ನ್ಯೂಸ್ ನಾಟೌಟ್: ಕನ್ನಡದ ಹಿರಿಯ ನಟಿ ಲೀಲಾವತಿ (Actress Leelavathi) ಯವರ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದು, ಇತ್ತೀಚೆಗೆ ನಟ ದರ್ಶನ್, ಅಲ್ಲು ಅರ್ಜುನ್ ಸೇರಿದಂತೆ ಖ್ಯಾತ ನಟರು ಲೀಲಾವತಿ ಮನೆಗೆ ಭೇಟಿ ನೀಡಿದ್ದರು.
ಈಗ ಸೆಂಚುರಿ ಸ್ಟಾರ್ ಡಾ. ಶಿವರಾಜ್ ಕುಮಾರ್ ಭೇಟಿ ನೀಡಿ ಆರೋಗ್ಯ ವಿಚಾರಿಸಿ ಲೀಲಾವತಿ ಮಗ ವಿನೋದ್ ಕುಮಾರ್ ಜೊತೆ ಮಾತನಾಡಿ ತೆರಳಿದರು.
ಡಾ. ರಾಜ್ಕುಮಾರ್ ಹಿರಿಯ ಪುತ್ರ ನಟ ಶಿವರಾಜ್ ಕುಮಾರ್ ಹಾಗೂ ಪತ್ನಿ ಗೀತಾ ಶಿವರಾಜ್ ಕುಮಾರ್, ಲೀಲಾವತಿಯವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಹಿರಿಯ ನಟಿ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಕೆಲ ದಿನಗಳಿಂದ ಅನಾರೋಗ್ಯದಿಂದ (Illness) ಬಳಲುತ್ತಿರುವ ಲೀಲಾವತಿಗೆ ನೆಲಮಂಗಲದ ಬಳಿಯ ಅವರ ತೋಟದ ಮನೆಯಲ್ಲಿಯೇ ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿ ತಿಳಿಸಿದೆ.
ವಿನೋದ್ ನೋಡಿದಾಗ ಅವರ ತಾಯಿಯನ್ನು ನೋಡಿದ ಹಾಗೆ ಆಗುತ್ತೆ. ಜನರ ಪ್ರೀತಿ ನನ್ನ ವಿನೋದ್ ಕುಟುಂಬದ ಮೇಲಿದೆ. ಯಾರೇ ಬಂದ್ರು ತಾಯಿ ಮೇಲೆ ಪ್ರೀತಿ ಯಾವತ್ತೂ ಕಡಿಮೆ ಆಗಲ್ಲ. ನನ್ನ ತಂದೆ-ತಾಯಿ ಬೇರೆ ಅಲ್ಲಾ ವಿನೋದ್ ತಾಯಿ ಬೇರೆ ಅಲ್ಲ. ನನ್ನ ಮಗಳ ಮದುವೆ ಕಾರ್ಡ್ ಕೊಡೋಕೆ ವಿನೋದ್ ಮನೆಗೆ ಬಂದಿದ್ದೆ. ನಾವು ಯಾವಾಗಲು ಸಿಗೋದಿಲ್ಲ ಸಿಕ್ಕಾಗ ಆ ಕ್ಷಣ ನಮ್ಮದು ಎಂದು ಶಿವರಾಜ್ ಕುಮಾರ್ ಹೇಳಿಕೊಂಡಿದ್ದಾರೆ.
Follow us for more updates:
FB PAGE : https://www.facebook.com/NewsNotOut2023
Insta : https://www.instagram.com/newsnotout/
Tweet : https://twitter.com/News_Not_Out
YouTube : https://www.youtube.com/@newsnotout8209
Koo app: https://www.kooapp.com/profile/NewsNotOut
Website : https://newsnotout.com/