ನ್ಯೂಸ್ ನಾಟೌಟ್:ಶಿಕ್ಷಕರು ಅಂದ್ರೆ ದೇವರಿಗೆ ಸಮಾನ.ಗುರುಗಳನ್ನು ಶಿಷ್ಯರು ಪೂಜ್ಯ ಭಾವನೆಯಿಂದ ನೋಡುತ್ತಾರೆ.ಒಬ್ಬ ವಿದ್ಯಾರ್ಥಿಯ ತಪ್ಪು ,ಅಂಕು ಡೊಂಕುಗಳನ್ನು ಸರಿಪಡಿಸಿ ಸಮಾಜದಲ್ಲಿ ಸತ್ಪ್ರಜೆಯಾಗಿ ರೂಪುಗೊಳ್ಳುವಂತೆ ಮಾಡುವಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾದುದು.ಆದರೆ ಇಲ್ಲೊಬ್ಬ ನೀಚ ಶಿಕ್ಷಕನ ಕೃತ್ಯಕ್ಕೆ ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಾಗಿದೆ.
7 ವರ್ಷದ ಮುಗ್ಧ ಬಾಲಕಿ.ಶಾಲೆಯ ಮೆಟ್ಟಿಲು ಹತ್ತಿ ಆ ವಾತಾವರಣಕ್ಕೆ ಒಗ್ಗಿಕೊಂಡು ಹೋಗುತ್ತಿದೆಯಷ್ಟೇ.ಅಷ್ಟರಲ್ಲಾಗಲೇ ಕಾಮುಕ ಶಿಕ್ಷಕ ಆಕೆ ಮೇಲೆ ಒಂದು ಕಣ್ಣನ್ನು ಇರಿಸುತ್ತಾನೆ.ಪಾಠ ಮಾಡಲೆಂದು ಶಾಲೆಗೆ ಹೋಗಬೇಕಾದ ಶಿಕ್ಷಕ ಬಾಲಕಿಯನ್ನು ಬಳಸಿಕೊಂಡು ತನ್ನ ಕಾಮತೃಷೆಯನ್ನು ತೀರಿಸಿಕೊಳ್ಳುತ್ತಿದ್ದ.ಹೌದು, ಆ ಬಾಲಕಿ ಮೇಲೆ ನಿರಂತರ ಮೇಲೆರಗುತ್ತಿದ್ದ ಕಾಮುಕ ಶಿಕ್ಷಕನನ್ನು ಇದೀಗ ಪೊಲೀಸರು ಬಂಧಿಸಿರುವ ಘಟನೆ ದಾವಣಗೆರೆ (Davanagere) ನಗರದ ಸರ್ಕಾರಿ ಶಾಲೆಯೊಂದರಲ್ಲಿ (Government School) ನಡೆದಿದೆ.
ಕಳೆದ ಎರಡು ದಿನಗಳ ಹಿಂದೆ ಬಾಲಕಿ ಅನಾರೋಗ್ಯಕ್ಕೆ (Illness) ತುತ್ತಾದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ತಿಳಿದು ಬಂದಿದೆ.ದಾವಣಗೆರೆ ನಗರದ ಸರ್ಕಾರಿ ಶಾಲೆಯ ಶಿಕ್ಷಕನೊಬ್ಬ ಹಲವು ದಿನಗಳಿಂದ ಬಾಲಕಿ ಮೇಲೆ ಎರಗುತ್ತಿದ್ದ. ಯಾರಿಗೂ ಹೇಳದಂತೆ ಆಕೆಗೆ ಬೆದರಿಕೆ ಹಾಕಿದ್ದ. ಆದ್ರೆ ಕಳೆದ ಎರಡು ದಿನಗಳ ಹಿಂದೆ ಬಾಲಕಿ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ವೈದ್ಯರ ತಪಾಸಣೆ ವೇಳೆ ಆಕೆ ಮೇಲೆ ಆತ ಬಲತ್ಕಾರ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಕೂಡಲೇ ಪೋಷಕರು ಕಾಮುಕ ಶಿಕ್ಷಕನ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೋಷಕರ ದೂರಿನನ್ವಯ ಪೋಕ್ಸೋ ಪ್ರಕರಣದ ಅಡಿ ಕೇಸ್ ದಾಖಲಿಸಿದ ಪೊಲೀಸರು ಶಿಕ್ಷಕನನ್ನು ಬಂಧಿಸಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಬಾಲಕಿಗೆ ಚಿಕಿತ್ಸೆ ನೀಡಲಾಗುತ್ತಿದೆ.