- +91 73497 60202
- [email protected]
- November 22, 2024 11:25 PM
ನ್ಯೂಸ್ ನಾಟೌಟ್ : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ) ಮೊದಲ ಬಾರಿಗೆ ಲಾಜಿಸ್ಟಿಕ್ಸ್ ಸೇವೆಯನ್ನು ಆರಂಭಿಸುತ್ತಿದೆ. ಇದಕ್ಕಾಗಿಯೇ ವಿಶೇಷ ಲಾರಿಗಳನ್ನು ವಿನ್ಯಾಸಗೊಳಿಸಲಾಗಿದೆ. ಡಿಸೆಂಬರ್ 15ರಂದು ಈ ಲಾರಿಗಳ ಸಂಚಾರಕ್ಕೆ ಹಸಿರು ನಿಶಾನೆ ತೋರಿಸಲಾಗುತ್ತದೆ ಎಂದು ನಿಗಮ ಹೇಳಿದೆ. ‘ಕೆಎಸ್ಆರ್‌ಟಿಸಿ ನಮ್ಮ ಕಾರ್ಗೋ ನಿಮ್ಮ ವಿಶ್ವಾಸ, ನಮ್ಮ ಕಾಳಜಿ’ ಹೆಸರಿನ ಸರಕು ಸಾಗಣೆ ಸೇವೆಗಾಗಿಯೇ ಲಾರಿಗಳನ್ನು ವಿನ್ಯಾಸಗೊಳಿಸಲಾಗಿದೆ. ಸರಕು ಸಾಗಣೆ ಕ್ಷೇತ್ರದಲ್ಲಿ ಹೊಸ ಇತಿಹಾಸ ಬರೆಯಲು ನಿಗಮ ಸಜ್ಜಾಗಿದೆ ಎನ್ನಲಾಗಿದೆ. ಸಾರ್ವಜನಿಕ ಸಾರಿಗೆ ಕ್ಷೇತ್ರದಲ್ಲಿ ತನ್ನ ಸೇವೆಗಳ ಮೂಲಕ ಜನಪ್ರಿಯವಾಗಿರುವ ಕೆಎಸ್ಆರ್‌ಟಿಸಿ ಈಗ ಸರಕು-ಸಾಗಣೆ ಕ್ಷೇತ್ರಕ್ಕೆ ಕಾಲಿಡಲಿದೆ. ಡಿಸೆಂಬರ್ 15ರಂದು ಲಾಜಿಸ್ಟಿಕ್ ಸೇವೆ ನೀಡುವ ಕೆಎಸ್ಆರ್‌ಟಿಸಿ ಲಾರಿಗಳನ್ನು ಲೋಕಾರ್ಪಣೆ ಮಾಡಲಾಗುತ್ತದೆ. ಕೆಎಸ್ಆರ್‌ಟಿಸಿ ನಮ್ಮ ಕಾರ್ಗೋ ಯೋಜನೆಯನ್ನು ಪ್ರಾಯೋಗಿಕವಾಗಿ ಆರಂಭಿಸಲಾಗುತ್ತಿದೆ. ಈ ಯೋಜನೆ ಯಶಸ್ವಿಯಾದರೆ ಸರಕು ಸಾಗಣೆಗಾಗಿಯೇ ಹೆಚ್ಚಿನ ಲಾರಿಗಳನ್ನು ಖರೀದಿ ಮಾಡಲು ಯೋಜಿಸಲಾಗುತ್ತದೆ ಎಂದು ವರದಿ ತಿಳಿಸಿದೆ. ಲಾಜಿಸ್ಟಿಕ್ ಸೇವೆ ಮೂಲಕ ಸುಮಾರು 100 ಕೋಟಿ ಆದಾಯ ಸಂಗ್ರಹ ಮಾಡಬಹುದು ಎಂದು ಕೆಎಸ್ಆರ್‌ಟಿಸಿ ನಿರೀಕ್ಷೆ ಮಾಡಿದೆ. ಕೆಎಸ್ಆರ್‌ಟಿಸಿ ಬಸ್‌ಗಳ ನಿರ್ವಹಣೆ ಮಾಡುವ ಮಾದರಿಯಲ್ಲಿಯೇ ಸರಕು ಸಾಗಿಸುವ ಲಾರಿಗಳನ್ನು ನಿರ್ವಹಿಸಲು ಯೋಜನೆ ರೂಪಿಸಿದೆ. ಸುಮಾರು 17.03 ಲಕ್ಷ ರೂ. ದರದಲ್ಲಿ 3.4 ಕೋಟಿ ರೂಪಾಯಿ ವೆಚ್ಚದಲ್ಲಿ 20 ಲಾರಿಗಳನ್ನು ಖರೀದಿ ಮಾಡಲಾಗಿದ್ದು, ವಿನ್ಯಾಸವೂ ಸಹ ಪೂರ್ಣಗೊಂಡಿದೆ ಎಂದು ವರದಿ ತಿಳಿಸಿದೆ.
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ