ನ್ಯೂಸ್ ನಾಟೌಟ್:ಸಾಮಾನ್ಯವಾಗಿ ಶಾಲಾ ಮಕ್ಕಳು ಶಾಲೆಯಲ್ಲಿ ಕಾರ್ಯಕ್ರಮಗಳಾದಾಗ ಶಿಕ್ಷಕರು ಮತ್ತು ಪೋಷಕರನ್ನು ಮನರಂಜಿಸೋದು ಸಾಮಾನ್ಯ,ಆದ್ರೆ ಈ ಒಂದು ಶಾಲೆಯಲ್ಲಿ ಮಕ್ಕಳನ್ನೇ ಶಿಕ್ಷಕರು ನೃತ್ಯದ ಮೂಲಕ ರಂಜಿಸಿ ಭಾರಿ ಸುದ್ದಿಯಾಗಿದ್ದಾರೆ..!
ಹೌದು,ಮಡಿಕೇರಿಯ ಸುಂಟಿಕೊಪ್ಪದ ಸಮೀಪ ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗುರುವಾರ ಮಕ್ಕಳ ದಿನವನ್ನು ಅದ್ದೂರಿಯಿಂದ ಆಚರಿಸಲಾಯಿತು.ಸಂತ ಅಂತೋಣಿ ದೇವಾಲಯದ ಧರ್ಮಗುರು ರೆ.ಫಾ.ಅರುಳ್ ಸೆಲ್ವಕುಮಾರ್ ನೇತೃತ್ವದಲ್ಲಿ ಮುಖ್ಯ ಶಿಕ್ಷಕ ಸೆಲ್ವರಾಜ್ ಹಾಗೂ ಎಲ್ಲ ಶಿಕ್ಷಕರು ಆಕರ್ಷಕ ನೃತ್ಯದ ಮೂಲಕ ಮಕ್ಕಳನ್ನು ರಂಜಿಸಿದರು.ಕೇವಲ ಪಾಠದ ಮಾಡುತ್ತಿದ್ದ ಶಿಕ್ಷಕರು ಪಾಠದ ಜೊತೆಯಲ್ಲಿ ನೃತ್ಯಕ್ಕೂ ನಾವು ಸೈ ಎಂಬುದನ್ನು ತಮ್ಮ ವಿದ್ಯಾರ್ಥಿಗಳ ಮುಂದೆ ನಿರೂಪಿಸಿದರು.ತಮ್ಮ ಗುರುಗಳ ನೃತ್ಯವನ್ನು ನೋಡಿದ ಪುಟಾಣಿ ಮಕ್ಕಳು ಫುಲ್ ಸಂತಸ ವ್ಯಕ್ತ ಪಡಿಸಿದ್ರು.
ಮಕ್ಕಳ ದಿನಾಚರಣೆಯ ಅಂಗವಾಗಿ ಶಾಲಾ ವಿದ್ಯಾರ್ಥಿಗಳು ಬಣ್ಣ ಬಣ್ಣ ವಸ್ತ್ರ ಧರಿಸಿ ಸಂಭ್ರಮಿಸಿದ್ರು.ಇದಾದ ನಂತರ ಪುಟಾಣಿ ಮಕ್ಕಳಿಗೆ ವಿವಿಧ ಸ್ಪರ್ಧೆ ಹಾಗೂ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.