ನ್ಯೂಸ್ ನಾಟೌಟ್ :ಕೇರಳದಲ್ಲಿ ಬಾಲಕಿಯೊಬ್ಬಳ ಅಪಹರಣವಾಗಿದ್ದು,ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸುವ ಘಟನೆ ವರದಿಯಾಗಿದೆ. 10 ಲಕ್ಷ ಹಣಕ್ಕಾಗಿ ಬಾಲಕಿಯ ಅಪಹರಣವಾಗಿದೆ ಎನ್ನುವ ಆಘಾತಕಾರಿ ವಿಷಯ ಬಹಿರಂಗಗೊಂಡಿದೆ.
ಸೋಮವಾರದಂದು ದಕ್ಷಿಣ ಕೇರಳದ ಪೂಯಪ್ಪಲ್ಲಿಯಿಂದ ಆರು ವರ್ಷದ ಬಾಲಕಿ ಅಪಹರಣವಾಗಿದ್ದಳು.ಈ ಬಗ್ಗೆ ಆತಂಕ ಹೆಚ್ಚುತ್ತಿದ್ದಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ತನಿಖೆಯನ್ನು ತೀವ್ರಗೊಳಿಸುವಂತೆ ರಾಜ್ಯ ಪೊಲೀಸರಿಗೆ ಸೂಚನೆಯನ್ನೂ ನೀಡಿದ್ದಾರೆ.ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಅಪಹರಣದ ಕುರಿತು ಮಾಹಿತಿ ಪಡೆದುಕೊಂಡ ಮುಖ್ಯಮಂತ್ರಿಗಳು ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ತ್ವರಿತಗತಿಯಲ್ಲಿ ತನಿಖೆ ನಡೆಸುವಂತೆ ನಿರ್ದೇಶನ ನೀಡಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಮಾತನಾಡಿದ್ದು,”ಪೊಲೀಸರು ಅಪಹರಣವಾದ ಬಾಲಕಿಯ ಪತ್ತೆಗೆ ಪೊಲೀಸರು ತಂಡ ರಚನೆ ಮಾಡಿದ್ದು ಶೀಘ್ರದಲ್ಲಿ ಬಾಲಕಿ ಪತ್ತೆಯಾಗಲಿದೆ.ಯಾರು ಕೂಡ ದಯವಿಟ್ಟು ಸುಳ್ಳು ಸುದ್ದಿಯನ್ನು ಹರಡಿಸಬೇಡಿ ಎಂದು ಜನರಲ್ಲಿ ವಿನಂತಿಸಿದ್ದಾರೆ.ಇದರ ನಡುವೆ ಅಪಹರಣಕಾರರಿಂದ ಬಾಲಕಿಯ ಪೋಷಕರಿಗೆ ಮತ್ತೊಂದು ಕರೆ ಬಂದಿದ್ದು ಇದರಲ್ಲಿ ನೀಡಿದ ಮಾಹಿತಿಯ ಮೇರೆಗೆ ಬಾಲಕಿ ಸುರಕ್ಷಿತವಾಗಿದ್ದು 10 ಲಕ್ಷ ನೀಡುವಂತೆ ಅಪಹರಣಕಾರರು ಬೇಡಿಕೆ ಇಟ್ಟಿದ್ದು ಹಣ ಸಿಕ್ಕಿದ ಕೂಡಲೇ ಬಾಲಕಿ ಸುರಕ್ಷಿತವಾಗಿ ಹಿಂತಿರುಗಿಸಲಾಗುವುದು” ಎಂದು ಹೇಳಿದ್ದಾರೆ ಎನ್ನಲಾಗಿದೆ.
ಈ ನಡುವೆ ಪೊಲೀಸರಿಗೆ ಮಾಹಿತಿ ನೀಡದಂತೆ ಅಪಹರಣಕಾರರು ಪೋಷಕರಿಗೆ ಎಚ್ಚರಿಕೆಯನ್ನೂ ನೀಡಿದ್ದಾರೆ.ಸದ್ಯ ಪೊಲೀಸರು ಅಪಹರಣವಾದ ಕೆಲವೇ ಹೊತ್ತಿನಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ನಖಾಬಂಧಿ ನಡೆಸಿ ವಾಹನ ತಪಾಸಣೆ ನಡೆಸಿದ್ದಾರೆ ಆದರೆ ಆರೋಪಿಗಳ ಪತ್ತೆ ಮಾತ್ರ ಸಾಧ್ಯವಾಗಲಿಲ್ಲ.