ನ್ಯೂಸ್ ನಾಟೌಟ್ : ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯದ ಬಿ.ಎ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರು ಮಂಗಳೂರು ವಿಶ್ವವಿದ್ಯಾನಿಲಯದ ಮೂರನೇ ಸೆಮಿಷ್ಟರ್ ಪದವಿ ಪರೀಕ್ಷೆಯಲ್ಲಿ 60 ರಲ್ಲಿ 60 ಅಂಕಗಳನ್ನು ಪಡೆದು ಇಬ್ಬರು ವಿದ್ಯಾರ್ಥಿನಿಯರು ಈ ಸಾಧನೆ ಮಾಡಿದ್ದಾರೆ ಎಂದು ವರದಿ ತಿಳಿಸಿದೆ.
ಬಿ.ಎ ತರಗತಿ ವಿದ್ಯಾರ್ಥಿಗಳಾದ ಕುಮಾರಿ ದಿವ್ಯ ಕೆ ಎಸ್ ಮತ್ತು ಕುಮಾರಿ ಶರಣ್ಯ ಅರ್ಥಶಾಸ್ತ್ರ ಮತ್ತು ಗಣಿತ ಶಾಸ್ತ್ರ, ವಿಷಯದಲ್ಲಿ ಈ ಸಾಧನೆ ಮಾಡಿದ್ದಾರೆ.
ಕುಮಾರಿ ದಿವ್ಯ ಕೆ.ಎಸ್ ಕರಿಕೆಯ ಕೆ .ಪಿ ಸುಂದರ ಮತ್ತು ಕೆ.ಎಸ್ ನಾಗವೇಣಿ ದಂಪತಿಗಳ ಪುತ್ರಿಯಾಗಿದ್ದು, ಕುಮಾರಿ ಶರಣ್ಯ ಅಡೂರು ಕೊಪ್ಪಲ ನಿವಾಸಿ ಸಂಜೀವ ಪಿ ಶ್ರೀಮತಿ ಸಾವಿತ್ರಿ ದಂಪತಿಗಳ ಪುತ್ರಿ ಎಂದು ಕಾಲೇಜು ಮಾಹಿತಿ ನೀಡಿದೆ.
ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಕಾಲೇಜಿನ ಪ್ರಾಂಶುಪಾಲ ಶ್ರೀ ಸತೀಶ್ ಕುಮಾರ್ ಕೆ ಆರ್ ಐ.ಕ್ಯೂ.ಎ.ಸಿ ಸಂಚಾಲಕರಾದ ಡಾ ಜಯಶ್ರೀ ಕೆ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಉದಯಶಂಕರ್ ಹೆಚ್, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಅಭಿನಂದಿಸಿ, ಭವಿಷ್ಯವು ಉಜ್ವಲವಾಗಲೆಂದು ಹಾರೈಸಿದರು ಎನ್ನಲಾಗಿದೆ.