ನ್ಯೂಸ್ ನಾಟೌಟ್: ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಸಂತಸದ ಸುದ್ದಿಯೊಂದು ಹೊರಬಿದ್ದಿದೆ. ಕರ್ನಾಟಕ ಎಜ್ಯುಕೇಷನಲ್ ಪ್ರಶಸ್ತಿ ಪಡೆದು ಉದ್ಯೋಗಕಾಂಕ್ಷಿಗಳ ಬದುಕಲ್ಲಿ ಹೊಸ ಭರವಸೆ ಮೂಡಿಸಿರುವ ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆ ಮತ್ತೊಂದು ಸುವರ್ಣಾವಕಾಶದೊಂದಿಗೆ ನಿಮ್ಮ ಮುಂದಿದೆ.
ಹೌದು, ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರದಿಂದ ನೇಮಕಾತಿಯಾಗಲಿರುವ ಎಫ್.ಡಿ.ಎ/ಎಸ್.ಡಿ.ಎ/ಪಿಡಿಒ/ಪಂಚಾಯತ್ ಕಾರ್ಯದರ್ಶಿ/ದ್ವಿತೀಯ ದರ್ಜೆ ಎಕೌಂಟ್ ಅಸಿಸ್ಟೆಂಟ್ ಇತ್ಯಾದಿ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗಳಿಗೆ ಉಚಿತ ತರಬೇತಿಗೆ ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆ ವತಿಯಿಂದ ಅರ್ಜಿ ಅಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು 30-11-2023 ಕೊನೆಯ ದಿನಾಂಕವಾಗಿದ್ದು ಆಸಕ್ತ ಸ್ಪರ್ಧಾರ್ಥಿಗಳು ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ, ಅಗತ್ಯ ದಾಖಲಾತಿಗಳೊಂದಿಗೆ ದಿನಾಂಕ 30-11-2023 ರ ಒಳಗೆ ಅರ್ಜಿ ಸಲ್ಲಿಸಬೇಕು. (ಸೀಮಿತ ದಾಖಲಾತಿಗಳು ಮಾತ್ರ).
ಆಸಕ್ತರು ಪುತ್ತೂರು ಮತ್ತು ಸುಳ್ಯದಲ್ಲಿ ಕಾರ್ಯಾಚರಿಸುತ್ತಿರುವ ಐ.ಆರ್.ಸಿ.ಎಂ.ಡಿ ಎಜುಕೇಷನ್ ಸೆಂಟರ್ನ ದೂರವಾಣಿ ಸಂಖ್ಯೆ 9945988118 / 9632320477 ನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಉದ್ಯೋಗ ಮಾರ್ಗದರ್ಶನದೊಂದಿಗೆ ಗುಣಮಟ್ಟದ ತರಬೇತಿಗೆ ಹೆಸರುವಾಸಿಯಾದ ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯು 2010ರಲ್ಲಿ ಸ್ಥಾಪನೆಗೊಂಡು ಪುತ್ತೂರು ಮತ್ತು ಸುಳ್ಯದಲ್ಲಿ ಕಾರ್ಯಾಚರಿಸುತ್ತಿದೆ.
ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಣ ಸಂಸ್ಥೆಯಾಗಿರುವ ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯಲ್ಲಿ ಕಂಪ್ಯೂಟರ್ ಕೋರ್ಸ್, ಬ್ಯಾಂಕಿಂಗ್ ಪ್ರವೇಶ ಪರೀಕ್ಷಾ ತರಬೇತಿ ಮತ್ತು ಇತರೆ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗಳಿಗೆ ನುರಿತ ತರಬೇತುದಾರರಿಂದ ತರಬೇತಿ ನೀಡಲಾಗುತ್ತಿದೆ.