ನ್ಯೂಸ್ ನಾಟೌಟ್ : ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧ ನಿಲ್ಲುವ ಸೂಚನೆ ಕಾಣುತ್ತಿಲ್ಲ, ಅಕ್ಟೋಬರ್ 7ರಂದು ಹಮಾಸ್ನ ದಾಳಿಯಲ್ಲಿ ಸುಮಾರು 1500 ಇಸ್ರೇಲಿಗರು ದುರಂತ ಅಂತ್ಯಕಂಡಿದ್ದರು. ಇದಕ್ಕೆ ಪ್ರತಿಯಾಗಿ ಇಸ್ರೇಲ್ನ IDF ಹಮಾಸ್ನ ನೆಲೆಯಾದ ಗಾಜಾ ಪಟ್ಟಿ ಮೇಲೆ ಬೃಹತ್ ವಿನಾಶವನ್ನು ಸೃಷ್ಟಿಸಿದ್ದು ಇದರಲ್ಲಿ 10,000 ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯಾದವರು ಕೊನೆಯುಸಿರೆಳೆದಿದ್ದರು.
ಇಸ್ರೇಲ್ನ ದಾಳಿ ಇನ್ನೂ ಮುಂದುವರೆದಿದ್ದು ವೈಮಾನಿಕ ದಾಳಿಯ ಜೊತೆಗೆ, ಅದು ಗಾಜಾವನ್ನು ಪ್ರವೇಶಿಸಿ ಮಿಲಿಟರಿ ಸಂಕೀರ್ಣವನ್ನು ವಶಪಡಿಸಿಕೊಂಡಿದೆ. ಈ ಯುದ್ಧದ ಮಧ್ಯೆ, ಇಸ್ರೇಲ್ನಲ್ಲಿ ಭಾರತೀಯ ಕಾರ್ಮಿಕರಿಗೆ ಉದ್ಯೋಗಾವಕಾಶಗಳು ಹೆಚ್ಚಾಗಿವೆ.
ಇಸ್ರೇಲಿ ನಿರ್ಮಾಣ ವಲಯದಲ್ಲಿ ಪಾಲೆಸ್ಟೈನ್ ಕಾರ್ಮಿಕರ ಬದಲಿಗೆ 100,000 ಭಾರತೀಯ ಕಾರ್ಮಿಕರನ್ನು ನೇಮಿಸಿಕೊಳ್ಳಲು ಸರ್ಕಾರದಿಂದ ಅನುಮತಿಯನ್ನು ಕೋರಲಾಗಿದೆ ಎಂದು ವರದಿ ತಿಳಿಸಿದೆ.
ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧದಲ್ಲಿ, ಎರಡೂ ಕಡೆಯವರು ಭಾರಿ ನಷ್ಟವನ್ನು ಅನುಭವಿಸಿದ್ದಾರೆ. ಇದರೊಂದಿಗೆ, ನಿರ್ಮಾಣ ಮತ್ತು ಇತರ ಚಟುವಟಿಕೆಗಳ ಮೇಲೂ ಪರಿಣಾಮ ಬೀರುತ್ತಿದೆ.
ಅಲ್ಲಿ 90,000 ಕಾರ್ಮಿಕರ ಕೊರತೆ ದಾಖಲಾಗಿದೆ. ಇದನ್ನು ಸರಿದೂಗಿಸಲು ಇಸ್ರೇಲಿ ಬಿಲ್ಡರ್ ಅಸೋಸಿಯೇಷನ್ ಭಾರತೀಯ ಕಾರ್ಮಿಕರನ್ನು ನೇಮಿಸಿಕೊಳ್ಳಲು ಅನುಮತಿಗಾಗಿ ದೇಶದ ಸರ್ಕಾರದ ಮುಂದೆ ಬೇಡಿಕೆಯನ್ನು ಇರಿಸಿದೆ. ಇನ್ನು ಭಾರತ ಸರ್ಕಾರದೊಂದಿಗೆ ಮಾತುಕತೆ ಕೂಡ ನಡೆಯುತ್ತಿದೆ ಇಸ್ರೇಲ್ ತಿಳಿಸಿದೆ.