹಳಷ್ಟು ತಜ್ಞರು ಇದನ್ನು ಬಳಸುವಂತೆ ಸಲಹೆ ನೀಡುತ್ತಾರೆ. ಇದು ಜಿಎಲ್ಪಿ1 ಹಾರ್ಮೋನ್ ರೀತಿ ಕೆಲಸ ಮಾಡುತ್ತದೆ. ಅಂದರೆ ಹೊಟ್ಟೆ ಹಾಗೂ ಅನ್ನನಾಳದಲ್ಲಿಯೇ ಆಹಾರ ನಿಧಾನವಾಗಿ ಪಚನವಾಗುವಂತೆ ಇದು ಮಾಡಿ ಮಧುಮೇಹಿಗಳಿಗೆ ಹಸಿವೆಯಾಗದಂತೆ ನೋಡಿಕೊಳ್ಳುತ್ತದೆ ಎನ್ನಲಾಗಿದೆ.
ಇದು ಆಹಾರ ಪಚನ ನಿಧಾನ ಮಾಡುವುದರಿಂದ ಬೇರೆ ರೀತಿಯ ಸಮಸ್ಯೆಗಳಿಗೂ ದಾರಿ ಮಾಡಿಕೊಡಲಿದೆ. ಅಂದರೆ ಗ್ಯಾಸ್ಟ್ರೋ ಸಮಸ್ಯೆಯೂ ಉಂಟಾಗಿ ತೊಂದರೆಗಳಾಗಬಹುದು.
ಅದರಲ್ಲೂ ಬರುವ ಜನವರಿಯಲ್ಲಿ ಮಗಳ ಮದುವೆ ಇದ್ದುದರಿಂದ ಬೇಗನೇ ತೂಕ ಕಡಿಮೆಯಾಗಲಿ ಎಂದು ಅವರು ಬಯಸಿದ್ದರು. ಆದರೆ ಎರಡು ದಿನದ ಹಿಂದೆ ಏಕಾಏಕಿ ಕುಸಿದು ಬಿದ್ದ ವೆಬ್ಸ್ಟರ್ ಬಾಯಿಯಲ್ಲಿ ನೊರೆ ಬಂದಿತ್ತು. ಆನಂತರ ಉಸಿರಾಟದ ಸಮಸ್ಯೆಯೂ ಎದುರಾಯಿತು. ಕೂಡಲೇ ಆಸ್ಪತ್ರೆಗೆ ಕರೆ ತಂದರೂ ಆಕೆ ಬದುಕುಳಿಯಲಿಲ್ಲ. ವೈದ್ಯರು ಉದರ ಸಂಬಂಧಿ ಸಮಸ್ಯೆಯಿಂದ ಕೊನೆಯುಸಿರೆಳೆದಿದ್ದಾರೆ.