Kantara-1: ರಿಷಬ್​ ಪತ್ನಿ ನಟಿಸಲಿದ್ದಾರಾ..? ಈ ಬಗ್ಗೆ ಪ್ರಗತಿ ಶೆಟ್ಟಿ ಹೇಳಿದ್ದೇನು?

ನ್ಯೂಸ್ ನಾಟೌಟ್ : ಇಂದು (ನವೆಂಬರ್​ 27) ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ‘ಕಾಂತಾರ’ ಪ್ರೀಕ್ವೆಲ್​ಗೆ ಮುಹೂರ್ತ ಮಾಡಲಾಗಿದೆ. ಈ ಸಂದರ್ಭದಲ್ಲಿ ಪ್ರಗತಿ ಶೆಟ್ಟಿ ಮಾಧ್ಯಮಗಳ ಜೊತೆ ಮಾತನಾಡಿ ಚಿತ್ರದ ಬಗೆಗಿನ ಕುತೂಹಲ ಮತ್ತಷ್ಟು ಹೆಚ್ಚಿಸಿದ್ದಾರೆ. ‘ಕಳೆದ ಬಾರಿಯಂತೆ ನಾನು ಈ ಬಾರಿ ಕೂಡ ಕಾಸ್ಟ್ಯೂಮ್​ ಡಿಸೈನರ್​ ಆಗಿ ಕೆಲಸ ಮಾಡುತ್ತೇನೆ. ರಿಷಬ್​ ಶೆಟ್ಟಿ ಜೊತೆ ನಾನು ಯಾವಾಗಲೂ ಇರುತ್ತೇನೆ. ನನಗೆ ಈ ಚಿತ್ರದಲ್ಲಿ ಪಾತ್ರ ಇದೆಯೋ ಇಲ್ಲವೋ ಎಂಬುದು ಇನ್ನೂ ಗೊತ್ತಿಲ್ಲ ಎಂದು ಹೇಳಿದ್ದಾರೆ. ಮುಂದೆ ರಿಷಬ್​ ಏನಾದರೂ ಹೇಳಿದರೆ ನನಗೆ ಸಿನಿಮಾದಲ್ಲಿ ಪಾತ್ರ ಇರಬಹುದು. ಸದ್ಯಕ್ಕೆ ನನ್ನ ಕಡೆಯಿಂದ ಕಾಸ್ಟ್ಯೂಮ್​ ಕೆಲಸಗಳು ಮಾತ್ರ ನಡೆಯುತ್ತಿವೆ’ ಎಂದು ಪ್ರಗತಿ ಶೆಟ್ಟಿ (Pragathi Shetty) ಹೇಳಿದ್ದಾರೆ. ಈ ಚಿತ್ರಕ್ಕೆ ಹೊಂಬಾಳೆ ಫಿಲ್ಮ್ಸ್​ ಸಂಸ್ಥೆ ಮೂಲಕ ವಿಜಯ್​ ಕಿರಗಂದೂರು ಬಂಡವಾಳ ಹೂಡುತ್ತಿದ್ದು, ಕಾಂತಾರ 1 ಫಸ್ಟ್ ಲುಕ್ ಬಳಿಕ ಎಲ್ಲರಲ್ಲೂ ಮತ್ತುಷ್ಟು ಕುತೂಹಲ ಹೆಚ್ಚಾಗಿದೆ.