ನ್ಯೂಸ್ ನಾಟೌಟ್ : ಕೊಡಗಿನ ವಿರಾಜಪೇಟೆ ಸಮೀಪದ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಾನೆಯೊಂದು ಮನೆಯೊಂದರ ಆವರಣದಲ್ಲಿಯೇ ಮರಿ ಹಾಕಿರುವ ಘಟನೆ ವರದಿಯಾಗಿದೆ.ಕರಡ ಗ್ರಾಮದ ಕೀಮಲೆ ಕಾಡುವಿನಲ್ಲಿ ಕಾಡಾನೆಯೊಂದು ಸೋಮವಾರ ತಡರಾತ್ರಿ ಮರಿ ಹಾಕಿದ್ದು, ಈ ಸುದ್ದಿ ಕೇಳಿ ಜನ ತಂಡೋಪತಂಡವಾಗಿ ಆಗಮಿಸಿದರು.
ಇದರಿಂದ ವಿಚಲಿತವಾದ ಕಾಡಾನೆಯು ಮರಿಯಾನೆಯನ್ನೇ ಬಿಟ್ಟು ತೆರಳಿರುವ ಘಟನೆ ವರದಿಯಾಗಿದೆ.ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿಯು ಮರಿಯಾನೆಯೊಂದಿಗೆ ಕಾಡಾನೆಯನ್ನು ಹುಡುಕಾಡಿದ ಪ್ರಸಂಗ ನಡೆಯಿತು. ಈ ಕುರಿತು ಮಾತನಾಡಿದ ಆರ್ಎಫ್ಒ ದೇವಯ್ಯ, ಹೆಚ್ಚು ಜನ ಸೇರಿದ್ದರಿಂದ ತಾಯಿ ಆನೆ ಸ್ಥಳದಿಂದ ಹೊರಟಿದೆ. ಕಾಫಿತೋಟದಲ್ಲಿ ತೀರಾ ಇಳಿಜಾರು ಇದ್ದು, ಮರಿಯಾನೆಯೊಂದಿಗೆ ತಾಯಿ ಆನೆಯನ್ನು ಹುಡುಕುತ್ತಿದ್ದೇವೆ. ತಾಯಿ ಆನೆ ಜತೆ ಮರಿಯಾನೆಯನ್ನು ಸೇರಿಸಬೇಕಿದೆ ಎಂದು ಅಭಿಪ್ರಾಯ ಪಟ್ಟರು.